ಕೋಶ, ವಿದ್ಯುತ್

ರಾಸಾಯನಿಕಶಕ್ತಿಯನ್ನು ವಿದ್ಯುಚ್ಛಕ್ತಿಯಾಗಿ ಪರಿವರ್ತಿಸುವ ಒಂದು ಸಾಧನ (ಸೆಲ್, ಎಲೆಕ್ಟ್ರಿಕ್,) ಒಂದಕ್ಕಿಂತ ಹೆಚ್ಚು ಕೋಶಗಳ ಗುಂಪಿಗೆ ವಿದ್ಯುತ್ ಕೋಶಾವಳಿ (ಎಲೆಕ್ಟ್ರಿಕ್ ಬ್ಯಾಟರಿ) ಎಂದು ಹೆಸರು.  ಇಂಗ್ಲಿಷ್ ಭಾಷೆಯಲ್ಲಿ ಸೆಲ್ ಮತ್ತು ಬ್ಯಾಟರಿ ಎಂಬ ಪದಗಳನ್ನು ಅನೇಕ ವೇಳೆ ಪರ್ಯಾಯ ಪದಗಳಾಗಿ ಬಳಸುವ ರೂಢಿ ಉಂಟು.  ಕೋಶದಲ್ಲಿ ವಿದ್ಯುದುತ್ಪಾದನೆಯಾಗುವಾಗಿನ ರಾಸಾಯನಿಕ ಕ್ರಿಯೆಯಿಂದಾಗಿ ಅದರಲ್ಲಿ ಉಪಯೋಗಿಸಿದ ವಸ್ತುಗಳ ಭೌತ ಮತ್ತು ರಾಸಾಯನಿಕ ಗುಣಗಳಲ್ಲಿ ಬದಲಾವಣೆಗಳಾಗುತ್ತವೆ.  ಅಂತ್ಯದಲ್ಲಿ ರಾಸಾಯನಿಕ ವಸ್ತುಗಳು ಪೂರ್ತಿಯಾಗಿ ಬದಲಾವಣೆ ಹೊಂದುವುದರಿಂದ ವಿದ್ಯುತ್ ಪೂರೈಕೆ ನಿಲ್ಲುತ್ತದೆ.  ವಿದ್ಯುದ್ರಾಸಾಯನಿಕ ಕ್ರಿಯೆಗಳು ವಿಪರ್ಯಯ ಕ್ರಿಯೆಗಳು (ರಿವರ್ಸ್ ರಿಏಕ್ಷನ್ಸ್).  ಹೀಗಾಗಿ ಕೆಲವು ಸಂದರ್ಭಗಳಲ್ಲಿ ಕೋಶದಲ್ಲಿ ವಿದ್ಯುತ್ತನ್ನು ವಿಪರ್ಯಯ ರೀತಿಯಲ್ಲಿ ಪ್ರವಹಿಸುವುದರ ಮೂಲಕ ಕೋಶದ ರಾಸಾಯನಿಕ ಪದಾರ್ಥಗಳನ್ನು ಮೊದಲಿನ ಸ್ಥಿತಿಗೆ ತರಬಹುದು.  ಎಂದರೆ ಒಂದು ಸಲ ನಿರುಪಯೋಗಿಯಾದ ಕೋಶ ಪುನಃ ವಿದ್ಯುತ್ತನ್ನು ಉತ್ಪಾದಿಸಲು ಸಿದ್ಧವಾಗುತ್ತದೆ.  ಆದ್ದರಿಂದ ಅಂಥ ಕೋಶಗಳನ್ನು ವಿದ್ಯುತ್ ಸಂಚಯನಕ್ಕಾಗಿ ಉಪಯೋಗಿಸಬಹುದು. 

ಚಿತ್ರ-1

ಇಂಥವುಗಳಿಗೆ ವಿದ್ಯುತ್ ಸಂಚಯನ ಕೋಶಗಳು (ಸ್ಟೋರೇಜ್ ಬ್ಯಾಟರೀಸ್) ಅಥವಾ ದ್ವಿತೀಯಕ ವಿದ್ಯುತ್ ಕೋಶಗಳು (ಸೆಕೆಂಡರಿ ಬ್ಯಾಟರೀಸ್) ಎಂದು ಹೆಸರು.  ಇನ್ನು ಕೆಲವು ಸಂದರ್ಭಗಳಲ್ಲಿ ಕೋಶದಲ್ಲಿನ ರಾಸಾಯನಿಕ ಕ್ರಿಯೆಗಳು ಅಂತ್ಯದಲ್ಲಿ ಬರುವ ರಾಸಾಯನಿಕ ಪದಾರ್ಥಗಳ ಭೌತಸ್ಥಿತಿಯಿಂದಾಗಿ ಅದರಲ್ಲಿ ವಿಪರ್ಯಯಕ್ರಿಯೆ ಅಸಾಧ್ಯವಾಗುತ್ತದೆ.  ಇಂಥ ಕೋಶವನ್ನು ವಿದ್ಯುದುತ್ಪಾದನೆಗೆ ಮಾತ್ರ ಬಳಸಬಹುದೇ ವಿನಾ ವಿದ್ಯುತ್ ಸಂಚಯನಕ್ಕೆ ಬಳಸಲಾಗುವುದಿಲ್ಲ.  ವಿದ್ಯುತ್ ಪೂರೈಕೆ ಮುಗಿದ ಅನಂತರ ಇಂಥ ಕೋಶ ನಿರುಪಯೋಗಿಯಾಗುತ್ತದೆ.  ಈ ಗುಂಪಿಗೆ ಸೇರಿದವುಗಳಿಗೆ ಪ್ರಧಾನ ಕ್ರಿಯೆಯಿಂದಾಗಿ ವಿದ್ಯುದುತ್ಪತ್ತಿಮಾಡುವ ಕೋಶಗಳಿಗೆ ವೋಲ್ಟಾಮಾದರಿಯ ಕೋಶಗಳೆಂಬ ಹೆಸರು ಸಹ ಉಂಟು.   
ವಿದ್ಯುದ್ವಾಹಕಗಳಲ್ಲಿನ ವಿದ್ಯುತ್ಪ್ರವಾಹ ಏಕಮುಖ ಪ್ರವಾಹವಾಗಿರಬಹುದು, ಇಲ್ಲವೆ ಪರ್ಯಾಯ ಪ್ರವಾಹವಾಗಿರಬಹುದು.  ವಿದ್ಯುತ್ಕೋಶಗಳು ಏಕಮುಖ ವಿದ್ಯುತ್ ಪ್ರವಾಹವನ್ನು ಪೂರೈಸುತ್ತವೆ.  ವಿದ್ಯುನ್ಮಂಡಲದಲ್ಲಿ (ಎಲೆಕ್ಟ್ರಿಕ್ ಸಕ್ರ್ಯೂಟ್) ವಿದ್ಯುತ್ ಕೋಶವನ್ನು ಅಳವಡಿಸಿದಾಗ ರಾಸಾಯನಿಕ ಕ್ರಿಯೆಗಳಿಂದಾಗಿ ಎಲೆಕ್ಟ್ರಾನುಗಳು ಕೋಶದ ಒಂದು ಭಾಗದಲ್ಲಿ (ಋಣ ಧ್ರುವ ಅಥವಾ ಋಣ ಎಲೆಕ್ಟ್ರೋಡ್) ಬಿಡುಗಡೆಯಾಗಿ ಬಾಹ್ಯ ವಿದ್ಯುನ್ಮಂಡಲದಲ್ಲಿ ಪ್ರವಹಿಸಿ ಕೋಶದ ಮತ್ತೊಂದು ಭಾಗಕ್ಕೆ (ಧನ ಧ್ರುವ ಅಥವಾ ಧನ ಎಲೆಕ್ಟ್ರೋಡ್) ಸೇರುತ್ತವೆ.  ಅಂದರೆ ಬಾಹ್ಯ ವಿದ್ಯುನ್ಮಂಡಲದಲ್ಲಿ ವಿದ್ಯುತ್ಪ್ರವಾಹ ಉಂಟಾಗುತ್ತದೆ.  ವಿದ್ಯುತ್‍ಕೋಶಕ್ಕಿರುವ ಈ ಶಕ್ತಿಗೆ ವಿದ್ಯುದ್ವಾಹಕಶಕ್ತಿ (ಎಲೆಕ್ಟ್ರೋಮೋಟಿವ್ ಫೋರ್ಸ್) ಎಂದು ಹೆಸರು.  ಇದನ್ನು ಸಹ ವೋಲ್ಟುಗಳಲ್ಲಿ ಅಳೆಯುತ್ತಾರೆ.  ವಿದ್ಯುತ್‍ಕೋಶಗಳ ರಚನೆಯಲ್ಲಿ ಎಲೆಕ್ಟ್ರೋಡುಗಳ ಮತ್ತು ರಾಸಾಯನಿಕ ಪದಾರ್ಥಗಳ ಯೋಗ್ಯರೀತಿಯ ಅಳವಡಿಕೆ ಮುಖ್ಯ.
ಕೋಶದ ವಿಭವ ಮತ್ತು ವಿದ್ಯುದ್ವಾಹಕಶಕ್ತಿ:  ಯಾವುದೇ ಮಂಡಲದಲ್ಲಿನ ವಿದ್ಯುತ್ಪ್ರವಾಹ ಅದರಲ್ಲಿರುವ ವಿಭವವನ್ನು (ಪೊಟೆನ್ಯಿಯಲ್) ಅವಲಂಬಿಸಿರುವುದರ ಜೊತೆಗೆ ಅದರ ವಿದ್ಯುತ್‍ಗುಣವನ್ನು ಸಹ ಅವಲಂಬಿಸಿರುತ್ತದೆ.  ಮಂಡಲದ ವಿದ್ಯುತ್‍ಗುಣವನ್ನು ವಿದ್ಯುತ್ಪ್ರವಾಹಕ್ಕೆ ಒಡ್ಡುವ ಅಡಚಣೆಯಿಂದಾಗಲೀ ಅಥವಾ ವಿದ್ಯುತ್ಪ್ರವಾಹವನ್ನು ಸುಲಲಿತವಾಗಿ ನಡೆಸುವ ಗುಣವೆಂದಾಗಲೀ ಪರಿಗಣಿಸಬಹುದು.  ವಿದ್ಯುನ್ಮಂಡಲ ವಿದ್ಯುತ್ಪ್ರವಾಹಕ್ಕೆ ಒಡ್ಡುವ ಅಡಚಣೆಗೆ ವಿದ್ಯುದ್ರೋಧತ್ವ ಎಂದು ಹೆಸರು.  ವಿದ್ಯುದ್ವಾಹಕಗಳ ವಿದ್ಯುದ್ರೋಧತ್ವ ಅತ್ಯಲ್ಪ.  ವಿದ್ಯುತ್ಪ್ರವಾಹವನ್ನು ಆಂಪಿಯರುಗಳಲ್ಲೂ ವಿದ್ಯುನ್ನಿರೋಧವನ್ನು ಓಮ್‍ಗಳಲ್ಲೂ ಅಳೆಯುತ್ತಾರೆ.  ಯಾವುದಾದರೊಂದು ವಿದ್ಯುನ್ಮಂಡಲದಲ್ಲಿನ ವಿಭವ ಗಿ ವೋಲ್ಟುಗಳು, ಪ್ರವಾಹ I ಆಂಪಿಯರುಗಳು ಮತ್ತು ರೋಧತ್ವ ಖ ಓಮುಗಳು ಆಗಿದ್ದರೆ ಆಗ ಓಮನ ನಿಯಮಾನುಸಾರ ಗಿ=Iಖ ಸಂಬಂಧ ಉಂಟು.  ಕೋಶದ ವಿಭವವನ್ನು ವೋಲ್ಟ್‍ಮಾಪಕದಿಂದ ನೇರವಾಗಿ ಅಳೆಯಬಹುದು.  ಕೋಶದ ವಿದ್ಯುದ್ವಾಹಕ ಶಕ್ತಿ ಕೋಶದ ರಚನೆಯಿಂದಾಗಿ (ಎಲೆಕ್ಟ್ರೋಡುಗಳು, ವಿದ್ಯುದ್ವಿಶ್ಲೇಷ್ಯ ಇತ್ಯಾದಿ)  ತಿಳಿದಿರುವುದು.  ಕೋಶವನ್ನು ಅಳವಡಿಸಿರುವ ವಿದ್ಯುನ್ಮಂಡಲದಲ್ಲಿ  ವಿದ್ಯುತ್ ಪ್ರವಾಹ ಇಲ್ಲದಿರುವಾಗ ಅದರ ವಿದ್ಯುದ್ವಾಹಕಶಕ್ತಿಯೂ ವಿಭವವೂ ಒಂದೇ ಆಗಿರುತ್ತವೆ.  ಆದರೆ ಮಂಡಲದಲ್ಲಿ ವಿದ್ಯುತ್ಪ್ರವಾಹವಿರುವಾಗ ವಿದ್ಯುನ್ಮಂಡಲದಲ್ಲಿ ವಿಭವ ವಿದ್ಯುದ್ವಾಹಕಶಕ್ತಿಗಿಂತ ಕಡಿಮೆ ಇರುತ್ತದೆ.  ಇದಕ್ಕೆ ಕಾರಣ ವಿದ್ಯುತ್‍ಕೋಶದ ಆಂತರಿಕ ರೋಧತ್ವ.  ವಿದ್ಯುತ್ ಪ್ರವಾಹದ ದೃಷ್ಟಿಯಿಂದ ಎಲ್ಲ ವಸ್ತುಗಳಿಗೂ ಇರುವಂತ್ವೆಯೇ ಕೋಶಕ್ಕೆ ಸಹ ವಿದ್ಯುದ್ರೋಧತ್ವ ಇದೆ.  ಇದಕ್ಕೆ ಕೋಶದ ಆಂತರಿಕ ರೋಧತ ಎಂದು ಹೆಸರು. ಇದನ್ನು ದಾಟಲು ಕೋಶದ ವಿದ್ಯುದ್ವಾಹಕಶಕ್ತಿಯಲ್ಲಿ ಸ್ವಲ್ಪ ಭಾಗ ವ್ಯಯವಾಗುವುದರಿಂದ ಕೋಶದ ಎಲೆಕ್ಟ್ರೋಡುಗಳ ನಡುವಿನ ವಿಭವ ಕಡಿಮೆ ಆಗಿರುತ್ತದೆ.  ವಿದ್ಯುತ್ ಪ್ರವಾಹವಿಲ್ಲದಿರುವಾಗ ಈ ರೀತಿಯ ಆಂತರಿಕ ವ್ಯಯ ಇಲ್ಲದಿರುವುದರಿಂದ ಕೋಶದ ವಿದ್ಯುದ್ವಾಹಕಶಕ್ತಿ ಮತ್ತು ವಿಭವ ಒಂದೇ ಆಗಿರುತ್ತವೆ.  ಇನ್ನು ಮುಂದೆ ಕೋಶವನ್ನು ವಿವರಿಸುವಾಗ ಕೋಶದ ವಿಭವ ಎಂದರೆ ಕೋಶ ವಿದ್ಯುನ್ಮಂಡಲದಲ್ಲಿಲ್ಲದಾಗಿನ ಎಲೆಕ್ಟ್ರೋಡುಗಳ ನಡುವಿನ ವಿಭವ ಎಂದರ್ಥ; ಅಂದರೆ ವಿವೃತಮಂಡಲ ವಿಭವ (ಓಪನ್ ಸಕ್ರ್ಯೂಟ್ ಪೊಟೆನ್ಯಿಯಲ್).

ಚಿತ್ರ-2

ವಿದ್ಯುನ್ಮಂಡಲದಲ್ಲಿ ಕೋಶ ಮತ್ತು ವಿದ್ಯುದ್ರೋಧತ್ವದ ಸ್ಥಳಗಳನ್ನು ವಿಶೇಷ ಗುರುತುಗಳಿಂದಲೂ ವೋಲ್ಟ್ ಮಾಪಕವನ್ನು ಗಿ ಗುರುತಿನಿಂದಲೂ ಆಂಪಿಯರ್ ಮಾಪಕವನ್ನು ಂ ಗುರುತಿನಿಂದಲೂ ಸೂಚಿಸಿದೆ (ಚಿತ್ರ 2).  ಕೋಶದ ಗುರುತಿನಲ್ಲಿ + ಜಾಗ ಧನ ಧ್ರುವವನ್ನೂ  - ಜಾಗ ಋಣ ಧ್ರುವವನ್ನೂ ಸೂಚಿಸುತ್ತವೆ.  ಮಂಡಲದಲ್ಲಿ ಬಾಣದ ಗುರುತು ವಿದ್ಯುತ್‍ಪ್ರವಾಹದ ದಿಕ್ಕನ್ನು ಸೂಚಿಸುತ್ತದೆ.  ವಿದ್ಯುತ್ ಪ್ರಯೋಗಗಳಲ್ಲಿ ಧನವಿದ್ಯುತ್ ವಿಭವ ಒಂದನ್ನೇ ಆಗಲಿ ಅಥವಾ ಋಣವಿದ್ಯುತ್ ವಿಭವ ಒಂದನ್ನೇ ಆಗಲಿ ಉಪಯೋಗಿಸಿಕೊಳ್ಳುವ  ಸನ್ನಿವೇಶಗಳು ಇರುತ್ತವೆ.  

ಚಿತ್ರ-3

ಅಂಥ ಸಂದರ್ಭಗಳಲ್ಲಿ ವಿದ್ಯುನ್ಮಂಡಲದಲ್ಲಿ ಸ್ವಲ್ಪ ಮಾರ್ಪಾಡು ಮಾಡಿ ಕೋಶದ ಧನ ಮತ್ತು ಋಣ ಧ್ರುವಗಳಿಂದ ಧನ ಮತ್ತು ಋಣವಿದ್ಯುತ್ ವಿಭವಗಳನ್ನು ಕ್ರಮವಾಗಿ ಪಡೆಯಬಹುದು.  ಚಿತ್ರ (3)ರಲ್ಲಿ ಇಂಥ ಒಂದು ಉದಾಹರಣೆಯನ್ನು ತೋರಿಸಿದೆ.  ಏಗೆ ಸಂಬಂಧಿಸಿದಂತೆ (ಶೂನ್ಯ ವಿದ್ಯುತ್ ವಿಭವ) ಉಗೆ ಋಣವಿದ್ಯುತ್ ವಿಭವವನ್ನು ಅ ಕೋಶಾವಳಿಯೂ Pಗೆ ಧನ ವಿದ್ಯುತ್ ವಿಭವವನ್ನು ಃ ಕೋಶಾವಳಿಯೂ ಒದಗಿಸುತ್ತವೆ.

ವಿದ್ಯುತ್‍ಕೋಶದ ಕ್ಷಮತೆ (ಕೆಪಾಸಿಟಿ ಆಫ್ ಬ್ಯಾಟರಿ): ಮಂಡಲದಲ್ಲಿನ ವಿದ್ಯುತ್ ಪ್ರವಾಹದ ವಿವರಣೆಯನ್ನು ಮತ್ತೊಂದು ರೀತಿಯಲ್ಲೂ ಕೊಡಬಹುದು.  ಎಲೆಕ್ಟ್ರಾನುಗಳು ಋಣವಿದ್ಯುತ್ತನ್ನು ಹೊಂದಿವೆ ಮತ್ತು ಎಲೆಕ್ಟ್ರಾನುಗಳ ಪ್ರವಾಹ ವಿದ್ಯುತ್ ಪ್ರವಾಹಕ್ಕೆ ಕಾರಣ.  ವಿದ್ಯುತ್ ಪ್ರವಾಹವನ್ನು ಆಂಪಿಯರುಗಳಲ್ಲಿಯೇ ಅಲ್ಲದೆ ಬೇರೆ ಏಕಮಾನದಿಂದಲೂ ಅಳೆಯುವುದು ರೂಢಿಯಲ್ಲಿದೆ.  ವಿದ್ಯುತ್ ಕೋಶದ ಆನೋಡಿನಿಂದ ಕ್ಯಾಥೋಡಿಗೆ ಒಟ್ಟು 6.02 ಘಿ 1023 ಎಲೆಕ್ಟ್ರಾನುಗಳು ಪ್ರವಹಿಸಿದರೆ ಕೋಶದಿಂದ ಒಂದು ಫ್ಯಾರಡೆ ವಿದ್ಯುತ್ತು ಪ್ರವಹಿಸಿದೆ ಎಂದಾಗುತ್ತದೆ.  1/96,000 ಭಾಗದ ಫ್ಯಾರಡೆಯನ್ನು ಪ್ರವಹಿಸುವ ಕ್ಷಮತೆ ಇರುವ ಕೋಶಕ್ಕೆ ಒಂದು ಕೂಲಂಬ್ ವಿದ್ಯುತ್ತನ್ನು ಪ್ರವಹಿಸುವ ಶಕ್ತಿ ಇರುವುದು.  ಸೆಕೆಂಡಿಗೆ ಒಂದು ಕೂಲಂಬಿನಂತೆ ವಿದ್ಯುತ್ಪ್ರವಾಹ ಮಂಡಲದಲ್ಲಿದ್ದರೆ ಆಗ 1 ಆಂಪಯರ್ ವಿದ್ಯುತ್ ಇದೆ ಎಂದಾಗುತ್ತದೆ.  ಈ ಲೆಕ್ಕದ ಮೇರೆಗೆ ಎಲೆಕ್ಟ್ರಾನುಗಳ ಋಣವಿದ್ಯುತ್ ಪ್ರಮಾಣ 1.602 ಘಿ 10-19 ಕೂಲಂಬುಗಳು.

ವಿದ್ಯುತ್‍ಕೋಶ ಕೆಲಸಮಾಡಲು ಪ್ರಾರಂಭಿಸಿದ ತರುವಾಯ ಅದರಲ್ಲಿನ ರಾಸಾಯನಿಕಕ್ರಿಯೆ ನಿಲ್ಲುವ ವರೆಗೂ ಅದು ವಿದ್ಯುತ್ತನ್ನು ಉತ್ಪಾದಿಸುತ್ತಿರುತ್ತದೆ.  ಕೋಶದ ಈ ಉಪಯುಕ್ತ ಜೀವಿತದ (ಯೂಸ್‍ಫುಲ್ ಲೈಫ್) ಕ್ಷಮತೆಯನ್ನು ಅಂದರೆ ಕೋಶ ಉತ್ಪಾದಿಸುವ ಒಟ್ಟು ವಿದ್ಯುತ್ತಿನ ಮೊತ್ತವನನು ಆಂಪಿಯರ್-ಗಂಟೆಗಳಲ್ಲಿ ಸೂಚಿಸುತ್ತಾರೆ.  ಉದಾಹರಣೆಗೆ 100 ಗಂಟೆಗಳ ಕಾಲ ಸತತವಾಗಿ 1 ಆಂಪಿಯರ್ ವಿದ್ಯುತ್ತನ್ನು ಪ್ರವಹಿಸಬಲ್ಲುದು.  ಅಥವಾ 20 ಗಂಟೆಗಳ ಕಾಲ ಸತತವಾಗಿ 5 ಆಂಪಿಯರ್ ವಿದ್ಯುತ್ತನ್ನು ಪ್ರವಹಿಸಬಲ್ಲುದು; ಅಥವಾ 10 ಗಂಟೆಗಳ ಕಾಲ 10 ಆಂಪಿಯರ್ ವಿದ್ಯುತ್ತನ್ನು ಪ್ರವಹಿಸಬಲ್ಲುದು.

ಕೋಶಗಳಲ್ಲಿ ಬಗೆಗಳು:  ವಿದ್ಯುತ್‍ಕೋಶಗಳನ್ನು ಮುಖ್ಯವಾಗಿ ಎರಡು ಪಂಗಡಗಳಾಗಿ ವಿಂಗಡಿಸಬಹುದು-1 ವೋಲ್ಟಾ ಮಾದರಿಯ ಕೋಶಗಳು, 2 ವೋಲ್ಟಾ ಮಾದರಿಯಲ್ಲದ ಇತರ ಬಗೆಯ ಕೋಶಗಳು.  ವೋಲ್ಟಾಮಾದರಿಯ ಕೋಶಗಳಲ್ಲಿ ವಿದ್ಯುದ್ವಿಶ್ಲೇಷ್ಯದಲ್ಲಿಟ್ಟಿರುವ ಎರಡು ಎಲೆಕ್ಟ್ರೋಡುಗಳ ನಡುವೆ ರಾಸಾಯನಿಕ ಕ್ರಿಯೆಯಿಂದಾಗಿ ವಿಭವ ಏರ್ಪಡುತ್ತದೆ.  ಎಲೆಕ್ಟ್ರೋಡುಗಳು ಒಂದೇ ವಿದ್ಯುದ್ವಿಶ್ಲೇಷ್ಯದಲ್ಲಿರಬಹುದು ಅಥವಾ ಬೇರೆ ಬೇರೆ ವಿಶ್ಲೇಷಗಳಲ್ಲಿರಬಹುದು.  ವಿಶ್ಲೇಷ್ಯಗಳು ಬೇರೆ ಇದ್ದಾಗ ಅವುಗಳ ನಡುವೆ ವಿದ್ಯುದ್ವಾಹಕ ಕಣಗಳ ಚಲನೆಗೆ ಅಡಚಣೆಯಾಗದಂತಿರಬೇಕು.  ಸಚ್ಛಿದ್ರ ತೆರೆಯಿಂದ ವಿಶ್ಲೇಷ್ಯಗಳನ್ನು ಬೇರ್ಪಡಿಸುವುದರ ಮೂಲಕ ಇದನ್ನು ಸಾಧಿಸಬಹುದು.
ವೋಲ್ಟಾ ಕೋಶಗಳನ್ನು ಮುಖ್ಯವಾಗಿ ಈ ಕೆಳಗೆ ತೋರಿಸಿರುವಂತೆ ವಿಭಾಗಿಸಬಹುದು: 1 ಪ್ರಧಾನ ವಿದ್ಯುತ್ ಕೋಶಗಳು.  2 ದ್ವಿತೀಯಕ ವಿದ್ಯುತ್ ಕೋಶಗಳು ಅಥವಾ ವಿದ್ಯುತ್ ಸಂಚಯನ ಕೋಶಗಳು.  3 ಶಿಷ್ಟ ವಿದ್ಯುತ್ ಕೋಶಗಳು ಅಥವಾ ವೈಜ್ಞಾನಿಕ ಅಳತೆಗಾಗಿ ಉಪಯೋಗಿಸುವ ಕೋಶಗಳು.

1 ಪ್ರಧಾನ ವಿದ್ಯುತ್‍ಕೋಶಗಳು:  ಈ ಪಂಗಡದಲ್ಲಿ ಮೊತ್ತಮೊದಲಿಗೆ ಬಳಕೆಗೆ ಬಂದ ಕೋವೆಂದರೆ ಅಲೆಸ್ಸಾಂಡ್ರೋ ವೋಲ್ಟಾ ರಚಿಸಿದ (1800) ವೋಲ್ಟಾ ಶ್ರೇಣಿ.  ಇದು ಹಲವಾರು ಪ್ರತ್ಯೇಕ ವಿದ್ಯುತ್ ಕೋಶಗಳ ಜೋಡಣೆಯಿಂದಾದ ಕೋಶಾವಳಿ.  ಕೋಶಗಳ ರಚನೆಯಲ್ಲಿ ಬೆಳ್ಳಿಯ ಕ್ಯಾಥೋಡನ್ನು (ಋಣಧ್ರುವ) ಮತ್ತು ಸತುವಿನ ಆನೋಡನ್ನು (ಧನಧ್ರುವ) ಎಲೆಕ್ಟ್ರೋಡುಗಳಾಗಿಯೂ ಸಾಮಾನ್ಯ ಅಡುಗೆ ಉಪ್ಪಿನ (ಓಚಿಅಟ) ದ್ರಾವಣವನ್ನು ವಿದ್ಯುದ್ವಿಶ್ಲೇಷ್ಯವಾಗಿಯೂ ಉಪಯೋಗಿಸಲಾಗಿತ್ತು.  ಆನೋಡು ಮತ್ತು ಕ್ಯಾಥೋಡುಗಳು ಒಂದೇ ಆಕಾರದ ಬಿಲ್ಲೆಗಳಾಗಿದ್ದು ಅವುಗಳ ನಡುವೆ ಇವುಗಳಿಗಿಂತ ಆಕಾರದಲ್ಲಿ ಸ್ವಲ್ಪ ಚಿಕ್ಕದಾದ ಉಪ್ಪಿನ ದ್ರಾವಣದಲ್ಲಿ ಅದ್ದಿದ ಕಾಗದ ಅಥವಾ ಬಟ್ಟೆಯ ಬಿಲ್ಲೆಯನ್ನು ಇಡಲಾಗಿತ್ತು.  ಇಂಥ ಒಂದು ಕೋಶದಿಂದ ದೊರೆತ ವಿಭವ ಅತ್ಯಲ್ಪವಾದುದರಿಂದ ಹಲವು ಕೋಶಗಳ ಜೋಡಣೆಯನ್ನು (ಶ್ರೇಣಿಯನ್ನು) ರಚಿಸಿ ಹೆಚ್ಚಿನ ವಿಭವವನ್ನು ಪಡೆಯುವಂತೆ ಏರ್ಪಡಿಸಲಾಗಿತ್ತು.  ಕೋಶಗಳಲ್ಲಿ ಬೆಳ್ಳಿಗೆ ಬದಲಾಗಿ ತಾಮ್ರದ ಕ್ಯಾಥೋಡನ್ನೂ ಉಪಯೋಗಿಸಬಹುದು. ವೋಲ್ಟಾಶ್ರೇಣಿಯ ಧನ ಮತ್ತು ಋಣ ಎಲೆಕ್ಟ್ರೋಡುಗಳನ್ನು ಬಾಹ್ಯ ವಿದ್ಯುನ್ಮಂಡಲಕ್ಕೆ ಜೋಡಿಸಿದಾಗ ಸತು ಮತ್ತು ವಿದ್ಯುದ್ವಿಶ್ಲೇಷದ ನಡುವಣ ರಾಸಾಯನಿಕ ಕ್ರಿಯೆಯಿಂದಾಗಿ ಕ್ಯಾಥೋಡಿನಿಂದ ಎಲೆಕ್ಟ್ರಾನುಗಳು ಬಿಡುಗಡೆಯಾಗುತ್ತವೆ.  ಎಲೆಕ್ಟ್ರಾನುಗಳು ಬಾಹ್ಯ ವಿದ್ಯುನ್ಮಂಡಲದಲ್ಲಿ ಚಲಿಸಿ ಆನೋಡ್ ಮೂಲಕವಾಗಿ ಕೋಶವನ್ನು ಸೇರುತ್ತವೆ.  ಕೋಶದಲ್ಲಿನ ರಾಸಾಯನಿಕ ಕ್ರಿಯೆಯಿಂದಾಗಿ ಆನೋಡ್ ಬಳಿ ಜಲಜನಕದ ಅನಿಲ ಉತ್ಪತ್ತಿಯಾಗುತ್ತದೆ.  ಕೋಶದಲ್ಲಿನ ರಾಸಾಯನಿಕ ಕ್ರಿಯೆ ಈ ರೀತಿ ಇದೆ:

ಕ್ಯಾಥೋಡ್ ಬಳಿ: Zಟಿ(Zಟಿ++ ( 2e-
ಆನೋಡ್ ಬಳಿ : 2ಊ+  ( 2e- ( ಊ2 ( (ಅನಿಲ)
ಕೋಶದ ಒಟ್ಟು ರಾಸಾಯನಿಕ ಕ್ರಿಯೆಯಲ್ಲಿ ಸತು ಸತುವಿನ ಲವಣವಾಗಿ ಪರಿವರ್ತನೆಗೊಳ್ಳುವುದರಿಂದ ಸತುವಿನ ಎಲೆಕ್ಟ್ರೋಡುಗಳು ನಶಿಸುತ್ತಿರುತ್ತವೆ.  ಆನೋಡ್ ಲೋಹ ಯಾವ ರೀತಿಯ ರಾಸಾಯನಿಕ ಕ್ರಿಯೆಗೂ ಒಳಗಾಗದಿರುವುದರಿಂದ ನಶಿಸುವುದಿಲ್ಲ.  ಕೋಶದೊಳಗಿನ ಒಟ್ಟು ರಾಸಾಯನಿಕ ಕ್ರಿಯೆ ಈ ರೀತಿ ಇರುತ್ತದೆ:
Zಟಿ + 2ಓಚಿಅಟ + 2ಊ2ಔ (2ಓಊಊh
ಚಿಔಊ = Zಟಿಅಟ2  + ಊ2 (

ಚಿತ್ರ-4

ವೋಲ್ಟಾ ಶ್ರೇಣಿಯಲ್ಲಿನ ಮುಖ್ಯವಾದ ತೊಂದರೆ ಎಂದರೆ ಬಿಡುಗಡೆಯಾದ ಜಲಜನಕ ಅನಿಲ ಆನೋಡಿನ ಸುತ್ತಲೂ ಗುಳ್ಳೆಗಳಾಗಿ ಶೇಖರವಾಗುವುದರಿಂದ ಕೋಶದ ವಿದ್ಯುದುತ್ಪತ್ತಿ ಸ್ವಲ್ಪ ಕಾಲಾನಂತರ ನಿಲ್ಲುವುದು.  ಇದಕ್ಕೆ ಧ್ರುವೀಕರಣವೆಂದು ಹೆಸರು.  ಡೇನಿಯಲ್ ಎಂಬ ವಿಜ್ಞಾನಿ 1836ರಲ್ಲಿ ತಯಾರಿಸಿದ ವೋಲ್ಟಾ ಮಾದರಿಯ ಕೋಶದಲ್ಲಿ ಧ್ರುವೀಕರಣದ ತೊಂದರೆಯನ್ನು ನಿಲ್ಲಿಸಲಗಿತ್ತು.  ಈ ಕೋಶದಲ್ಲಿ ಸತುವಿನ ಆನೋಡ್ ಮತ್ತು ತಾಮ್ರದ ಕ್ಯಾಥೋಡುಗಳನ್ನು ಉಪಯೋಗಿಸಲಾಗಿತ್ತು.  ಸತುವಿನ ಆನೋಡನ್ನು ಸತುವಿನ ಸಲ್ಫೇಟು ದ್ರಾವಣದಲ್ಲಾಗಲಿ ಮೆಗ್ನೀಸಿಯಂ ಸಲ್ಫೇಟು ದ್ರಾವಣದಲ್ಲಾಗಲಿ ಅಥವಾ ಸಾರರಿಕ್ತ ಸಲ್ಫ್ಯೂರಿಕ್ ಆಮ್ಲದ (ಊ2Sಔ4) ದ್ರಾವಣದಲ್ಲಾಗಲಿ ಇರಿಸಿರುತ್ತಾರೆ.  ಇದಕ್ಕೆ ಆನೋಡ್ ದ್ರಾವಣ ಎಂದು ಹೆಸರು.  ತಾಮ್ರದ ಕ್ಯಾಥೋಡನ್ನು ತಾಮ್ರದ ಸಲ್ಫೇಟಿನ ಸಂತೃಪ್ತದ್ರಾವಣದಲ್ಲಿ ಇರಿಸಿರುತ್ತಾರೆ.  ಇದಕ್ಕೆ ಆನೋಡ್ ದ್ರಾವಣ ಎಂದು ಹೆಸರು.  ತಾಮ್ರದ ಕ್ಯಾಥೋಡನ್ನು ತಾಮ್ರದ ಸಲ್ಫೇಟಿನ ಸಂತೃಪ್ತದ್ರಾವಣದಲ್ಲಿ ಇರಿಸಿರುತ್ತಾರೆ.  ಇದಕ್ಕೆ ಕ್ಯಾಥೋಡ್ ದ್ರಾವಣ ಎಂದು ಹೆಸರು.  ಕೋಶದಲ್ಲಿನ ಆನೋಡ್ ಮತ್ತು ಕ್ಯಾಥೋಡ್ ದ್ರಾವಣಗಳು ಬೆರೆಯದಂತೆ ಮಾಡಲು ಎರಡು ಬೇರೆ ಬೇರೆ ವಿಧಾನಗಳನ್ನು ಅನುಸರಿಸಬಹುದು.  ಈ ಎರಡೂ ದ್ರಾವಣಗಳನ್ನು ಕೋಶದ ಒಂದೇ ಪಾತ್ರೆಯಲ್ಲಿಟ್ಟಾಗ ಸಂತೃಪ್ತ ತಾಮ್ರದ ಸಲ್ಫೇಟ್ ದ್ರಾವಣ ಹೆಚ್ಚು ಭಾರವಾಗಿರುವುದರಿಂದ ಅದು ಕೋಶದ ಕೆಳಭಾಗದಲ್ಲಿರುತ್ತದೆ.  ಆಗ ಕ್ಯಾಥೋಡನ್ನು ಕ್ಯಾಥೋಡ್ ದ್ರಾವಣದಲ್ಲಿ ಅಂದರೆ ಕೋಶದ ಕೆಳಭಾಗದಲ್ಲಿಡಬೇಕಾಗುತ್ತದೆ.  

ಚಿತ್ರ-5

ಈ ರೀತಿ ನಿರ್ಮಿಸಿದ ಕೋಶಕ್ಕೆ ಗುರುತ್ವರೀತಿಯ ಡೇನಿಯಲ್ ಕೋಶ ಎಂದು ಹೆಸರು.  ಮತ್ತೊಂದು ವಿಧಾನದಲ್ಲಿ ತಾಮ್ರದ ಸಲ್ಫೇಟ್ ದ್ರಾವಣವನ್ನು ಸಚ್ಛಿದ್ರ ಪಾತ್ರೆಯಲ್ಲಿಟ್ಟು ಈ ಪಾತ್ರೆಯನ್ನು ಆನೋಡ್ ದ್ರಾವಣದಲ್ಲಿಟ್ಟಿರುತ್ತಾರೆ.  ಈ ರೀತಿಯ ಕೋಶಕ್ಕೆ ಸಾಮಾನ್ಯ ಡೇನಿಯಲ್ ಕೋಶ ಎಂದು ಹೆಸರು.  ಎರಡು ರೀತಿಯ ಕೋಶದ ರಚನೆಯಲ್ಲೂ ವಿದ್ಯುದ್ವಾಹಿಕಣಗಳು ಎಲೆಕ್ಟ್ರೋಡುಗಳ ನಡುವೆ ಸ್ವಚ್ಛಂದವಾಗಿ ಚಲಿಸಲು ಅವಕಾಶವಿದೆ.  ಕೋಶಗಳಲ್ಲಿ ನಡೆಯುವ ವಿದ್ಯುದ್ರಾಸಾಯನಿಕ ಕ್ರಿಯೆ ಸಹ ಒಂದೇ ಆಗಿರುವುದು.  ಆನೋಡ್‍ವಸ್ತು ವೋಲ್ಟಾಶ್ರೇಣಿಯಲ್ಲಿ ಜರಗುವಂತೆ ಸತುವಿನ ಲವಣವಾಗಿ ಪರಿವರ್ತನೆಗೊಳ್ಳುತ್ತದೆ; ಮತ್ತು ಇದರಿಂದಾಗಿ ಆನೋಡ್ ಪದಾರ್ಥ ಕ್ರಮೇಣ ನಶಿಸುತ್ತದೆ.  ಕ್ಯಾಥೋಡ್ ಬಳಿಯಲ್ಲಿ ಕ್ಯಾಥೋಡ್ ದ್ರಾವಣದಲ್ಲಿನ ತಾಮ್ರದ ವಿದ್ಯುದ್ವಾಹಿ ಕಣಗಳು (ಅu++) ಎಲೆಕ್ಟ್ರಾನುಗಳೊಂದಿಗೆ ಸಂಯೋಗಗೊಂಡು ತಾಮ್ರ ಉತ್ಪತ್ತಿಯಾಗುತ್ತದೆ.  ಅಂದರೆ ತಾಮ್ರದ ಸಲ್ಫೇಟ್ ದ್ರಾವಣದಿಂದ ತಾಮ್ರ ಬೇರೆಯಾಗುತ್ತದೆ.  ಕೋಶದ ವಿದ್ಯುದ್ರಾಸಾಯನಿಕ ಕ್ರಿಯೆಗಳು ಈ ರೀತಿ ಇವೆ:
Zಟಿ ( Zಟಿ ++  ( 2e-
ಅuSಔ4 ( ಅu ++  + Sಔ4--
	           Zಟಿ ++ + Sಔ4 - (Zಟಿ Sಔ4
	ಅu ++ + 2e- ( ಅu(
	Zಟಿ + ಊ2Sಔ4 ( Zಟಿ Sಔ4 + ಊ2(
ಈ ಕ್ರಿಯೆಗಳಿಂದಾಗಿ ತಾಮ್ರದ ಸಲ್ಫೇಟ್ ದ್ರಾವಣ ಸತತವಾಗಿ ಸಾರರಿಕ್ತವಾಗುತ್ತಿರುತ್ತದೆ.  ಇದರಿಂದಾಗಿ ಕೋಶದ ವಿದ್ಯುತ್ ಪೂರೈಕೆ ಕ್ರಮೇಣ ಅಸಮರ್ಪಕವಾಗುವುದು.  ಇದನ್ನು ತಡೆಗಟ್ಟಲು ತಾಮ್ರದ ಸಲ್ಫೇಟ್ ಹರಳುಗಳನ್ನು ಕ್ಯಾಥೋಡ್ ದ್ರಾವಣದಲ್ಲಿ ಇಟ್ಟಿರುತ್ತಾರೆ.  ದ್ರಾವಣದ ಸಾರ ಕಡಿಮೆಯಾದಂತೆ ಸಲ್ಫೇಟ್ ಹರಳುಗಳು ದ್ರಾವಣದಲ್ಲಿ ಲೀನವಾಗುವುದರಿಂದ ಕ್ಯಾಥೋಡ್ ದ್ರಾವಣದ ಸಾರ ಒಂದೇ ರೀತಿ ಇರಲು ಸಾಧ್ಯವಾಗುತ್ತದೆ.

ಪಾದರಸದ ಲೇಪಿತ (ಅಮಾಲ್ಗಮೇಟೆಡ್) ಆನೋಡನ್ನು ಉಪಯೋಗಿಸುವುದರಿಂದ ಕೋಶ ಕೆಲಸ ಮಾಡದಿದ್ದಾಗಿನ ಆನೋಡಿನ ನಶಿಸುವಿಕೆಯನ್ನು ತಡೆಗಟ್ಟಬಹುದೆಂಬ ವಿಷಯ 1801ರ ವೇಳೆಗೆ ತಿಳಿದಿದ್ದಿತು.  ಅಲ್ಲದೆ ಉತ್ಕರ್ಷಣಕಾರಕ ವಸ್ತುಗಳನ್ನು ಕೋಶದಲ್ಲಿ ಉಪಯೋಗಿಸಿದಾಗ ಈ ವಸ್ತುಗಳು ವಿಧ್ರುವೀಕಾರಕಗಳಾಗಿ (ಡೀಪೋಲರೈಸರ್ಸ್) ಕೆಲಸ ಮಾಡುವುದರಿಂದ ಕೋಶದ ವಿದ್ಯುತ್ಪ್ರವಾಹ ಹೆಚ್ಚಾಗಿದ್ದಾಗಲೂ ಕೋಶ ಸಮರ್ಪಕವಾಗಿ ಕೆಲಸ ಮಾಡಲು ಸಾಧ್ಯವೆಂಬ ವಿಷಯವೂ ತಿಳಿದಿದ್ದಿತು.  ಈ ತತ್ತ್ವಗಳನ್ನು ಅನುಸರಿಸಿ 1839ರಲ್ಲಿ ಡಬ್ಲ್ಯು.ಆರ್.ಗ್ರೌಸ್ ಎಂಬ ವಿಜ್ಞಾನಿ ಡೇನಿಯಲ್ ಕೋಶಕ್ಕಿಂತಲೂ ಸಮರ್ಪಕವಾಗಿರುವ ವಿದ್ಯುತ್ ಕೋಶವನ್ನು ರಚಿಸಿದ.  ಡೇನಿಯಲ್ ಕೋಶಕ್ಕಿಂತಲೂ ಸಮರ್ಪಕವಾಗಿರುವ ವಿದ್ಯುತ್ ಕೋಶವನ್ನು ರಚಿಸಿದ.  ಡೇನಿಯಲ್ ಕೋಶದಲ್ಲಿ ಇದ್ದಂತೆಯೇ ಗ್ರೌಸ್‍ನ ಕೋಶದಲ್ಲೂ ಎರಡು ವಿದ್ಯುದ್ವಿಶ್ಲೇಷ್ಯಗಳನ್ನು ಉಪಯೋಗಿಸಲಾಗಿತ್ತು.  ಕೋಶದ ಪಾತ್ರೆಯಲ್ಲಿ ಸಾರರಿಕ್ತ ಸಲ್ಫ್ಯೂರಿಕ್ ಆಮ್ಲವನ್ನು ಇಟ್ಟು ಈ ದ್ರಾವಣದಲ್ಲಿ ಸತುವಿನ ಆನೋಡನ್ನು ಇಡಲಾಗಿತ್ತು.  ಸಚ್ಛಿದ್ರ ಪಾತ್ರೆಯೊಂದರಲ್ಲಿ ಸಾರ ನೈಟ್ರಿಕ್ ಆಮ್ಲವನ್ನೂ (ಉತ್ಕರ್ಷಣಕಾರಿ) ಈ ದ್ರಾವಣದಲ್ಲಿ ಪ್ಲಾಟಿನಂ ಲೋಹದ ಕ್ಯಾಥೋಡನ್ನೂ ಇರಿಸಿ ಈ ಸಚ್ಛಿದ್ರ ಪಾತ್ರೆಯನ್ನು ಸಲ್ಫ್ಯೂರಿಕ್ ಆಮ್ಲದಲ್ಲಿ ಇಡಲಾಗಿತ್ತು.  ಗ್ರೌಸನ ಕೋಶದಲ್ಲಿ ಉಪಯೋಗಿಸಿದ ಅತಿ ದುಬಾರಿಯಾದ ಪ್ಲಾಟಿನಂ ಲೋಹಕ್ಕೆ ಬದಲಾಗಿ ಶುದ್ಧ ಇಂಗಾಲದ ಕಡ್ಡಿಗಳನ್ನು ಕ್ಯಾಥೋಡ್ ಆಗಿ ಲಉಪಯೋಗಿಸುವುದನ್ನು ಆರ್.ಡಬ್ಲ್ಯು.  ಬುನ್‍ಸೆನ್ ಎಂಬಾತ ಬಳಕೆಗೆ ತಂದ.  ಈ ಕಾರಣಕ್ಕಾಗಿ ಈ ಬಗೆಯ ಕೋಶವನ್ನು ಗ್ರೌಸ್-ಬುನ್‍ಸೆನ್ ವಿದ್ಯುತ್ ಕೋಶವೆಂದು ಕರೆಯುತ್ತಾರೆ.  ಕೋಶದಲ್ಲಿನ ರಾಸಾಯನಿಕ ಕ್ರಿಯೆ ಈ ರೀತಿ ಇರುತ್ತದೆ:
Zಟಿ + 2ಊಓಔ3 + ಊ2Sಔ4 ( Zಟಿ Sಔ4 + 2ಓಔ2 + 2ಊ2ಔ

ಇದರ ಪ್ರಕಾರ ನೈಟ್ರಿಕ್ ಆಮ್ಲ ಅಪಕರ್ಷಣೆಗೊಳ್ಳುತ್ತದೆ.  ಆನೋಡಿನ ಸತುವಿನ ಸಲ್ಫೇಟ್ ರೂಪದಲ್ಲಿ ಕೋಶವನ್ನು ಸೇರುವುದು.  ಕೋಶದಲ್ಲಿನ ಸಲ್ಫ್ಯೂರಿಕ್ ಆಮ್ಲದ ಮೊತ್ತ ಕ್ರಮೇಣ ಕುಗ್ಗುತ್ತದೆ.  ಕ್ಯಾಥೋಡ್ ಯಾವ ರೀತಿಯಲ್ಲೂ ಬದಲಾವಣೆಗೊಳ್ಳುವುದಿಲ್ಲ.  ಕೋಶದಲ್ಲಿನ ಸಲ್ಫ್ಯೂರಿಕ್ ಆಮ್ಲದ ಸಾರಕ್ಕೆ ಅನುಗುಣವಾಗಿ ಕೋಶದ ವಿಭವ 1.8-1.95 ವೋಲ್ಟುಗಳಿರುತ್ತದೆ.  ಈ ಕೋಶ ಹೆಚ್ಚಿನ ಗಾತ್ರದ ವಿದ್ಯುತ್ಪ್ರವಾಹವನ್ನು ಕೋಶದ ವಿಭವದಲ್ಲಿ ಹೆಚ್ಚು ವ್ಯತ್ಯಾಸ ಆಗದಂತೆ ಒದಗಿಸಲು ಸಮರ್ಥವಾಗಿರುತ್ತದೆ.
ವಿದ್ಯುತ್‍ಕೋಶಗಳ ಬೆಳೆವಣಿಗೆಯಲ್ಲಲಿ ಮುಂದೆ ಬಲಕೆಗೆ ಬಂದ ಕೋಶ ಡೈಕ್ರೊಮೇಟ್ ವಿದ್ಯುತ್ ಕೋಶ.  ಹೆಚ್ಚು ಸಮರ್ಪಕವಾಗಿ ಕೆಲಸ ಮಾಡುವಂತೆ ಸುಧಾರಿಸಲ್ಪಟ್ಟ ಗ್ರೌಸ್-ಬುನ್‍ಸೆನ್ ಕೋಶವಿದು.  ಪ್ರಾರಂಭದಲ್ಲಿ ಗ್ರೌಸ್-ಬುನ್‍ಸೆನ್ ಕೋಶದಲ್ಲಿನ ಕ್ಯಾಥೋಡ್ ದ್ರಾವಣದ (ನೈಟ್ರಿಕ್ ಆಮ್ಲ) ಬದಲಾಗಿ  ಕ್ರೋಮಿಕ್ ಆಮ್ಲವನ್ನು ಉಪಯೋಗಿಸಲಾಯಿತು.  ಅನಂತರ ಕೋಶದಲ್ಲಿನ ಎರಡು ದ್ರಾವಣಗಳಿಗೆ (ಸಲ್ಫ್ಯೂರಿಕ್ ಆಮ್ಲ ಮತ್ತು ಕ್ರೋಮಿಕ್ ಆಮ್ಲ) ಬದಲಾಗಿ ಒಂದೇ ದ್ರಾವಣ ಸಲ್ಫ್ಯೂರಿಕ್ ಆಮ್ಲವನ್ನು ಉಪಯೋಗಿಸಿ ಕ್ರೋಮೇಟ್ ಲವಣಗಳನ್ನು ಉಪಯೋಗಿಸಲಾಯಿತು.  ಇದರಿಂದಾಗಿ ಸಚ್ಛಿದ್ರ ಪಾತ್ರೆಯ ಅವಸೈಕತೆ ಇಲ್ಲವಾಗಿ ಕೋಶದ ರಚನೆ ಸರಳವಾಗಿತ್ತು.  ಕೋಶದ ವಿದ್ಯುದ್ವಿಶ್ಲೇಷ್ಯದಲ್ಲಿ ಸಲ್ಫ್ಯೂರಿಕ್ ಆಮ್ಲ ಪೊಟ್ಯಾಸಿಯಂ ಡೈಕ್ರೊಮೇಟ್ ಅಥವಾ ಇದಕ್ಕಿಂತಲೂ ಅಗ್ಗವಾದ ಸೋಡಿಯಂ ಡೈಕ್ರೊಮೇಟ್ ಹರಳುಗಳನ್ನು ಉತ್ಕರ್ಷಕ ವಸ್ತುವಾಗಿ ಉಪಯೋಗಿಸಲಾಗಿತ್ತು.  ಕೋಶದಿಂದ ವಿದ್ಯುತ್ ಪೂರೈಕೆಯಾಗುವಾಗ ಆನೋಡ್ ವಸ್ತು (ಸತು) ದ್ರಾವಣದಲ್ಲಿ ಕರಗಿ ಸತುವಿನ ಸಲ್ಫೇಟ್ ಆಗಿ ಪರಿವರ್ತನೆಗೊಳ್ಳುತ್ತದೆ.  ಕೋಶದಲ್ಲಿನ ರಾಸಾಯನಿಕ ಕ್ರಿಯೆ ಹೀಗಿದೆ:
3Zಟಿ + 7ಊ2Sಔ4 + ಓಚಿ2ಅಡಿ2ಔ7 ( 3ZಟಿSಔ4 + ಓಚಿ2Sಔ4 + ಅಡಿ2(Sಔ4)3 + 7ಊ2ಔ

ಈ ಕೋಶದ ವಿಭವ 2 ವೋಲ್ಟುಗಳಿದ್ದು ಕೋಶ ಹೆಚ್ಚಿನ ವಿದ್ಯುತ್‍ಪ್ರವಾಹವನ್ನು (ಅಲ್ಪಕಾಲದ ವರೆಗೆ) ಧ್ರುವೀಕರಣದ ತೊಂದರೆ ಇಲ್ಲದೆ ಒದಗಿಸಬಲ್ಲುದು. ಆದರೆ ಈ ಕೋಶದಿಂದ ಹೆಚ್ಚಿನ ವಿದ್ಯುತ್ ಪ್ರವಾಹವನ್ನು ಪಡೆಯುವಾಗ ವೋಲ್ಟೇಜ್ ಸ್ಥಿರವಾಗಿರುವುದಿಲ್ಲ.  ಈ ವಿಷಯದಲ್ಲಿ ಡೈಕ್ರೊಮೇಟ್ ಕೋಶ ಗ್ರೌಸ್-ಬುನ್‍ಸೆನ್ ಕೋಶದೊಡನೆ ಹೋಲಿಸಿದಾಗ ಅಸಮರ್ಪಕ.

ರೌವ್ ಎಂಬ ವಿಜ್ಞಾನಿ ಕೋಶದ ಕ್ಯಾಥೋಡ್ ಬಳಿಯಲ್ಲಿ ಉತ್ಕರ್ಷಕ ವಸ್ತುಗಳಾಗಿ ಮೆಗ್ನೀಷಿಯಂ ಡೈ ಆಕ್ಸೈಡ್ (ಒgಔ2) ಅಥವಾ ಸೀಸದ ಆಕ್ಸೈಡ್ (Pbಔ2) ಘನಪದಾರ್ಥಗಳನ್ನು ಉಪಯೋಗಿಸುವ ವಿಧಾನವನ್ನು ಬಳಕೆಗೆ ತಂದದ್ದು (1856) ಪ್ರಧಾನ ವಿದ್ಯುತ್ ಕೋಶಗಳ ಬೆಳೆವಣಿಗೆಯಲ್ಲಿ ಪ್ರಮುಖ್ಯ ಹಂತ.  ಅದುವರೆಗೆ ಬಳಕೆಯಲ್ಲಿದ್ದ ವಿದ್ಯುತ್ ಕೋಶಗಳಲ್ಲಿ ಉಪಯೋಗಿಸುತ್ತಿದ್ದ ಕ್ಯಾಥೋಡ್ ದ್ರಾವಣ (ಉದಾಹರಣೆಗೆ ಗ್ರೌಸ್-ಬುನ್‍ಸೆನ್ ಕೋಶದಲ್ಲಿನ ನೈಟ್ರಿಕ್ ಆಮ್ಲ) ಆನೋಡ್ ಕಡೆಗೆ ಪ್ರವಹಿಸಿ ಆನೋಡಿನ ನಶಿಸುವಿಕೆಯಿಂದಾಗಿ ಕೋಶ ಬೇಗನೆ ನಿರುಪಯೋಗ ಸ್ಥಿತಿಗೆ ಬರುತ್ತಿತ್ತು.  ಹೊಸ ವಿಧಾನದ ಕೋಶಗಳಲ್ಲಿ ಉಪಯೋಗಿಸಿದ ಒgಔ2, Pbಔ2 ಗಳು ಕೋಶದಲ್ಲಿನ ವಿದ್ಯುದ್ವಿಶ್ಲೇಷ್ಯದಲ್ಲಿ ಕರಗದಿರುವುದರಿಂದ (ಅಥವಾ ಸ್ವಲ್ಪ ಮಾತ್ರವೇ ಕರಗುತ್ತವೆ)  ಕ್ಯಾಥೋಡ್ ದ್ರಾವಣದಿಂದಾಗಿ ಆನೋಡ್ ವಸ್ತುವಿನ ನಶಿಸುವಿಕೆ ನಿವಾರಣೆಯಾಯಿತು.  ಅಲ್ಲದೆ ಫನಪದಾರ್ಥಗಳನ್ನು ಕ್ಯಾಥೋಡ್ ವಸ್ತುಗಳಾಗಿ ಬಳಸುವುದರಿಂದ ಕೋಶದ ರಚನೆ ಸರಳವೂ ಸುಲಭವೂ ಆಯಿತು.  ಈಗ ಬಳಕೆಯಲ್ಲಿರುವ ಪ್ರಧಾನ ವಿದ್ಯುತ್‍ಕೋಶಗಳಲ್ಲಿ ಈ ವಿಧಾನವನ್ನೇ ಅನುಸರಿಸುತ್ತಾರೆ.
ದಿನನಿತ್ಯದ ಬಳಕೆಯ ಪ್ರಧಾನ ವಿದ್ಯುತ್‍ಕೋಶಗಳನ್ನು ರಚಿಸುವುದರಲ್ಲಿ ಅನೇಕ ಬಗೆಯ ಎಲೆಕ್ಟ್ರೋಡುಗಳ ಮತ್ತು ವಿದ್ಯುದ್ವಿಶ್ಲೇಷ್ಯಗಳ ಸಂಯೋಜನೆಯನ್ನು ಪ್ರಯತ್ನಿಸಲಾಯಿತು.  ಪ್ರಾಯೋಗಿಕವಾಗಿ ಹಲವಾರು ವಿದ್ಯುತ್‍ಕೋಶಗಳು ಸಮರ್ಪಕವಾಗಿ ಕಂಡು ಬರುತ್ತವೆಯಾದರೂ ಸತತವಾದ ಬಳಕೆಗೆ ಕೆಲವು ವಿದ್ಯುತ್‍ಕೋಶಗಳು ಮಾತ್ರವೇ ಸಮರ್ಪಕವಾಗಿವೆ.  ಈ ಕೋಶಗಳ ಆಯ್ಕೆಯಲ್ಲಿ ಗಮನಿಸಬೇಕಾದ ಮುಖ್ಯಾಂಶಗಳು: 1 ಕೋಶದ ರಚನೆಗೆ ತಗಲುವ ವೆಚ್ಚ; 2 ಕೋಶದ ಭಾಗಗಳ, ಮುಖ್ಯವಾಗಿ ಎಲೆಕ್ಟ್ರೋಡುಗಳ, ನಶಿಸುವಿಕೆ, 3 ಕ್ಯಾಥೋಡುಗಳ ಬಳಿ ಅನಿಲಗಳ ಬಿಡುಗಡೆ; (4) ಕೋಶವನ್ನು ಬಳಸುವುದರಲ್ಲಿ ವಹಿಸಬೇಕಾದ ಎಚ್ಚರಿಕೆ.

		ಬಳಕೆಯಲ್ಲಿರುವ ಪ್ರಧಾನ ವಿದ್ಯುತ್‍ಕೋಶಗಳನ್ನು ಮುಖ್ಯವಾಗಿ ಈ ಕೆಳಗೆ ತೋರಿಸಿರುವಂತೆ ವಿಂಗಡಿಸಬಹುದು:  (i)  ಆದ್ರ್ರಕೋಶಗಳು (ವೆಟ್ ಸೆಲ್ಸ್); (ii) ಶುಷ್ಕಕೋಶಗಳು (ಡ್ರೈ ಸೆಲ್ಸ್) (iii) ಕಾಯ್ದಿರಿಸುವ ರೀತಿಯ ಕೋಶಗಳು (ರಿಸರ್ವ್ ಟೈಪ್ ಆಫ್ ಸೆಲ್ಸ್); (iv) ಘನ ವಿದ್ಯುದ್ವಿಶ್ಲೇಷ್ಯಕೋಶಗಳು (ಸಾಲಿಡ್ ಎಲೆಕ್ಟ್ರೋಲೈಟ್ ಸೆಲ್ಸ್).

ಆದ್ರ್ರಕೋಶಗಳು: ಇವುಗಳಲ್ಲಿ ಮುಖ್ಯವಾದವು ಲೆಕ್ಲಾಂಚೆ ಕೋಶ; ಲೆಲಾಂಡೆ ಕೋಶ ಅಥವಾ ತಾಮ್ರದ ಡೈ ಆಕ್ಸೈಡ್-ಸತುವಿನ ಕೋಶ; ವಾಯುವಿಧ್ರುವೀಕೃತ ಕೋಶ (ಏರ್ ಡೀಪೋಲರೈಸ್ಡ್ ಸೆಲ್).

ಲೆಕ್ಲಾಂಚೆ ಕೋಶ: ಕೋಶದ ರಚನೆಯಲ್ಲಿ ಸತುವಿನ ಕ್ಯಾಥೋಡ್, ಘನ ಇಂಗಾಲದ ಆನೋಡುಗಳನ್ನೂ ವಿದ್ಯುದ್ವಿಶ್ಲೇಷ್ಯವಾಗಿ ಅಮೋನಿಯಂ ಕ್ಲೋರೈಡ್ ದ್ರಾವಣವನ್ನೂ ವಿಧ್ರುವೀಕಾರಕವಾಗಿ ಮ್ಯಾಂಗನೀಸ್ ಡೈಆಕ್ಸೈಡನ್ನೂ ಉಪಯೋಗಿಸುತ್ತಾರೆ.  ಲೆಕ್ಲಾಂಚೆ ಕೋಶದ ವಿದ್ಯುದ್ವಾಹಕ ಶಕ್ತಿ 1.5 ವೋಲ್ಟುಗಳು.  ಕೋಶದಿಂದ ಪಡೆಯುವ ವಿದ್ಯುತ್ಪರವಾಹ ಹೆಚ್ಚಿದಂತೆ ಎಲೆಕ್ಟ್ರೋಡುಗಳ ನಡುವಿನ ವಿಭವ ತೀವ್ರವಾಗಿ ಕಡಿಮೆಯಾಗುತ್ತದೆ.  ಹೆಚ್ಚಿನ ವಿದ್ಯುತ್ಪ್ರವಾಹವಿರುವಾಗ ಕೋಶದಲ್ಲಿನ ಧ್ರುವೀಕರಣವನ್ನು ಪೂರ್ಣವಾಗಿ ತಡೆಗಟ್ಟಲಾಗದಿರುವುದೇ ಇದಕ್ಕೆ ಕಾರಣ.  

ಚಿತ್ರ-6

ಕೋಶದಿಂದ ಸತತವಾಗಿ ವಿದ್ಯುತ್ತನ್ನು ಪಡೆಯುವ ಸಂದರ್ಭಗಳಲ್ಲಿ ವಿದ್ಯುತ್ಪ್ರವಾಹದ ಪರಿಮಾಣ ಕಡಿಮೆ ಇರುವಂತೆ (1/1000 ಆಂಪಿಯರು) ನೋಡಿಕೊಳ್ಳುವುದು ಆವಸ್ಯಕ. ಕೋಶಸ್ತಬ್ಧವಾಗಿರುವಾಗ (ಅಂದರೆ ಕೋಶದಿಂದ ವಿದ್ಯುತ್‍ಪೂರೈಕೆ ಇಲ್ಲದಿರುವಾಗ) ಈ ಕೋಶದ ಎಲೆಕ್ಟ್ರೋಡುಗಳ ರಚನೆಯಿಂದಾಗಿ ಆನೋಡ್ ಮತ್ತು ಕ್ಯಾಥೋಡುಗಳ ನಶಿಸುವಿಕೆ ಇರುವುದಿಲ್ಲ.  ಈ ಕಾರಣಗಳಿಂದಾಗಿ ಅಲ್ಪ ವಿದ್ಯುತ್ಪ್ರವಾಹದಿಂದ ಕೆಲಸಮಾಸುವ ಮತ್ತು ನಿರಂತರವಾಗಿ ಉಪಯೋಗದಲ್ಲಿಲ್ಲದ ವಿದ್ಯುದುಪಕರಣಗಳಲ್ಲಿನ ಬಳಕೆಗೆ ಲೆಕ್ಲಾಂಚೆ ಕೋಶ ಉಪಯುಕ್ತವಾಗಿದೆ.  ಉದಾಹರಣೆಗೆ ವಿದ್ಯುತ್ ಗಂಟೆಯಂಥ ಸಾಧನಗಳಲ್ಲಿ ಉಪಯೋಗಿಸಿದಾಗ ಲೆಕ್ಲಾಂಚೆ ಕೋಶ ಒಂದು ವರ್ಷಕ್ಕಿಂತಲೂ ಹೆಚ್ಚಾಗಿ ತೊಂದರೆ ಇಲ್ಲದೆ ಕೆಲಸಮಾಡುತ್ತದೆ.  ಸುಮಾರು 15-20 ವರ್ಷಗಳಿಂದೀಚೆಗೆ ಬಳಕೆಗೆ ಬಂದಿರುವ ಶುಷ್ಕ ವಿದ್ಯುತ್ ಕೋಶಗಳು ಲೆಕ್ಲಾಂಚೆ ಕೋಶದ ಬಳಕೆಯನ್ನು ಬಹಳಮಟ್ಟಿಗೆ ಕಡಿಮೆ ಮಾಡಿವೆ.  ಶುಷ್ಕ ಕೋಶ ಭೌತಿಕವಾಗಿ ಮಾರ್ಪಾಡು ಹೊಂದಿದ ಲೆಕ್ಲಾಂಚೆ ಕೋಶವೇ ಆಗಿದೆ.

ಲೆಲಾಂಡೆ ಕೋಶ:  ಕೆಲವು ವಿದ್ಯುದುಪಕರಣಗಳ ಬಳಕೆಯಲ್ಲಿ ಅಧಿಕ ಮೊತ್ತದ ವಿದ್ಯುತ್ಪ್ರವಾಹವನ್ನು ದೀರ್ಘಕಾಲ ಒದಗಿಸುವ ಕೋಶಗಳು ಬೇಕಾಗುತ್ತವೆ.  (ಉದಾಹರಣೆಗೆ ಟೆಲಿಫೋನ್ ಕೇಂದ್ರದಲ್ಲಿ, ರೈಲ್ವೆ, ಗಣಿ, ನೌಕೆ ಇತ್ಯಾದಿಗಳಲ್ಲಿ ಉಪಯೋಗಿಸುವ ಸಂಕೇತ ಸೂಚಕ ವಿದ್ಯುದ್ದೀಪಗಳಲ್ಲಿ).  ಇಂಥ ಸಂದರ್ಭಗಳಲ್ಲಿ ಲೆಲಾಂಡೆ ವಿದ್ಯುತ್‍ಕೋಶ ಅಧಿಕವಾಗಿ ಬಳಕೆಯಲ್ಲಿದೆ.  ಈ ಬಗೆಯ ಪ್ರಧಾನ ವಿದ್ಯುತ್‍ಕೋಶವನ್ನು ನಿರ್ಮಿಸಿದವ ಫೆಲಿಕ್ಸ್ ಲೆಲಾಂಡೆ ಎಂಬ ವಿಜ್ಞಾನಿ.  ಈ ಕೋಶದ ಸಂಚಯನ ಶಕ್ತಿ 500-1000 ಆಂಪಿಯರ್ ಗಂಟೆಗಳಷ್ಟು.  ಇದು 0.5-0.7 ವೋಲ್ಟ್ ವಿಭವದಲ್ಲಿ 15 ಆಂಪಿಯರುಗಳಷ್ಟು ವಿದ್ಯುತ್ಪ್ರವಾಹವನ್ನು ಒದಗಿಸಬಲ್ಲುದು.  ಕೋಶದ ಆಂತರಿಕ ನಿರೋಧವೂ ಕಡಿಮೆಯಿದ್ದು ಎಲೆಕ್ಟ್ರೋಡ್ ಬಳಿ ನಶಿಸುವಿಕೆಯೇ ಮೊದಲಾದ ಸ್ಥಳೀಯ ಕ್ರಿಯೆಗಳು ಇಲ್ಲದಿರುವುದರಿಂದ ದೀರ್ಘ ಕಾಲದ  ಬಳಕೆಗೆ ಈ ಕೋಶ ಉಪಯುಕ್ತ. ಕೋಶದ ರಚನೆಯಲ್ಲಿ ಕಾಸ್ಟಿಕ್ ಸೋಡಾ (ಸೋಡಿಯಂ ಹೈಡ್ರಾಕ್ಸೈಡನ್ನು ವಿದ್ಯುದ್ವಿಶ್ಲೇಷ್ಯವಾಗಿಯೂ ತಾಮ್ರದ ಆಕ್ಸೈಡನ್ನು ವಿಧ್ರುವೀಕಾರಕವಾಗಿಯೂ ಉಪಯೋಗಿಸುವುದರಿಂದ ಈ ಕೋಶವನ್ನು ಕಾಸ್ಟಿಕ್ ಸೋಡಾ-ತಾಮ್ರದ ಆಕ್ಸೈಡ್ ಕೋಶವೆಂದೂ ಕರೆಯುತ್ತಾರೆ. 

ಚಿತ್ರ-7

	ವಾಯು ವಿಧ್ರುವೀಕೃತ ಕೋಶ: ಇದು ಎಲ್ಲ ವಿಧದಲ್ಲೂ ಲೆಲಾಂಡೆ ಕೋಶದಂತೆಯೇ ಇದ್ದು ಕ್ಯಾಥೋಡಿನ ರಚನೆಯಲ್ಲಿ ಮಾತ್ರ ಬೇರೆಯಾಗಿದೆ. ಲೆಲಾಂಡೆ ಕೋಶದಲ್ಲಿ ಸತು ತಾಮ್ರದ ಎಲೆಕ್ಟ್ರೋಡುಗಳಿದ್ದರೆ ವಾಯುವಿಧ್ರುವೀಕೃತ ಕೋಶದಲ್ಲಿ ಸತು-ಇಂಗಾಲದ ಎಲೆಕ್ಟ್ರೋಡ್‍ಗಳಿವೆ. ಸತುವಿನ ಅನೋಡನ್ನೂ ಇಂಗಾಲದ ಕ್ಯಾಥೋಡನ್ನೂ ಉಪಯೋಗಿಸಿದಾಗ ಕ್ಯಾಥೋಡಿನ ಬಳಿಯಲ್ಲಿ ಉದ್ಭವಿಸುವ ಧ್ರುವೀಕರಣದ ತೊಂದರೆಯನ್ನು ತಪ್ಪಿಸಲು ವಿಧ್ರುವೀಕಾರಕದ ಬಳಕೆ ಅವಶ್ಯಕ. ವಾಯುವಿಧ್ರುವೀಕೃತ ಕೋಶದಲ್ಲಿ ಹೆಸರೇ ಸೂಚಿಸುವಂತೆ ವಾಯು (ವಾತಾವರಣದಲ್ಲಿನ) ವಿಧ್ರುವೀಕಾರಕವಾಗಿ ವರ್ತಿಸುತ್ತದೆ. ಈ ಕೋಶದಲ್ಲಿಯೂ ಕಾಸ್ಟಿಕ್ ಸೋಡಾವನ್ನು ವಿದ್ಯುದ್ವಿಶ್ಲೇಷ್ಯವಾಗಿ ಉಪಯೋಗಿಸಿದೆ. ಅನಿಲವನ್ನು ಹೀರುವುದರಲ್ಲಿ ಹೆಚ್ಚು ಕ್ರಿಯಾಶಾಲಿಯಾದ ಪರಿಶುದ್ಧ ಇಂಗಾಲದ ಎಲೆಕ್ಟ್ರೋಡುಗಳನ್ನು ಇಲ್ಲಿ ಉಪಯೋಗಿಸುತ್ತಾರೆ. ಇಂಗಾಲದ ಎಲೆಕ್ಟ್ರೋಡನ್ನು ವಿದ್ಯುದ್ವಿಶ್ಲೇಷ್ಯದೊಳಗೇ ಅಲ್ಲದೆ ದ್ರಾವಣದ ಮೇಲ್ಭಾಗದಲ್ಲೂ ಚಾಚಿದ್ದು ಗಾಳಿಯೊಡನೆ ಸಂಪರ್ಕಗೊಂಡಿರುವಂತೆ ಇರಿಸಿರುತ್ತಾರೆ. ವಿದ್ಯುದ್ವಿಶ್ಲೇಷ್ಯ ಇಂಗಾಲವನ್ನು ನೆನೆಸುವುದಿಲ್ಲವಾದ್ದರಿಂದ ಆ ದ್ರಾವಣ ಇಂಗಾಲದ ಎಲೆಕ್ಟ್ರೋಡ್ ಒಳಗೆ ಪಸರಿಸುವುದಿಲ್ಲ. ಆದರೆ ಹೊರಗಿನ ಗಾಳಿಯಲ್ಲಿರುವ ಆಮ್ಲಜನಕ ಎಲೆಕ್ಟ್ರೋಡ್ ಒಳಗೆ ವ್ಯಾಪಿಸಿರುತ್ತದೆ. ಕೋಶದಲ್ಲಿ ರಾಸಾಯನಿಕಕ್ರಿಯೆ ನಡೆದಾಗ ಇಂಗಾಲದ ಎಲೆಕ್ಟ್ರೋಡಿನ ಹೊರ ಮೈ ಮೇಲೆ ಶೇಖರವಾಗುವ  ಜಲಜನಕದೊಂದಿಗೆ ಆಮ್ಲಜನಕ ಸಂಯೋಗವಾಗುವುದರಿಂದ ನೀರು ಉತ್ಪತ್ತಿಯಾಗಿ ಧ್ರುವೀಕರಣದ ತೊಂದರೆ ತಪ್ಪುತ್ತದೆ. 

ಚಿತ್ರ-8

ಕೋಶದಿಂದ 1.1-1.2 ವೋಲ್ಟುಗಳಷ್ಟು ವಿಭವದಲ್ಲಿ ಆಂಪಿಯರುಗಳ ವಿದ್ಯುತ್ಪ್ರವಾಹವನ್ನು ತೊಂದರೆಯಿಲ್ಲದೆ ಪಡೆಯಬಹುದು. ಗಾಳಿಯಲ್ಲಿರುವ ಆಮ್ಲಜನಕವನ್ನು ಇಂಗಾಲದ ಎಲೆಕ್ಟ್ರೋಡುಗಳು ಹೀರಿಕೊಳ್ಳಲು ಕಾಲಾವಕಾಶ ಬೇಕಾಗುವುದರಿಂದ ಕೋಶದಿಂದ ವಿದ್ಯತ್ಪ್ರವಾಹವನ್ನು ಅವಿಚ್ಛಿನ್ನವಾಗಿ ಪಡೆಯಲು ಸಾಧ್ಯವಾಗುವುದಿಲ್ಲ. ಕೋಶ ಸಮರ್ಪಕವಾಗಿ ಕೆಲಸ ಮಾಡಲು ಇಂಗಾಲದ ಎಲೆಕ್ಟ್ರೋಡುಗಳಿಗೆ ಹೊರಗಿನಗಾಳಿಯೊಡನೆ ಅನಿರ್ಬಂಧ ಸಂಪರ್ಕ ಇರಬೇಕು. ಇದಕ್ಕಾಗಿ ಕೋಶದ ಮುಚ್ಚಳದಲ್ಲಿ ಉಸಿರಾಡುವ ರಂಧ್ರಗಳನ್ನು ನಿರುಪಯೋಗಸ್ಥಿತಿಗೆ ಬಂದಿರುವುದನ್ನು ಲೆಲಾಂಡೆ ಕೋಶದಲ್ಲಿದ್ದಂತೆ ಅನೋಡಿನ ನಶಿಸುವಿಕೆಯಿಂದಾಗಿ ತಿಳಿಯಬಹುದು. ವಾಯುವಿಧ್ರುವೀಕೃತ ಕೋಶವನ್ನು ಮುಖ್ಯವಾಗಿ ರೈಲ್ವೆಯಲ್ಲಿ ಸಂಕೇತ ದೀಪಗಳನ್ನು ಉರಿಸಲು ಉಪಯೋಗಿಸುತ್ತಾರೆ. 

	(ii) ಶುಷ್ಕಕೋಶಗಳು : ಹೆಸರು ಸೂಚಿಸುವ ಅರ್ಥದಲ್ಲಿ ಈ ಕೋಶಗಳು ನಿಜವಾದ ಶುಷ್ಕಕೋಶಗಳಲ್ಲ. (ಘನ ವಿದ್ಯುದ್ವಿಶ್ಲೇಷ್ಯ ಕೋಶಗಳ ವಿನಾ ಯಾವಕೋಶಗಳೂ ಶುಷ್ಕವಾಗಿರುವುದಿಲ್ಲ). ಉಪಯೋಗದ ದೃಷ್ಟಿಯಿಂದ ಆದ್ರ್ರಕೋಶದೊಡನೆ ಹೋಲಿಸಿದಾಗ ಈ ಬಗೆಯ ಕೋಶದಲ್ಲಿನ ರಾಸಾಯನಿಕ ಪದಾರ್ಥಗಳು ಹೊರಚೆಲ್ಲುವುದಿಲ್ಲ; ಮತ್ತು ಕೋಶವನ್ನು ಯಾವ ನಿಲುವಿನಲ್ಲಾದರೂ ಉಪಯೋಗಿಸಬಹುದು. ಆದ್ರ್ರಕೋಶಗಳಲ್ಲಿ ವಿದ್ಯುದ್ವಿಶ್ಲೇಷ್ಯ ದ್ರವರೂಪದಲ್ಲಿದ್ದು ಕೋಶವನ್ನು ಸ್ಥಳಾಂತರಿಸಿದಾಗ ಅಥವಾ ಚಲಿಸಿದಾಗ ದ್ರಾವಣ ಕೋಶದ ಪಾತ್ರೆಯೊಳಗಿನಿಂದ ಹೊರಚೆಲ್ಲುವ ಸಂಭವವಿರುತ್ತದೆ. ಇದನ್ನು ತಪ್ಪಿಸಲು ಆದ್ರ್ರಕೋಶದ ಮುಚ್ಚಳವನ್ನು ಸಾಧ್ಯವಿರುವಂಥ ಕಡೆಗಳಲ್ಲಿ ಶಾಶ್ವತವಾಗಿ ಭದ್ರವಾಗಿ ಮುಚ್ಚುವಂತೆ ಏರ್ಪಾಡು ಮಾಡಿರುತ್ತದೆ. ಆದಾಗ್ಗೂ ಆದ್ರ್ರ ಕೋಶಗಳನ್ನುಗಳೂೀಶಗಳೂೀಶಗಳನಲ್ಲಿ ಮಾತ್ರವೇ ಉಪಯೋಗಿಸಬೇಕು. ಇಲ್ಲವಾದರೆ ದ್ರಾವಣ ಸ್ಥಳಾಂತರಗೋಮಡು ಕೋಶದ ಸಮರ್ಪಕ ಕೆಲಸಕ್ಕೆ ಅಡ್ಡಿಯುಂಟಾಗುತ್ತದೆ. ಈ ತೊಂದರೆಯನ್ನು ನಿವಾರಿಸಲು ಶುಷ್ಕಕೋಶಗಳಲ್ಲಿ ಉಪಯೋಗಿಸುವ ವಿದ್ಯುದ್ವಿಶ್ಲೇಷ್ಯ ಸ್ಥಳಾಂತರಗೊಳ್ಳಲಾರದಂಥ ಸ್ತಬ್ಧ ಸ್ಥಿತಿಯಲ್ಲಿ ಇರುತ್ತದೆ. 

ಚಿತ್ರ-9

ಹಿಂದೆ ವಿವರಿಸಿದ ಲೆಕ್ಲಾಂಚೆ (ಆದ್ರ್ರ) ಕೋಶದ ರಚನೆಯಲ್ಲಿ ಮಾರ್ಪಾಡು ಮಾಡಿದ ಶುಷ್ಕಕೋಶವೇ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಬಳಕೆಯಲ್ಲಿರುವುದು. ಇದರಲ್ಲಿ ವಿದ್ಯುದ್ವಿಶ್ಲೇಷ್ಯವನ್ನು (ಅಮೋನಿಯಂ ಕ್ಲೋರೈಡ್) ಆನೋಡ್ ಮತ್ತು ಕ್ಯಾಥೋಡುಗಳ ನಡುವೆ ಇರಿಸಿದ ದ್ರಾವಣವನ್ನು ಹೀರುವಂಥ ಸಚ್ಛಿದ್ರ ಪದಾರ್ಥವೊಂದರಲ್ಲಿ ಅಡಗಿಸಿರುತ್ತದೆ. ಈ ವ್ಯವಸ್ಥೆಯಿಂದಾಗಿ ದ್ರಾವಣ ಚೆಲ್ಲಿಹೋಗುವ ಸಂಭವವಿರುವುದಿಲ್ಲ. ಕೆಲವು ಸಂದರ್ಭಗಳಲ್ಲಿ ಉದಾಹರಣೆಗೆ, ವಾತಾವರಣದ ಉಷ್ಣತೆ ಅಧಿಕವಾಗಿದ್ದಾಗ ಅಥವಾ ಕೋಶ ನಿರುಪಯೋಗ ಸ್ಥಿತಿಗೆ ಬಂದಾಗ ಕೋಶದಲ್ಲಿನ ರಾಸಾಯನಿಕ ವಸ್ತುಗಳು ವಿಕಾಸಗೊಂಡು ಕೋಶದ ಹೊರಪದರವನ್ನು ಭೇದಿಸಿಕೊಂಡು ಹೊರಕ್ಕೆ ಜಿನುಗಿ ಬರುವ ಸಂಭವವಿರುತ್ತದೆ. ಇದನ್ನು ನಿವಾರಿಸಲು ಕೋಶಗಳನ್ನು ವಿಶೇಷ ಕವಚದಿಂದ ಸುತ್ತಿರುವ ಜಿನುಗುರಹಿತ (ಲೀಕ್ ಪ್ರೂಫ್) ಕೋಶಗಳು ಇತ್ತೀಚೆಗೆ ಬಳಕೆಗೆ ಬಂದಿವೆ. ಬಳಕೆಯಲ್ಲಿರುವ ಕೆಲವು ಮುಖ್ಯವಾದ ಶುಷ್ಕಕೋಶಗಳನ್ನು ಇಲ್ಲಿ ವಿವರಿಸಿದೆ.

	ಲೆಕ್ಲಾಂಚೆ ಮಾದರಿಯ ಕೋಶ : ಜನರ ನಿತ್ಯಜೀವನದಲ್ಲಿ ಅಧಿಕಸಂಖ್ಯೆಯಲ್ಲಿ ಉಪಯೋಗದಲ್ಲಿರುವ ಪ್ರಧಾನ ಕೋಶಗಳಲ್ಲಿ ಈ ಬಗೆಯ ಶುಷ್ಕಕೋಶಗಳಿಗೆ ಪ್ರಮುಖ ಸ್ಥಾನ ಉಂಟು. ಟಾರ್ಚ್ ದೀಪಗಳಲ್ಲಿ ಟ್ರಾನ್ಸಿಸ್ಟರ್ ರೇಡಿಯೋಗಳಲ್ಲಿ, ಮಕ್ಕಳ ಆಟಿಕೆಗಳಲ್ಲಿ ಇನ್ನೂ ಅನೇಕ ವಿಧದಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಲೆಕ್ಲಾಂಚಿ ಶುಷ್ಕಕೋಶವನ್ನು ಪ್ರತಿನಿತ್ಯ ಉಪಯೋಗಿಸುತ್ತಾರೆ. ಸಾಮಾನ್ಯವಾಗಿ ಈ ಕೋಶಗಳು ವರ್ತುಲ ಸ್ತಂಭಾಕೃತಿಯಲ್ಲಿರುತ್ತವೆ. ಇವಲ್ಲದೆ ಚಪ್ಪಟೆಯಾಕಾರದ ಕೋಶಗಳೂ ಬಳಕೆಯಲ್ಲಿವೆ.

	ಟ್ರಾನ್ಸಿಸ್ಟರ್ ರೇಡಿಯೋಗಳು ಬಳಕೆಗೆ ಬರುವುದಕ್ಕಿಂತ ಮುಂಚಿತವಾಗಿ  ವಿದ್ಯುತ್ ಸರಬರಾಜು ಇಲ್ಲದ ಕಡೆಗಳಲ್ಲಿ ಉಪಯೋಗದಲ್ಲಿದ್ದ ರೇಡಿಯೋ ಸೆಟ್ಟುಗಳು ಕೆಲಸಮಾಡಲು ಬೇಕಾಗಿದ್ದ ಮತ್ತು ಈಗಲೂ ಪ್ರಯೋಗಶಾಲೆಗಳಲ್ಲಿನ ಉಪಯೋಗಕ್ಕಾಗಿ 45-90 ವೋಲ್ಟುಗಳಷ್ಟು ವಿಭವವಿರುವ ಶುಷ್ಕಕೋಶಗಳು ಬೇಕಾಗುತ್ತವೆ. ಈ ಸಂದರ್ಭಗಳಲ್ಲಿ ಕಡಿಮೆ ವಿಭವದ ಹಲವು ಕೋಶಗಳನ್ನು ಜೊತೆಯಾಗಿಟ್ಟು ಒಂದು ಕೋಶದ ಅನೋಡನ್ನು ಮುಂದಿನ ಕೋಶದ ಕ್ಯಾಥೋಡಿಗೆ ಜೋಡಿಸಿ (ವೋಲ್ಟಾ ಶ್ರೇಣಿಯಲ್ಲಿ ಇದ್ದಂತೆ) ನಿರ್ಮಿಸಿದ ಕೋಶಾವಳಿಯನ್ನು ಉಪಯೋಗಿಸಬಹುದು. ಸುರಕ್ಷಣೆಗಾಗಿ ಕೋಶಗಳ ಜೋಡಣೆಯನ್ನು ಪೆಟ್ಟಿಗೆಯಲ್ಲಿ ಇಡಬಹುದು. ಇಲ್ಲವೆ ಅವಾಹಕ ವಸ್ತುವಿನಿಂದ (ಉದಾಹರಣೆಗೆ ಮೇಣ, ಬಿಟುಮೆನ್ ಇತ್ಯಾದಿ) ಪೂರ್ತಿಯಾಗಿ ಮುಚ್ಚಿದ ಆವರಣದಲ್ಲಿ ಇಡಬಹುದು. ಇದರಿಂದ ಕೋಶವನ್ನು ಬಾಹ್ಯ ವಾತಾವರಣದ ನೀರಿನ ಆವಿ ಇತ್ಯಾದಿಗಳಿಂದ ರಕ್ಷಿಸಬಹುದು.

	(iii) ಕಾಯ್ದಿರಿಸುವ ರೀತಿಯ ಕೋಶಗಳು : ಶುಷ್ಕಕೋಶಗಳನ್ನು ತಯಾರಿಸಿದ ಅನಂತರ ಅಗತ್ಯವಿದ್ದಂತೆ ಉಪಯೋಗಿಸುವ ಸೌಕರ್ಯ ಉಂಟು. ಆದರೆ ತಯಾರಿಸಿದ ಮೇಲೆ ಒಂದು ಪರಿಮಿತ ಕಾಲದೊಳಗೆ ಇವನ್ನು ಉಪಯೋಗಿಸಬೇಕು. ಕೋಶ ವಿದ್ಯುತ್ತನ್ನು ಪೂರೈಸದೆ ಸ್ತಬ್ಧವಾಗಿರುವಾಗಲೂ ಅದರ ಅನೋಡಿನ ಬಳಿ ನಡೆಯುವ ಸ್ಥಳೀಯ ರಾಸಾಯನಿಕ ಕ್ರಿಯೆಯಿಂದಾಗಿ ಅನೋಡ್ ನಶಿಸುತ್ತಿರುತ್ತದೆ. ಅಲ್ಲದೆ ಕೋಶದಲ್ಲಿ ಉಪಯೋಗಿಸಿದ ವಿದ್ಯುದ್ವಿಶ್ಲೇಷ್ಯದ ನೀರಿನ ಭಾಗ ನಿಧಾನವಾಗಿ ಆವಿಯಾಗಿ ಹೊರಬೀಳುವುದರಿಂದ ವಿದ್ಯುದ್ವಿಶ್ಲೇಷ್ಯ ಒಣಗುತ್ತಿರುತ್ತದೆ. ಇದರಿಂದಾಗಿ ಕೋಶವನ್ನು ತಯಾರಿಸಿದ ಕೆಲಕಾಲದ ಅನಂತರ ಅದನ್ನು ಉಪಯೋಗಿಸದೆ ದಾಸ್ತಾನು ಮಾಡಿದ್ದಾಗಲೂ ಅದು ನಿರುಪಯೋಗಿಯಾಗುತ್ತದೆ. ಆದ್ದರಿಂದ ತಯಾರಿಸಿದ ಅನಂತರ ಶುಷ್ಕಕೋಶಗಳಿಗೆ ಗೊತ್ತಾದ ದಾಸ್ತಾನು ಕಾಲದ ಮಿತಿ ಇರುತ್ತದೆ. ಈ ಕಾಲದೊಳಗೆ ಉಪಯೋಗಿಸದೆ ಇಟ್ಟಿದ್ದ ಕೋಶಗಳನ್ನು ಸಹ ನಿರುಪಯೋಗವೆಂದು ಪರಿಗಣಿಸಬೇಕು. ಈ ಕಾರಣದಿಂದಾಗಿ ಅಗತ್ಯವಿರುವೆಡೆಗಳಲ್ಲಿ (ಉದಾಹರಣೆಗೆ ಮಿಲಿಟೆರಿ ಉಪಯೋಗಕ್ಕೆ ತಯಾರಿಸಿದ ಕೋಶಗಳು) ಕೋಶಗಳ ದಾಸ್ತಾನು ಕಾಲವನ್ನು ಗಮನದಲ್ಲಿಟ್ಟುಕೊಳ್ಳುತ್ತಾರೆ. ಟಾರ್ಚ್ ದೀಪಗಳಲ್ಲಿ ಉಪಯೋಗಿಸುವ ಕೋಶಗಳನ್ನು ಸುಮಾರು ಒಂದು ವರ್ಷಕಾಲ ದಾಸ್ತಾನು ಮಾಡಬಹುದು. ಆಗಲೂ ಹೆಚ್ಚು ಉಷ್ಣತೆ ಇಲ್ಲದೆಡೆಗಳಲ್ಲಿ ಮಾತ್ರ ಅವನ್ನು ಇಟ್ಟಿರಬೇಕು. ಚಿಕ್ಕ ಗಾತ್ರದ ಕೋಶಗಳ ದಾಸ್ತಾನು ಕಾಲದ ಇತಿ ಕೆಲವು ತಿಂಗಳು ಮಾತ್ರ. ಶುಷ್ಕ ಕೋಶಳನ್ನು ಉಪಯೋಗಿಸುವುದರಲ್ಲಿರುವ ಈ ತೊಂದರೆಯನ್ನು ನಿವಾರಿಸಲು ಕೋಶದ ರಚನೆಯಲ್ಲಿ ಸ್ವಲ್ಪ ಮಾರ್ಪಾಡು ಮಾಡಿದ ಕಾಯ್ದಿರಿಸುವ ಕೋಶಗಳು ಬಳಕೆಗೆ ಬಂದಿವೆ. ಮುಖ್ಯವಾಗಿ ಕೋಶದಲ್ಲಿ ಉಪಯೋಗಿಸುವ ವಿದ್ಯುದ್ವಿಶ್ಲೇಷ್ಯವನ್ನು ಉಪಯೋಗಿಸದೆ ಕೋಶಗಳನ್ನು ತಯಾರಿಸಿ ಕೋಶವನ್ನು ಉಪಯೋಗಿಸುವ ಸಂದರ್ಭ ಒದಗಿದಾಗ ಸ್ವಲ್ಪ ಮುಂಚಿತವಾಗಿ ವಿದ್ಯುದ್ವಿಶ್ಲೇಷ್ಯವನ್ನು ಕೋಶಕ್ಕೆ ಸೇರಿಸುವಂಥ ವ್ಯವಸ್ಥೆ ಇರುವುದಾದರೆ ಶುಷ್ಕಕೋಶವನ್ನು ಎಷ್ಟು ಕಾಲದವರೆಗೆ ಬೇಕಾದರೂ ತೊಂದರೆ ಇಲ್ಲದೆ ದಾಸ್ತಾನು ಮಾಡಬಹುದು. ಕಾಯ್ದಿರಿಸುವ ಕೋಶಗಳನ್ನು ಈ ಆಧಾರದ ಮೇರೆಗೆ ರಚಿಸಲಾಗಿದೆ. ಈ ಬಗೆಯ ಕೋಶಗಳನ್ನು ಒಮ್ಮೆ ಕೆಲಸವiಡುವ (ಒನ್ ಶಾಟ್) ಕೋಶಗಳು ಮತ್ತು ಸಾವಕಾಶ ಪ್ರವೃತ್ತಿಯ (ಡಿಲೇಡ್ ಏಕ್ಷನ್) ಕೋಶಗಳು ಎಂದು ಕರೆಯುತ್ತಾರೆ. ಕೋಶವನ್ನು ತಯಾರಿಸಿದಾಗ ಅದು ಜಡವಾಗಿದ್ದು ಅದನ್ನು ಉಪಯೋಗಿಸುವ ಮುಂಚೆ ಕೋಶವನ್ನು ಚೇತನಗೊಳಿಸಲು ವಿದ್ಯುದ್ವಿಶ್ಲೇಷ್ಯವನ್ನು ಸೇರಿಸಬೇಕು. ಈ ಬಗೆಯ ಕೋಶಗಳಲ್ಲಿ ಮೆಗ್ನೀಸಿಯಂ ಸಿಲ್ವರ್ ಕ್ಲೋರೈಡ್ ಕೋಶ ಮತ್ತು ಮೆಗ್ನೀಸಿಯಂ ಕಾಪರ್ ಕ್ಲೋರೈಡ್ ಕೋಶಗಳನ್ನು ಚೇತನಗೊಳಿಸಲು ನೀರನ್ನು ಉಪಯೋಗಿಸುತ್ತಾರೆ. ಈ ಕಾರಣದಿಂದಾಗಿ ಇವೆರಡು ಕೋಶಗಳ£ೀಶಗಳ£ೀಶಗಳ£ೀಶಗಳ£ವ ಕೋಶಗಳೆಂದು ಕರೆಯುತ್ತಾರೆ. ತುರ್ತು ಪರಿಸ್ಥಿತಿಯ ಉಪಯೋಗಕ್ಕಾಗಿ ಇವನ್ನು ಕಾಯ್ದಿರಿಸುತ್ತಾರೆ. ಉದಾಹರಣೆಗೆ ಸಮುದ್ರದ ಮೇಲೆ ಅಪಘಾತಕ್ಕೀಡಾಗಬಹುದಾದ ವೈಮಾನಿಕರು ಮತ್ತು ನಾವಿಕರು ಉಪಯೋಗಿಸುವ ಜೀವರಕ್ಷಣೆಯ ಸಲಕರಣೆಗಳಲ್ಲಿ ರೇಡಿಯೋ ಪ್ರಸಾರಕವೂ ಇರುತ್ತದೆ. ಈ ರೇಡಿಯೊ ಸಲಕರಣೆಯ ಉಪಯೋಗಕ್ಕೆ ಮೇಲಿನ ಕೋಶಗಳನ್ನು ಬಳಸುತ್ತಾರೆ. ಕೋಶ ಕೆಲಸ ಮಾಡುವಷ್ಟು ಕಾಲವೂ ಸ್ಥಿರ ವೋಲ್ಟೇಜ್ ದೊರೆಯುತ್ತದೆ.

	(iv) ಘನ ವಿದ್ಯುದ್ವಿಶ್ಲೇಷ್ಯ ಕೋಶಗಳು : ಸಾಮಾನ್ಯವಾಗಿ ಲವಣಗಳು ದ್ರಾವಣದಲ್ಲಿ ಕರಗಿ ವಿದ್ಯುದ್ವಿಶ್ಲೇಷ್ಯವಾಗಿ (ಧನ ಮತ್ತು ಋಣ ವಿದ್ಯುದ್ವಾಹಿ ಕಣಗಳಾಗಿ ಬೇರ್ಪಡುವುದು) ವರ್ತಿಸುತ್ತವೆ. ಕೆಲವು ಲವಣಗಳು ಘನರೂಪದಲ್ಲಿರುವಾಗಲೇ ವಿದ್ಯುದ್ವಿಶ್ಲೇಷ್ಯವಾಗಿರುತ್ತವೆ. ಇಂಥ ಘನ ವಿದ್ಯುದ್ವಿಶ್ಲೇಷ್ಯಗಳನ್ನು ಉಪಯೋಗಿಸಿಕೊಂಡು ಕೆಲಸಮಾಡುವ ಕೋಶಗಳಿಗೆ ಘನ ವಿದ್ಯುದ್ವಿಶ್ಲೇಷ್ಯ ಕೋಶಗಳೆಂದು ಹೆಸರು. ಸಿಲ್ವರ್ ಅಯೋಡೈಡ್ ಮತ್ತು ಸಿಲ್ವರ್ ಬ್ರೋಮೈಡ್ ಲವಣಗಳನ್ನು ಘನ ವಿದ್ಯುದ್ವಿಶ್ಲೇಷ್ಯಗಳಾಗಿ ಉಪಯೋಗಿಸುತ್ತಾರೆ. ಲವಣಗಳು ಘನರೂಪದಲ್ಲಿರುವಾಗ ಅವುಗಳಲ್ಲಿನ ವಿದ್ಯುದ್ವಾಹಿಕಣಗಳ ಸಂಖ್ಯೆ ಅತ್ಯಲ್ಪವಾದುದರಿಂದ (ದ್ರಾವಣದಲ್ಲಿನ ವಿದ್ಯುದ್ವಾಹಿಕಣಗಳ ಸಂಖ್ಯೆಯೊಡನೆ ಹೋಲಿಸಿದಾಗ) ಈ ರೀತಿಯ ಕೋಶಗಳಿಂದ ದೊರೆಯುವ ವಿದ್ಯುತ್ಪ್ರವಾಹ ಕಡಿಮೆ ಇರುತ್ತದೆ. ಈ ಕೋಶಗಳಲ್ಲಿ ಸ್ಥಳೀಯ ಕ್ರಿಯೆಗಳಿಗೆ ಅವಕಾಶ ಇರುವುದಿಲ್ಲ. ಮತ್ತು ವಿದ್ಯುದ್ವಿಶ್ಲೇಷ್ಯ ಒಣಗಿ ಕೋಶ ನಿರುಪಯೋಗವಾಗುವ ತೊಂದರೆ ಇರುವುದಿಲ್ಲ. ಈ ಕೋಶಗಳು ನಿಜವಾದ ಅರ್ಥದಲ್ಲಿ  ಶುಷ್ಕಕೇಶಗಳಾಗಿವೆ. ಇವುಗಳ ದಾಸ್ತಾನು ಕಾಲಮಿತಿ ಸಾಮಾನ್ಯವಾ 10-20 ವರ್ಷಗಳು. ಈ ಬಗೆಯ ಕೋಶಗಳನ್ನು ದೀರ್ಘಕಾಲ ಬಳಕೆಯಲ್ಲಿರುವ ಆದರೆ ಕಡಿಮೆ ವಿದ್ಯುತ್ಪ್ರವಾಹದಿಂದ ಕೆಲಸಮಾಡುವ ಉಪಕರಣಗಳಲ್ಲಿ ಬಹಳವಾಗಿ ಉಪಯೋಗಿಸುತ್ತಾರೆ. ಇನ್ನು ಕೆಲವು ಸಂದರ್ಭಗಳಲ್ಲಿ ಅತ್ಯಗತ್ಯದ ಉಪಕರಣಗಳಲ್ಲಿ ಉಪಯೋಗಿಸುವ ಇತರ ಬಗೆಯ ಕೋಶಗಳು ನಿರುಪಯೋಗಿಯಾದಾಗ ಇವನ್ನು ಬದಲಿಸುವ ವರೆಗೆ ಕೈಗಾವಲಾಗಿ ಘನ ವಿದ್ಯುದ್ವಿಶ್ಲೇಷ್ಯದ ಕೋಶಗಳನ್ನು ಉಪಯೋಗಿಸುತ್ತಾರೆ.

	ಸಿಲ್ವರ್-ಸಿಲ್ವರ್ ಅಯೋಡೈಡ್-ಅಯೊಡೈಡ್ ಕೋಶದ ವಿಭವ 0.69 ವೋಲ್ಟ್ ಮತ್ತು ಅದರ ಗರಿಷ್ಠ ವಿದ್ಯುತ್ಪ್ರವಾಹ 20 ಘಿ 10-6 ಆಂಪಿಯರ್ (20 ಮೈಕ್ರೊ ಆಂಪಿಯರ್).ಬಳಕೆಯಲ್ಲಿರುವ ಮತ್ತೊಂದು ಕೋಶ ಸಿಲ್ವರ್-ಸಿಲ್ವರ್ ಬ್ರೋಮೈಡ್-ಕಾಪರ್ ಬ್ರೋಮೈಡ್ ಕೋಶ. ಇದರ ಗಾತ್ರ 1" ಘಿ 1", ತೂಕ 0.15 ಔನ್ಸ್, ವಿಭವ 0.95 ವೋಲ್ಟ್. ಇದು 1 ಕೂಲಂಬ್ ವಿದ್ಯುತ್ತನ್ನು ಒದಗಿಸಬಲ್ಲುದು. 8 ಮೈಕ್ರೊ ಆಂಪಿಯರುಗಳ ಕ್ಷಣಿಕ ವಿದ್ಯತ್ಪ್ರವಾಹವನ್ನು ಇದು ಕೊಡುತ್ತದೆ. 

	2 ದ್ವಿತೀಯಕ ವಿದ್ಯುತ್‍ಕೋಶಗಳು ಅಥವಾ ವಿದ್ಯುತ್ ಸಂಚಯನ ಕೋಶಗಳು : ಹೆಚ್ಚಿನ ವಿದ್ಯುತ್ಪ್ರವಾಹದ ಅವಶ್ಯಕತೆ ಇರುವೆಡೆಗಳಲ್ಲಿ ಇಂಥ ಕೋಶಗಳನ್ನು ವಿಶೇಷವಾಗಿ ಉಪಯೋಗಿಸುತ್ತಾರೆ. ಕೆಲವು ಆಂಪಿಯರ್-ಗಂಟೆಗಳಿಂದ 1,000 ಆಂಪಿಯರ್-ಗಂಟೆಗಳಷ್ಟು ವಿದ್ಯುತ್ ಪ್ರವಾಹವನ್ನು ಕೊಡಬಲ್ಲ ಕೋಶಗಳು ಈ ಬಗೆಯ ಕೋಶಗಳಲ್ಲಿ ಬಳಕೆಯಲ್ಲಿವೆ. ದ್ವಿತೀಯಕ ಕೋಶಗಳಲ್ಲಿ ಉಪಯೋಗಿಸುವ ವಿದ್ಯುದ್ವಿಶ್ಲೇಷದ ಪ್ರಕಾರ ಇದನ್ನು ಎರಡು ಮುಖ್ಯ ಪಂಗಡಗಳನ್ನಾಗಿ ವಿಂಗಡಿಸಬಹುದು: (1) ಆಮ್ಲ ಸಂಚಯನ ಕೋಶಗಳು : (2) ಕ್ಷಾರ ಸಂಚಯನ ಕೋಶಗಳು.

	(1). ಆಮ್ಲ ಸಂಚಯನ ಕೋಶಗಳು : ಇವನ್ನು ಸೀಸ-ಆಮ್ಲ ಸಂಚಯನ ಕೋಶಗಳೆಂದೂ ಕರೆಯುವುದುಂಟು. ಕೋಶಗಳ ಉಪಯೋಗದ ದೃಷ್ಟಿಯಿಂದಾಗಿ ಇವುಗಳಲ್ಲಿ ಮೂರು ಮುಖ್ಯ ಬಗೆಗಳಿವೆ-1. ಸ್ವಯಂಚಾಲಿತ ವಾಹನಗಳಲ್ಲಿ ಆರಂಭದ ಚಲನೆಯನ್ನು ಉಂಟುಮಾಡುವುದಕ್ಕೆ ಉಪಯೋಗಿಸುವ ಕೋಶಗಳು; 2. ಚಾಲಕಶಕ್ತಿಗಾಗಿ ಉಪಯೋಗಿಸುವ ಕೋಶಗಳು; 3. ಸ್ಥಿರ ಉಪಯೋಗಕ್ಕಾಗಿ ತಯಾರಿಸಿದ ಕೋಶಗಳು. ಈ ಮೂರು ಬಗೆಯ ಕೋಶಗಳಲ್ಲೂ ಉಪಯೋಗಿಸುವ ರಾಸಾಯನಿಕ ಪದಾರ್ಥಗಳು ಮತ್ತು ಕೋಶದಲ್ಲಿ ನಡೆಯುವ ರಾಸಾಯನಿಕ ಕ್ರಿಯೆ ಒಂದೇ ಆಗಿದ್ದು ಕೋಶದ ರಚನೆಯಲ್ಲಿ ಮತ್ತು ಉಪಯೋಗಿಸಿದ ರಾಸಾಯನಿಕ ಪದಾರ್ಥಗಳ ಮೊತ್ತದಲ್ಲಿ ಮಾತ್ರ ವ್ಯತ್ಯಾಸವಿರುತ್ತದೆ. ಕೋಶದ ವಿಭವ 1.95-2.05 ವೋಲ್ಟುಗಳು.

	ಕೋಶದ ರಚನೆ : ಪ್ರಧಾನ ವಿದ್ಯುತ್‍ಕೋಶಗಳೊಡನೆ ಹೋಲಿಸಿದಾಗ ಸಂಚಯನ ಕೋಶ ಹೆಚ್ಚಿನ ಮೊತ್ತದ ವಿದ್ಯುತ್ಪ್ರವಾಹವನ್ನು ಒದಗಿಸುವುದರ  ಕಾರಣ ಇವುಗಳಲ್ಲಿ ವಿಶೇಷ ರೀತಿಯಲ್ಲಿ ರಚಿಸಿದ ಎಲೆಕ್ಟ್ರೋಡುಗಳ ಉಪಯೋಗ ಉಂಟು.  ಸಂಚಯನ ಕೋಶದ ಎಲೆಕ್ಟ್ರೋಡುಗಳಿಗೆ ತಟ್ಟೆಗಳೆಂದು ಹೆಸರು. ಎಲೆಕ್ಟ್ರೋಡಿನ ಪದಾರ್ಥಗಳಾದ Pb  ಮತ್ತು Pbಔ2 ಗಳನ್ನು ಹೆಚ್ಚಿನ ಮೊತ್ತದಲ್ಲಿ ಉಪಯೋಗಿಸುವುದರಿಂದ ಕೋಶದ ವಿದ್ಯುತ್ಪ್ರವಾಹವನ್ನು ಹೆಚ್ಚಿಸಬಹುದು. ಇದಕ್ಕಾಗಿ ಕ್ರಿಯಾಶಾಲಿ ಪದಾರ್ಥಗಳನ್ನು ತಟ್ಟೆಯ ರೀತಿಯಲ್ಲಿ ರಚಿಸುವುದರಿಂದ ಆಮ್ಲ ಮತ್ತು ಕ್ರಿಯಾಶಾಲಿ ಪದಾರ್ಥಗಳ ಸಂಪರ್ಕ ಹೆಚ್ಚಾಗುತ್ತದೆ. ತಟ್ಟೆಗಳ ವಿಸ್ತೀರ್ಣ ಮತ್ತು ಗಾತ್ರ ಜಾಸ್ತಿ ಇದ್ದಷ್ಟೂ ಕೋಶದ ವಿದ್ಯುತ್ ಸಂಚಯನ ಶಕ್ತಿ ಹೆZ್ಚು ಇರುತ್ತದೆ. ಕ್ರಿಯಾಶಾಲಿ ಪದಾರ್ಥಗಳಾದ Pb ಮತ್ತು Pbಔ2ಗಳನ್ನೇ(ಇವುಗಳ ಭೌತಗುಣಗಳಿಂದಾಗಿ) ತಟ್ಟೆಯ ರೀತಿಯಲ್ಲಿ ರಚಿಸಲು ಸಾಧ್ಯವಿಲ್ಲವಾದ್ದರಿಂದ ಆಧಾರಕ್ಕಾಗಿ ಲೋಹದ ಚೌಕ ಜಾಲರಿಗಳನ್ನು ಉಪಯೋಗಿಸುತ್ತಾರೆ. ಜಾಲರಿಯ ಚೌಕ ಸಂದುಗಳಲ್ಲಿ  Pb ಮತ್ತು Pbಔ2 ಗಳನ್ನು ಅಳವಡಿಸುತ್ತಾರೆ.  ಈ ಜಾಲರಿಯ ಮೂiÀು Áಲರಿಯ Áಲರಿಯ ಋಣ ಎಲೆಕ್ಟ್ರೋಡುತಗಳು ಬಾಹ್ಯಮಂಡಲದೊಂದಿಗೆ ವಿದ್ಯುತ್ ಸಂಪರ್ಕವನ್ನು ಪಡೆದಿರುವುದು. ಅನೇಕ ಜಾಲರಿಗಳ ಒಟ್ಟುಜೋಡಣೆಯ ಸಂಘಟಿತ ಎಲೆಕ್ಟ್ರೋಡುಗಳು ಕೋಶದ ಧನ ಮತ್ತು ಋಣ ಎಲೆಕ್ಟ್ರೋಡುಗಳಾಗಿರುತ್ತವೆ. ಜಾಲರಿಗಳನ್ನು ಪರಿಶುದ್ಧವಾದ ಸೀಸದೊಂದಿಗೆ 5%-12% ಆಂಟಿಮೊನಿ ಮತ್ತು 0.5% ತವರವನ್ನು ಬೆರೆಸಿದ ಮಿಶ್ರ ಲೋಹದಿಂದ ಎರಕ ಹೊಯ್ದು ತಯಾರಿಸುತ್ತಾರೆ.  ಅತಿ ಮೃದುವಾಗಿರುವ ಸೀಸ ಆಂಟಿಮೊನಿಯ ಮಿಶ್ರಣದಿಂದಾಗಿ ಗಡುಸಾಗಿರುತ್ತದೆ. ಸೀಸದಿಂದ ಜಾಲರಿಗಳನ್ನು ತಯಾರಿಸುವುದರಿಂದ ಎಲೆಕ್ಟ್ರೋಡುಗಳು ಸಲ್ಫ್ಯೂರಿಕ್ ಆಮ್ಲದಲ್ಲಿ ಹೆಚ್ಚುಕಾಲ ನಶಿಸದೆ ಇರಬಲ್ಲವು. ತವರ ತುಕ್ಕುಹಿಡಿಯುವಿಕೆಯನ್ನು ತಡೆಯುತ್ತದೆ.

	ಜಾಲರಿಗಳಿಂದ ಎಲೆಕ್ಟ್ರೋಡುಗಳನ್ನು ರಚಿಸುವುದರಲ್ಲಿ ಎರಡು ಮುಖ್ಯ ವಿಧಾನಗಳನ್ನು ಅನುಸರಿಸುತ್ತಾರೆ. 1.ಪ್ಲಾಂಟೆ ವಿಧಾನ 2.ಫಾರೆ ವಿಧಾನ.
	ಫಾರೆ ವಿಧಾನದ ತಟೆಗಳು ಪ್ಲಾಂಟೆ ವಿಧಾನದ ತಟ್ಟೆಗಳಿಗಿಂತ ಹಗುರ ಮತ್ತು ಕೋಶದ ವಿದ್ಯುತ್ ಸಂಚಯನವನ್ನು ಹೆಚ್ಚಿಸುತ್ತವೆ. ಆದರೆ ಫಾರೆ ತಟ್ಟೆಗಳಲ್ಲಿ ಕ್ರಿಯಾಶಾಲಿ ಪದಾರ್ಥಗಳು ಜಾಲರಿಯಿಂದ ಕಳಚಿ ಬೀಳುವ ಸಂಭವವಿದ್ದು ಕೋಶ ಈ ಕಾರಣದಿಂದಾಗಿಯೂ ನಿರುಪಯೋಗವಾಗುತ್ತದೆ.

ಚಿತ್ರ-10-1

 ಪ್ಲಾಂಟೆ ವಿಧಾನದಲ್ಲಿ ಸೀಸದ  ಜಾಲರಿಯ ಮೇಲ್ಮೈ ಮೇಲೆ ವಿದ್ಯುದ್ರಾಸಾಯನಿಕಕ್ರಿಯೆಗಳಿಂದ ಕ್ರಿಯಾಶಾಲಿ ಪದಾರ್ಥಗಳನ್ನು ತೆಳುವಾದ ಪದರದ ರೀತಿಯಲ್ಲಿ ಉಂಟುಮಾಡುತ್ತಾರೆ. ಈ ಕ್ರಿಯೆಯಲ್ಲಿ ಬೇಕಾಗುವ ಸೀಸವನ್ನು ಜಾಲರಿಯೇ ಒದಗಿಸುತ್ತದೆ. ಜಾಲರಿಯ ಮೇಲೆ ಉಂಟಾಗುವ ಕ್ರಿಯಾಶಾಲೀ ಪದಾರ್ಥಗಳ ಮೊತ್ತ ಜಾಲರಿಯ ಮೇಲ್ಮೈ ಮೇಲೆ ಸಿಕ್ಕುವ ಒಟ್ಟು ಸ್ಥಳದ ವಿಸ್ತೀರ್ಣವನ್ನು ಅವಲಂಬಿಸಿರುವುದರಿಂದ ವಿಶೇಷ ರೀತಿಯಲ್ಲಿ ಜಾಲರಿಗಳನ್ನು ತಯಾರಿಸಿರುತ್ತಾರೆ.

ಚಿತ್ರ-10-2

 ಜಾಲರಿಯ ಕಿವಿರುಗಳಿರುವಂತೆ ರಚಿಸುವುದರಿಂದ ವಿದ್ಯುದ್ರಾಸಾಯನಿಕಕ್ರಿಯೆಯಲ್ಲಿ ಹೆಚ್ಚಿನ ಮೊತ್ತದಲ್ಲಿ ಕ್ರಿಯಾಶಾಲಿ ಪದಾರ್ಥಗಳು ಉಂಟಾಗುತ್ತವೆ. ಪ್ಲಾಂಟೆ ತಟ್ಟೆಗಳನ್ನು ರಾಸಾಯನಿಕಕ್ರಿಯೆಗೆ ಒಳಪಡಿಸಿದಾಗ ತಟ್ಟೆಗಳಲ್ಲಿನ ಶುದ್ಧ ಸೀಸ ಸೀಸದ ಪೆರಾಕ್ಸೈಡ್ ಆಗಿ ಪರಿವರ್ತಿತವಾಗಿ ಕೋಶದ ಧನಧ್ರುವದ ತಟ್ಟೆಗಳು ತಯಾರಾಗುತ್ತವೆ. ಈ ತಟ್ಟೆಗಳನ್ನು ಪುನಃ ರಾಸಾಯನಿಕಕ್ರಿಯೆಗೆ (ವಿಪರ್ಯಾಯ) ಒಳಪಡಿಸಿ ತಟ್ಟೆಯಲ್ಲಿನ ಸೀಸದ ಪೆರಾಕ್ಸೈಡನ್ನು ಪರಿಶುದ್ಧ ಸೀಸವನ್ನಾಗಿ ಪರಿವರ್ತಿಸಿ ಕೋಶದ ಋಣ ಧ್ರುವದ ತಟ್ಟೆಗಳನ್ನು ತಯಾರಿಸುತ್ತಾರೆ.
	ಪ್ಲಾಂಟೆ ಧನದ್ರುವದ ತಟ್ಟೆಯಲ್ಲಿ ಸೀಸವೆಲ್ಲವೂ ಸೀಸದ ಪೆರಾಕ್ಸೈಡ್ ಆಗಿರದೆ ತಟ್ಟೆಯ ಸೀಸದ ಮೇಲೆ ಕಟ್ಟೆನಿಂತಿರುವ ಸೀಸದ ಪೆರಾಕ್ಸೈಡ್ ಪದರವಿರುತ್ತದೆ. ಕೋಶವನ್ನು ಅನೇಕಾವರ್ತಿ ವಿದ್ಯುತ್ ಪೂರೈಕೆ, ಸಂಚಯನಗಳಲ್ಲಿನ ರಾಸಾಯನಿಕ ಕ್ರಿಯೆಗೆ ಒಳಪಡಿಸಿದಾಗ ಸೀಸದ ಪೆರಕ್ಸೈಡ್ ವಸ್ತು ಘನಗಾತ್ರದಲ್ಲಿ ವ್ಯತ್ಯಾಸಹೊಂದುತ್ತದೆ. ಇದರಿಂದಾಗಿ ಪೆರಾಕ್ಸೈಡ್ ಪದರದ ಕೆಳಭಾಗದ ಸೀಸ ಗಾತ್ರದಲ್ಲಿ ಹೆಚ್ಚಾಗುವುದರಿಂದ ಕ್ರಮೇಣವಾಗಿ ಪ್ಲಾಂಟೆ ತಟ್ಟೆಗಳ ವಿಸ್ತೀರ್ಣ ಏರುತ್ತದೆ. ಪ್ಲಾಂಟೆ ತಟ್ಟೆಗಳನ್ನು ಅಳವಡಿಸಿ ಕೋಶವನ್ನು ರಚಿಸಿದ ಅನಂತರ ತಟ್ಟೆಗಳ ಗಾತ್ರ ವಿಕಾಸವನ್ನು ತಕ್ಕರೀತಿಯಲ್ಲಿ ಸರಿದೂಗಿಸದಿದ್ದರೆ ತಟ್ಟೆಗಳ ಉದ್ದ ಅಗಲಗಳು ವ್ಯತ್ಯಾಸವಾಗಿ ತಟ್ಟೆಗಳು ಡೊಂಕಾಗುವುದರಿಂದ ತೊಂದರೆ ಉಂಟಾಗುತ್ತದೆ.  ಸೀಸದ ಗಾತ್ರ ವಿಕಾಸವಾಗುವುದು ಕ್ರಿಯಾಶಾಲಿಪದಾರ್ಥಗಳಿರುವ ಕಿವಿರುಗಳ ಮೇಲೆ. ಈ ಕಿವಿರುಗಳನ್ನು ತಟ್ಟೆಯ ಉದ್ದ  ಅಗಲಗಳಿಗೆ ಲಂಬವಾಗಿರುವಂತೆ (ತಟ್ಟೆಯ ದಪ್ಪದ ದಿಕ್ಕಿನಲ್ಲಿ) ನಿಲ್ಲಿಸುವುದರಿಂದ ತಟ್ಟೆಯ ಗಾತ್ರ ವಿಕಾಸವಾದಾಗ ತಟ್ಟೆ ಹೆಚ್ಚು ದಪ್ಪವಾಗುತ್ತದೆ. ಇದರಿಂದಾಗಿ ತಟ್ಟೆಯ ಉದ್ದ ಅಗಲ ಸ್ಥಿರವಾಗಿರುತ್ತದೆ.
	ಸಾರರಿಕ್ತ ಸಲ್ಫ್ಯೂರಿಕ್ ಆಮ್ಲದ ತೊಟ್ಟಿಯಲ್ಲಿ ತಟ್ಟೆಗಳನ್ನು ಮುಳುಗಿಸಿ ಇವುಗಳ ಮೂಲಕ ವಿದ್ಯುತ್ತನ್ನು ಒಂದು ದಿಕ್ಕಿನಲ್ಲಿ ಪ್ರವಹಿಸಿದಾಗ ತಟ್ಟೆಯ ಮೇಲೆ ಸೀಸದ ಪೆರಾಕ್ಸೈಡ್ (Pbಔ2)ಉಂಟಾಗಿ ಧನಧ್ರುವದ ತಟ್ಟೆಗಳು ತಯಾರಾಗುತ್ತವೆ. ತಟ್ಟೆಗಳ ಮೂಲಕ ವಿದ್ಯುತ್ತನ್ನು ವಿರುದ್ಧದಿಕ್ಕಿನಲ್ಲಿ ಪ್ರವಹಿಸಿದಾಗ ಪರಿಶುದ್ಧ ಸೀಸ (ಸ್ಪಾಂಜ್ ಸೀಸ) ಉಂಟಾಗಿ ಋಣಧ್ರುವದ ತಟ್ಟೆಗಳು ತಯಾರಾಗುತ್ತವೆ. ಸಾಮಾನ್ಯವಾಗಿ ಏಕಕಾಲದಲ್ಲಿ ವಿದ್ಯುತ್ತನ್ನು ಸೂಕ್ತ ದಿಕ್ಕಿನಲ್ಲಿ ಪ್ರವಹಿಸುವುದರ ಮೂಲಕ ಧನ ಮತ್ತು ಋಣ ಧ್ರುವದ ತಟ್ಟೆಗಳನ್ನು ತಯಾರಿಸುತ್ತಾರೆ. ಋಣಧ್ರುವದ ತಟ್ಟೆಗಳಲ್ಲಿನ ಸ್ಪಾಂಜ್‍ಸೀಸ ಬಳಕೆಯಲ್ಲಿರುವಾಗ ಕ್ರಮೇಣವಾಗಿ ಕುಗ್ಗುತ್ತದೆ. ಇದನ್ನು ತಡೆಗಟ್ಟಲು ಋಣ ಎಲೆಕ್ಟ್ರೋಡ್ ತಟ್ಟೆಗಳ ಕಣಿಕದ ಮಿಶ್ರಣಕ್ಕೆ ರಾಸಾಯನಿಕವಾಗಿ ಜಡವಾಗಿರುವ ವಸ್ತುವನ್ನು ಬೆರೆಸುತ್ತಾರೆ. ಸಾಮಾನ್ಯವಾಗಿ ಈ ವಸ್ತು ದೀಪದ ಕಪ್ಪು(ಇಂಗಾಲ) ಮತ್ತು ಬೇರಿಯಂ ಸಲ್ಫೇಟ್ ಮಿಶ್ರಣ. ಈ ಮಿಶ್ರಣ ಸ್ಪಾಂಜ್ ಸೀಸದಂತೆ ಕುಗ್ಗುವುದಿಲ್ಲವಾದ್ದರಿಂದ ಕಣಿಕ ಜಾಲರಿಯಲ್ಲಿ ಭದ್ರವಾಗಿ ನಿಂತಿರುತ್ತದೆ.
	ಕಬ್ಬಿಣದ ಹೊದಿಕೆಯ ತಟ್ಟೆಗಳಲ್ಲಿ ಸಮಾಂತರವಾಗಿ ಇರಿಸಿದ ಎರಡು ಸರಳುಗಳ ನಡುವೆ (ಎರಡು ಸರಳುಗಳೂ ಮಿಶ್ರಲೋಹದ್ದಿರಬಹುದು ಇಲ್ಲವೆ ಮೇಲಿನದು ಮಿಶ್ರಲೋಹದ್ದಾಗಿದ್ದು ಕೆಳಗಿನದು ಪ್ಲಾಸ್ಟಿಕ್‍ನಿಂದ ಮಾಡಿರಬಹುದು) ಹಿಡಿದು ನಿಂತಿರುವಂತೆ ಮಿಶ್ರಲೋಹದ ಕಡ್ಡಿಗಳನ್ನು ಲಂಬವಾಗಿ ಒಂದಕ್ಕೊಂದು ಸಮಾಂತರವಾಗಿರುವಂತೆ ಜೋಡಿಸುತ್ತಾರೆ. ಲಂಬದ ಕಡ್ಡಿಗಳನ್ನು ಸುತ್ತಿರುವಂತೆ ಸ್ತಂಭಾಕೃತಿಯ ಟೊಳ್ಳಾದ ಪಾಲೆಸ್ಟೈರಿನ್ ಕೊಳವೆಯನ್ನಿರಿಸಿ ಕಡ್ಡಿಗಳ ಮತ್ತು ಕೊಳವೆಯ ನಡುವಿನ ಜಾಗವನ್ನು ಕ್ರಿಯಾಶಾಲಿಪದಾರ್ಥದ ಕಣಿಕದಿಂದ ತುಂಬಿಸುತ್ತಾರೆ. ಪಾಲೆಸ್ಟೈರಿನ್ ಕೊಳವೆಯ ಉದ್ದಕ್ಕೂ ಸಮಾಂತರ ದೂರದಲ್ಲಿ ರಂಧ್ರಗಳಿದ್ದು ಈ ರಂಧ್ರಗಳ ಮೂಲಕವಾಗಿ ಕೋಶದ ವಿದ್ಯುದ್ವಿಶ್ಲೇಷ್ಯ ಕ್ರಿಯಾಶಾಲಿ ಪದಾರ್ಥಗಳೊಂದಿಗೆ ಸಂಪರ್ಕ ಪಡೆದಿರುತ್ತದೆ.
	ಈ ಹಲವು ವಿಧಾನಗಳಲ್ಲಿ ಯಾವುದೇ ವಿಧಾನದಿಂದ ತಟ್ಟೆಗಳನ್ನು ತಯಾರಿಸಿದರೂ ತಟ್ಟೆಗಳ ಒಂದು ತುದಿಯಲ್ಲಿ ಲೋಹದ ಚಾಚಿದ ಭಾಗವಿರುವಂತೆ ಜಾಲರಿಯನ್ನು ತಯಾರಿಸಿರುತ್ತಾರೆ. ಕೋಶದೊಳಗೆ ಎಲೆಕ್ಟ್ರೋಡ್ ತಟ್ಟೆಗಳನ್ನು ಸಮಾಂತರವಾಗಿಟ್ಟು ತಟ್ಟೆಗಳ ಚಾಚಿದ ಭಾಗವನ್ನು ಸೇರಿಸಿ ಹಿಡಿಯುವಂತೆ ಲೋಹದ ಪಟ್ಟಿಯೊಂದನ್ನು ಕೂಡಿಸುತ್ತಾರೆ. ಇದಕ್ಕೆ ಸೇರಿದಂತಿರುವ ಲೋಹದ ಸಂಬಂಧಕ (ತಿರುಪು) ವಿದ್ಯುತ್‍ಕೋಶವನ್ನು ಬಾಹ್ಯ ಪರಿಧಿಗೆ ಸೇರಿಸುವ ಎಲೆಕ್ಟ್ರೋಡ್ ಆಗಿ ಉಪಯೋಗವಾಗುತ್ತದೆ. ಕೋಶದಲ್ಲಿ ಎಲೆಕ್ಟ್ರೋಡುಗಳನ್ನು ಜೋಡಿಸಿದಾಗ ಧನ ಮತ್ತು ಋಣ ಎಲೆಕ್ಟ್ರೋಡ್ ತಟ್ಟೆಗಳು ಸಮಾಂತರವಾಗಿ ಒಂದರ ತರುವಾಯ ಮತ್ತೊಂದು ಆದರೆ ಒಂದಕ್ಕೊಂದು ತಗಲದಂತೆ ಇರುತ್ತವೆ. ತಟ್ಟೆಗಳ ಮಧ್ಯದಜಾಗದಲ್ಲಿ  ವಿದ್ಯುದವಾಹಕದ ಸಚ್ಛಿದ್ರ ತೆರೆಗಳನ್ನಿಡುವುದರಿಂದ ಧನ ಮತ್ತು ಋಣ ಎಲೆಕ್ಟ್ರೋಡುಗಳು ಆಕಸ್ಮಿಕವಾಗಿ ತಗಲುವ ಸಂಭವವಿರುವುದಿಲ್ಲ. ಈ ಸಚ್ಛಿದ್ರ ತೆರೆಗಳ ಮೂಲಕ ವಿದ್ಯುದ್ವಿಶ್ಲೇಷ್ಯ ಸರಾಗವಾಗಿ ಎಲೆಕ್ಟ್ರೋಡುಗಳೊಡನೆ ಸಂಪರ್ಕಗೊಂಡಿರುತ್ತದೆ. ತೆರೆಗಳನ್ನು ಮರ, ರಬ್ಬರ್, ಪ್ಲಾಸ್ಟಿಕ್‍ನಿಂದಾಗಲಿ ಇಲ್ಲವೇ ಗಾಜಿನ ಎಳೆಗಳಿಂದಾಗಲಿ ತಯಾರಿಸುತ್ತಾರೆ.

ಚಿತ್ರ-ಸ್ಟೇಷನರಿ-ಕೋಶ

	ಕೋಶದ ಪಾತ್ರೆಯನ್ನು ಸಾಮಾನ್ಯವಾಗಿ ಗಾಜು, ಗಡಸು ರಬ್ಬರ್, ಕಪ್ಪುರಾಳ ಅಥವಾ ಪ್ಲಾಸ್ಟಿಕುಗಳಿಂದ ತಯಾರಿಸುತ್ತಾರೆ. ಸಾಮಾನ್ಯವಾಗಿ ಇವು ಚೌಕಾಕಾರದಲ್ಲಿರುತ್ತದೆ. ಕೋಶಗಳನ್ನು ಸ್ಥಳಾಂತರಿಸದೆ ಒಂದೇ ಕಡೆ ಉಪಯೋಗಿಸುವಂಥ ಕೋಶಗಳನ್ನು ಗಾಜಿನಿಂದ ತಯಾರಿಸುತ್ತಾರೆ. ಗಾಜಿನ ಪಾರದರ್ಶಕತೆ, ಬಾಳಿಕೆ ಮತ್ತು ಕಡಿಮೆ ಬೆಲೆ ಇವುಗಳ ಉಪಯುಕ್ತತೆಗೆ ಕಾರಣವಾಗಿದೆ. ವಾಹನಗಳಲ್ಲಿ ಉಪಯೋಗಿಸುವ ಕೋಶದ ಪಾತ್ರೆಗಳನ್ನು ಸಾಧಾರಣವಾಗಿ ಗಡಸು ರಬ್ಬರಿನಿಂದ ತಯಾರಿಸುತ್ತಾರೆ. ಇತೀಚೆಗೆ ಪ್ಲಾಸ್ಟಿಕ್‍ನಿಂದ ತಯಾರಾದ ಕೋಶದ ಪಾತ್ರೆಗಳು ಉಪಯೋಗಕ್ಕೆ ಬರುತ್ತಿವೆ. ಕೋಶವನ್ನು ಸ್ಥಳಾಂತರಿಸುವಾಗ ವಿದ್ಯುದ್ವಿಶ್ಲೇಷ್ಯ ತುಳುಕಾಟದಲ್ಲಿ ಚೆಲ್ಲಿ ಹೋಗದಂತಿರಲು ಕೋಶದ ಬಾಯಿಯನ್ನು ಪ್ಲಾಸ್ಟಿಕ್‍ನಂಥ ಬಿಟುಮೆನ್ ಪದಾರ್ಥದಿಂದ ಭದ್ರವಾಗಿ ಮುಚ್ಚಿರುತ್ತಾರೆ. ಈ ಮುಚ್ಚಳದಲ್ಲಿ ಎಲೆಕ್ಟ್ರೋಡುಗಳಿಗೆ ಸಂಬಂಧಿಸಿರುವ ತಿರುಪುಗಳನ್ನು ಅಳವಡಿಸಿರುತ್ತಾರೆ. ಕೋಶದಲ್ಲಿ ನೀರು ಅಥವಾ ವಿದ್ಯುದ್ವಿಶ್ಲೇಷ್ಯವನ್ನು ತುಂಬಲು ಅನುಕೂಲವಾಗುವಂತೆ ತಿರುಪಿನಿಂದ ಬಂಧಿಸಲು ಸಾಧ್ಯವಿರುವ ರಂಧ್ರವನ್ನೂ ಮುಚ್ಚಳದಲ್ಲಿ ಇಟ್ಟಿರುತ್ತದೆ. 

ಚಿತ್ರ-11

ಈ ರಂಧ್ರಮೂಲಕವಾಗಿಯೇ ದ್ರಾವಣದ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಗುರುತ್ವ ಮಾಪಿಯ ರಬ್ಬರ್ ಕೊಳವೆಯನ್ನು ಕೋಶದೊಳಕ್ಕೆ ಇಳಿಬಿಡುವುದು. ಕೋಶದಲ್ಲಿ ಬಿಡುಗಡೆಯಾಗಬಹುದಾದ ಅನಿಲಗಳು ಹೊರಗೆ ಹೋಗಲು ಸೂಕ್ರವಾದ ಕಂಡಿಯನ್ನೂ ಕೋಶದ ಮುಚ್ಚಳದಲ್ಲಿ ಅಳವಡಿಸಿರುತ್ತಾರೆ. 
	ಕೆಲವು ಸಂದರ್ಭಗಳಲ್ಲಿ ಪೂರ್ಣ ವಿದ್ಯುತ್ ಸಂಗ್ರಹವಿರುವ (ಅಂದರೆ ಎಲೆಕ್ಟ್ರೋಡುಗಳ ಕ್ರಿಯಾಶಾಲಿ ಪದಾರ್ಥಗಳಿಂದ ಆವರಿತವಾಗಿರುತ್ತವೆ) ಕೋಶದಿಂದ ವಿದ್ಯುದ್ವಿಶ್ಲೇಷ್ಯವನ್ನು ಹೊರತೆಗೆದು ಕೋಶದೊಳಗೆ ಗಾಳಿ ಹೋಗದಂತೆ ಭದ್ರವಾಗಿ ಮುಚ್ಚುತ್ತಾರೆ. 

ಚಿತ್ರ-12

ಈ ಕೋಶವನ್ನು ಎಷ್ಟು ಕಾಲದವರೆಗೆ ಬೇಕಾದರೂ ದಾಸ್ತಾನು ಮಾಡಿಟ್ಟಿದ್ದು ಉಪಯೋಗಿಸಬೇಕಾದಾಗ ಕೋಶದೊಳಕ್ಕೆ ವಿದ್ಯುದ್ವಿಶ್ಲೇಷ್ಯವನ್ನು ಸೇರಿಸುವುದರಿಂದ ಕೋಶವನ್ನು ಉತ್ತೇಜನಗೊಳಿಸಬಹುದು. ಇಂಥ ಕೋಶಗಳನ್ನು ಶುಷ್ಕವಿದ್ಯುತ್ ಸಂಚಯನ ಕೋಶಗಳೆಂದು ಕರೆಯಬಹುದು. ಇವು ಪ್ರಧಾನ ವಿದ್ಯುತ್ ಕೋಶಗಳಲ್ಲಿನ ಶುಷ್ಕಕೋಶಗಳಷ್ಟು ಅನುಕೂಲತೆಗಳನ್ನು ಒದಗಿಸಿಕೊಡುವುದಿಲ್ಲವಾದರೂ ದಾಸ್ತಾನು
ಮಾಡುವ ದೃಷ್ಟಿಯಿಂದ ಮತ್ತು ಕೋಶದ ಬಾಳಿಕೆಯ ದೃಷ್ಟಿಯಿಂದ ಹೆಚ್ಚು ಪ್ರಯೋಜನಕಾರಿಗಳಾಗಿವೆ. ಮತ್ತೆ ಕೆಲವು ಸಂದರ್ಭಗಳಲ್ಲಿ ಇಂಥ ಕೋಶಗಳನ್ನು ಕಾಯ್ದಿರಿಸುವ ಕೋಶಗಳೆಂದೂ ಪರಿಗಣಿಸುತ್ತಾರೆ.

ಚಿತ್ರ-ಅಟೊಮೊಬೈಲ್-ಕೋಶ

	ದ್ವಿತೀಯಕ ಕೋಶಗಳ ತಯಾರಿಕೆಯಲ್ಲಿ ಉಪಯೋಗಿಸುವ ಸೀಸ ಮತ್ತು ಸಲ್ಫ್ಯೂರಿಕ್ ಆಮ್ಲಗಳು ಅತ್ಯಂತ ಪರಿಶುದ್ಧವಾಗಿರಬೇಕು. ಬಳಕೆಯಲ್ಲಿರುವ ಕೋಶಗಳಲ್ಲಿ ಉಪಯೋಗಿಸುವ ಶುದ್ಧಸೀಸದಲ್ಲಿ 99.95% ಸೀಸವಿದ್ದು ಅತಿ ಸವಲ್ಪ ಭಾಗ ಬೆಳ್ಳಿ, ತಾಮ್ರ ಮತ್ತು ನಿಲುಗಳ ಮಿಶ್ರಣವಿರುತ್ತದೆ. ಸಲ್ಫ್ಯೂರಿಕ್ ಆಮ್ಲದಲ್ಲಿ ಶತಾಂಶಕ್ಕಿಂತ ಹೆಚ್ಚು ಅಶುದ್ಧತೆ ಇರದಂತೆ ನೋಡಿಕೆ ನೊÀಂತೆ ನೊÀಂತೆ ನೊಸಾಮಾನ್ಯವಾಗಿ ಸಲ್ಫ್ಯೂರಿಕ್ ಆಮ್ಲದಲ್ಲಿ ಶತಾಂಶಕ್ಕಿಂತ ಹೆಚ್ಚು ಅಶುದ್ಧತೆ ಇರದಂತೆ ನೋಡಿಕೊಳ್ಳುವುದು ಅಗತ್ಯ. ಸಾಮಾನ್ಯವಾಗಿ ಸಲ್ಫ್ಯೂರಿಕ್ ಆಮ್ಲದಲ್ಲಿ ಕಬ್ಬಿಣದ ಅಶುದ್ಧತೆ ಇರುತ್ತದೆ. ಕೆಲವು ವೇಳೆ ವಿದ್ಯುನ್ಮಂಡಲದಲ್ಲಿ ಸಂಪರ್ಕಕ್ಕಾಗಿ ಉಪಯೋಗಿಸುವ ತಾಮ್ರದ ತಂತಿಯಿಂದಾಗಿ ತಾಮ್ರ ಕೋಶದೊಳಗೆ ಸೇರಿ ಋಣಧ್ರುವದ ಮೇಲೆ ಶೇಖರವಾಗುವುದರಿಂದ ಕೋಶದಲ್ಲಿ ಜಲಜನಕದ ಬಿಡುಗಡೆಗೆ ಕಾರಣವಾಗಬಹುದು. ಈ ರೀತಿ ಬೆರೆಯುವ ತಾಮ್ರದ ಮೊತ್ತ 0.01% ಕ್ಕಿಂತಲೂ ಕಡಿಮೆ ಇರಬೇಕು.
	ಕೋಶದಲ್ಲಿ ವಿದ್ಯುತ್ ಸಂಗ್ರಹಣೆ : ಕೋಶದ ಎಲೆಕ್ಟ್ರೋಡುಗಳ ಮೂಲಕ ಏಕಮುಖ ವಿದ್ಯುತ್ತನ್ನು ಕೋಶದ ವಿದ್ಯುತ್ ಪೂರೈಕೆಯ ವಿರುದ್ಧ ದಿಕ್ಕಿನಲ್ಲಿ ಪ್ರವಹಿಸುವುದರಿಂದ ವಿದ್ಯುತ್ ಪೂರೈಕೆ ನಿಂತು ಕೋಶದಲ್ಲಿ ಪುನಃ ವಿದ್ಯುತ್ ಸಂಗ್ರಹಣೆಯಾಗುತ್ತದೆ. ಏಕಮುಖ ಪ್ರವಾಹದ ವಿದ್ಯುತ್ತನ್ನು ಬಳಕೆಯಲ್ಲಿರುವ ಪರ್ಯಾಯ ವಿದ್ಯುತ್ತಿನಿಂದ ವಿದ್ಯುತ್ ಸಮಕಾರಕಗಳನ್ನು (ರೆಕ್ಟಿಫೈಯರ್ಸ್) ಯಪಯೋಗಿಸಿಕೊಂಡು ಪಡೆಯಬಹುದು. ವಾಹನಗಳಲ್ಲಿ ಉಪಯೋಗಿಸುವ  (ಉದಾಹರಣೆಗೆ ಕಾರ್, ಬಸ್, ಟ್ರೇನ್, ವಿಮಾನ ಇತ್ಯಾದಿ)  ವಿದ್ಯುತ್ ಕೋಶಗಳಲ್ಲಿ ವಿದ್ಯುತ್ ಸಂಗ್ರಹಣೆ ಸ್ವಲ್ಪ ಮಟ್ಟಿಗೆ ವಾಹನಗಳಲ್ಲೇ ಅಳವಡಿಸಿದ ಸಣ್ಣ ಗಾತ್ರ ವಿದ್ಯುಜ್ಜನಕ ಯಂತ್ರಗಳಿಂದ ಉತ್ಪಾದಿತವಾಗುವ ವಿದ್ಯುತ್ತಿನಿಂದ ನಡೆಯುತ್ತದೆ. ವಿದ್ಯುತ್ ಸಂಗ್ರಹಣೆಯಲ್ಲಿ ಕೋಶದಲ್ಲಿನ ವಿದ್ಯುತ್ ಸಂಚಯನ ಪೂರ್ತಿಯಾದ ಮೇಲೆಯೂ ಕೋಶಕ್ಕೆ ಸಂಗ್ರಹ ವಿದ್ಯುತ್ತನ್ನು ಒದಗಿಸಿದರೆ ಈ ಹೆಚ್ಚಿನ ವಿದ್ಯುತ್ತಿನಿಂದ ಕೋಶದಲ್ಲಿನ ನೀರು ವಿದ್ಯುದ್ವಿಶ್ಲೇಷಣೆಗೊಂಡು ಜಲಜನಕ, ಆಮ್ಲಜನಕ ಅನಿಲಗಳು ಬಿಡುಗಡೆಯಾಗುವುವಲ್ಲದೆ ಕೋಶದ ಉಷ್ಣತೆಯೂ ಅಧಿಕವಾಗುತ್ತದೆ. ಈ ಸ್ಥಿತಿಗೆ ಕೋಶ ಮರಳಿಕೆ (ಗ್ಯಾಸ್ಸಿಂಗ್) ಎಂದು ಹೆಸರು. ಇದರಲ್ಲಿ ಕೋಶದ ಇತರ ಭಾಗಗಳು ನಾಶವಾಗುವ ಸಂಭವವಿರುವುದರಿಂದ ವಿದ್ಯುತ್ ಸಂಗ್ರಣಕಾಲದಲ್ಲಿ ಕೋಶದ ಉಷ್ಣತೆ 50ಲಿ ಸೆಂ.ನ್ನು ಮೀರದಂತೆ ನೋಡಿಕೊಳ್ಳುವುದು ಅಗತ್ಯ. ಕೋಶದ ವಿದ್ಯುತ್ ಪೂರೈಕೆ ಪೂರ್ಣವಾದಾಗ ಎಲೆಕ್ಟ್ರೋಡುಗಳ ಮೇಲೆ ಉಂಟಾಗುವ ಸೀಸದ ಸಲ್ಫೇಟ್ ವಿದ್ಯುತ್ ಸಂಗ್ರಹಣೆಯಾಗುವಾಗ ಪರಿಶುದ್ಧ ಸೀಸ ಮತ್ತು ಸೀಸದ ಪೆರಾಕ್ಸೈಡ್ ಆಗಿ ಪರಿವರ್ತಿತವಾಗುವುದಲ್ಲದೆ ಕೋಶದಲ್ಲಿನ ಸಲ್ಫ್ಯೂರಿಕ್ ಆಮ್ಲದ ಸಾರತೆ ಸಹ ಹೆಚ್ಚುತ್ತಿರುತ್ತದೆ. ಇದರೊಂದಿಗೇ ಜಲಜನಕ ಆಮ್ಲಜನಕ ಅನಿಲಗಳೂ ಸ್ವಲ್ಪ ಮೊತ್ತದಲ್ಲಿ ಇತರ ಹಾನಿಕರ ವಿಷಾನಿಲಗಳೂ ಸಹ ಬಿಡುಗಡೆಯಾಗುತ್ತವೆ. ಜಲಜನಕ, ಆಮ್ಲಜನಕ ಅನಿಲಗಳು ಸ್ಫೋಟನೆಯನ್ನುಂಟುಮಾಡಬಹುದಾದ್ದರಿಂದ ವಿದ್ಯುತ್ ಸಂಗ್ರಹಣೆಯಾಗುವಾಗ ಹೆಚ್ಚಿನ ಎಚ್ಚರಿಕೆ ವಹಿಸುವುದು ಅಗತ್ಯ.
	ದ್ವಿತೀಯಕ ಕೋಶಗಳಲ್ಲಿನ ವಿದ್ಯುತ್ ಸಂಗ್ರಹಣೆಯಲ್ಲಿ ಎರಡು ವಿಧಾನಗಳನ್ನು ಅನುಸರಿಸುತ್ತಾರೆ. ಒಂದು ವಿಧಾನದಲ್ಲಿ ಕೋಶವನ್ನು ವಿದ್ಯುತ್ ಪೂರೈಕೆ ಮಂಡಲದಿಂದ (ಲೋಡ್ ಸಕ್ರ್ಯೂಟ್) ಪ್ರತ್ಯೇಕಿಸಿ ವಿದ್ಯುತ್ ಸಂಗ್ರಹಣೆ ಮಂಡಲಕ್ಕೆ (ಚಾರ್ಜಿಂಗ್ ಸಕ್ರ್ಯೂಟ್) ಜೋಡಿಸಿ ವಿದ್ಯುತ್ ಸಂಗ್ರಹಣೆ ಮಾಡುತ್ತಾರೆ. ಎರಡನೆಯ ವಿಧಾನದಲ್ಲಿ ಕೋಶವನ್ನು ಪೂರೈಕೆಯ ಮಂಡಲದಿಂದ ಪ್ರತ್ಯೇಕಿಸದೆ ಇದ್ದರೂ ಕೋಶದಲ್ಲಿ ವಿದ್ಯುತ್ ಸಂಗ್ರಹಣೆ ನಡೆಯುತ್ತಿರುತ್ತದೆ. ಉದಾಹರಣೆಗೆ ಕಾರು, ಬಸ್, ರೈಲು, ವಿಮಾನಗಳಲ್ಲಿ ದೀಪ, ಪಂಖ, ಹವಾನಿಯಂತ್ರಣ ಯಂತ್ರ ಇತ್ಯಾದಿ ವಿದ್ಯುತ್ ಸಲಕರಣೆಗಳು ಕೋಶದಿಂದ ವಿದ್ಯುತ್ತನ್ನು ಪಡೆದು ಕೆಲಸ ಮಾಡುತ್ತವೆ. ಇದೇ ಕಾಲದಲ್ಲಿ ವಾಹನಗಳಲ್ಲಿ ಅಳವಡಿಸಿದ ವಿದ್ಯುಜ್ಜನಕ ಯಂತ್ರ ವಾಹನದ ಚಲನೆಯ ಶಕ್ತಿಯನ್ನು ಉಪಯೋಗಿಸಿಕೊಂಡು ವಿದ್ಯುತ್ತನ್ನು ಉತ್ಪಾದಿಸುತ್ತದೆ. ಈ ವಿದ್ಯುತ್ತಿನಿಂದ ಕೋಶದಲ್ಲಿ ವಿದ್ಯುತ್ ಸಂಗ್ರಹಣೆ ನಡೆಯುತ್ತದೆ. ಇವುಗಳಲ್ಲಿ ಕೋಶದ ವಿಭವ ನಿಗದಿಯಾದ ಮೊತ್ತವನ್ನು ಮುಟ್ಟಿದ ಕೂಡಲೆ ಕೋಶದಲ್ಲಿ ಇನ್ನೂ ಹೆಚ್ಚಿನ ವಿದ್ಯುತ್ ಸಂಗ್ರಹಣೆಯಾಗದಂತೆ ಕೋಶವನ್ನು ಸಂಗ್ರಹಣೆ ಮಂಡಲದಿಂದ ಬೇರ್ಪಡಿಸುವ ಸ್ವಯಂಚಲಿ(ಆಟೋಮ್ಯಾಟಿಕ್) ಸಲಕರಣೆಗಳನ್ನು ಅಳವಡಿಸಿರುತ್ತಾರೆ. ಕೋಶದಲ್ಲಿ ವಿದ್ಯುತ್ ಸಂಗ್ರಹಣೆಯಾಗುವಾಗ ಸ್ಥಿರ ವೋಲ್ಟೇಜ್ ಮಂಡಲವನ್ನಾಗಲಿ (ಕಾನ್ಸ್‍ಟೆಂಟ್ ವೋಲ್ಟೇಜ್ ಚಾರ್ಜಿಂಗ್) ಇಲ್ಲವೇ ಸ್ಥಿರ ವಿದ್ಯುತ್ ಪ್ರವಾಹದ ಮಂಡಲವನ್ನಾಗಲಿ (ಕಾನ್ಸ್‍ಟೆಂಟ್ ಕರೆಂಟ್ ಚಾರ್ಜಿಂಗ್) ಉಪಯೋಗಿಸಬಹುದು. ಈ ಎರಡು ರೀತಿಯಲ್ಲೂ ಕೋಶ ಸತತವಾಗಿ ಪರಿಧಿಯಲ್ಲಿದ್ದು ವಿದ್ಯುತ್ ಸಂಗ್ರಹಣೆ ನಿಗದಿಯಾದ ಕಾಲದಲ್ಲಿ ಪೂರ್ಣವಾಗುತ್ತದೆ. ಚಲನಶಕ್ತಿಗಾಗಿ ವಾಹನಗಳಲ್ಲಿ ಉಪಯೋಗಿಸುವ ಕೋಶಗಳಲ್ಲಿ ಆಗಾಗ್ಗೆ ಅಲ್ಪ ವಿದ್ಯುತ್ ಸಂಗ್ರಹಣೆಯನ್ನು ವಾಹನದ ವಿರಾಮ ವೇಳೆಯಲ್ಲಿ (ಒಂದೆರಡು ಗಂಟೆಗಳ ಕಾಲದಲ್ಲಿ) ಹೆಚ್ಚಿನ ಮೊತ್ತದ ವಿದ್ಯುತ್ಪ್ರವಾಹವನ್ನು ಉಪಯೋಗಿಸಿಕೊಂಡು ನಡೆಸಬಹುದು. ಈ ವಿಧಾನಕ್ಕೆ ಏರಿಕೆಯ ವಿದ್ಯುತ್ ಸಂಗ್ರಹಣೆ (ಬೂಸ್ಟಿಂಗ್ ಚಾರ್ಜ್) ಎಂದು ಹೆಸರು. ಸ್ಥಳಾಂತರಗೊಳ್ಳದೆ ಒಂದೇ ಜಾಗದಲ್ಲಿದ್ದು ವಿದ್ಯುತ್ ಪೂರೈಕೆಯ ಮಂಡಲದೊಂದಿಗೆ ಶಾಶ್ವತವಾಗಿ ಸಂಪರ್ಕಗೊಂಡಿರುವ ಕೋಶಗಳಲ್ಲಿ ತೇಲುಭರಣ(ಫ್ಲೋಟ್ ಚಾರ್ಜಿಂಗ್) ಮತ್ತು ಅಲ್ಪಭರಣ (ಟ್ರಿಕ್ಕಲ್ ಚಾರ್ಜಿಂಗ್) ವಿಧಾನಗಳಿಂದ ವಿದ್ಯುತ್ ಸಂಗ್ರಹಣೆ ಮಾಡುತ್ತಾರೆ. ತೇಲುಭರಣದಲ್ಲಿ ಕೋಶದ ವಿದ್ಯುತ್ ಸಂಗ್ರಹಣೆಗೆ ಸ್ಥಿರ ವೋಲ್ಟೇಜನ್ನು ಒದಗಿಸಿದರೆ ಅಲ್ಪಭರಣ ವಿಧಾನದಲ್ಲಿ ಸ್ಥಿರವಿದ್ಯುತ್ ಪ್ರವಾಹದಿಂದಾಗಿ ಕೋಶದಲ್ಲಿ ವಿದ್ಯುತ್ ಸಂಗ್ರಹಣೆ ನಡೆಯುತ್ತದೆ. ತೇಲುಭರಣದಲ್ಲಿ ಕೋಶ ವಿದ್ಯುತ್ ಸಂಗ್ರಹಣೆಯ ಮತ್ತು ವಿದ್ಯುತ್ ಪೂರೈಕೆಯ ಮಂಡಲಗಳೊಂದಿಗೆ ಸದಾಕಾಲ ಸಂಪರ್ಕ ಪಡೆದಿರುತ್ತದೆ. ವಿದ್ಯುತ್ ಸಂಗ್ರಹಣೆಯ ಮಂಡಲದ ವಿಭವಕೋಶದ ವಿಭವಕ್ಕಿಂತ ಸ್ವಲ್ಪವೇ ಹೆಚ್ಚು. ಇದ್ದು ಕೋಶದ ವಿಭವ ನಿಗದಿಯಾದ ಮೊತ್ತಕ್ಕಿಂತ ಕಡಿಮೆಯಿದ್ದಾಗಲೆಲ್ಲ ಕೋಶದಲ್ಲಿ ವಿದ್ಯುತ್ ಸಂಗ್ರಹಣೆ ನಡೆಯುತ್ತಿರುತ್ತದೆ. ವಿದ್ಯುತ್ ಪೂರೈಕೆಯಲ್ಲಿ ಕೋಶ ಅಥವಾ ವಿದ್ಯುತ್ ಸಂಗ್ರಹಣ ಮಂಡಲದಲ್ಲಿನ ವಿಭವ ಇಲ್ಲವೆ ಇವೆರಡೂ ಭಾಗವಹಿಸಬಹುದು. ವಿದ್ಯುತ್ ಪೂರೈಕೆಗೆ ಬೇಕಾಗುವ ವಿಭವ (ಅಥವಾ ವಿದ್ಯುತ್ಪ್ರವಾಹ) ಸಂಗ್ರಹಣ ಮಂಡಲ ಒದಗಿಸಬಹುದಾದುದಕಿಂತ ಹೆಚ್ಚಿದ್ದಾಗ ಮಾತ್ರ ಕೋಶದಿಂದಲೂ ವಿದ್ಯುತ್ ಪೂರೈಕೆಯಾಗುತ್ತದೆ. ಆಗ ಸಹ ಕೋಶ ಸತತವಾಗಿ ವಿದ್ಯುತ್ತನ್ನು ಪೂರೈಸದೆ ಆಗೊಮ್ಮೆ ಈಗೊಮ್ಮೆ ಪೂರೈಸುತ್ತಿರುತ್ತದೆ. ವಿದ್ಯುತ್ ಪೂರೈಕೆ ಇಲ್ಲದಿರುವಾಗ ಸಂಗ್ರಹಣ ಮಂಡಲದಿಂದ ಕೋಶ ವಿದ್ಯುತ್ತನ್ನು ಪಡೆಯುವುದರಿಂದ ವಿದ್ಯುತ್ ಸಂಗ್ರಹಣೆ ನಡೆದು ಕೋಶದ ವಿಭವ ಸದಾಕಾಲ ಸ್ಥಿರವಾಗಿರುತ್ತದೆ. ಅಲ್ಪಭರಣ ವಿಧಾನದ ವಿದ್ಯುತ್ ಸಂಗ್ರಹಣೆಯಲ್ಲಿ ಸಹ ಮೇಲಿನ ರೀತಿಯಲ್ಲೇ ಕೋಶದಲ್ಲಿ ವಿದ್ಯುತ್ ಸಂಗ್ರಹಣೆ ನಡೆಯುತ್ತಿರುತ್ತದೆ. ಈ ವಿಧಾನದಲ್ಲಿ ಕೋಶಕ್ಕೆ ವಿದ್ಯುತ್ ಸಂಗ್ರಹಣ ಮಂಡಲದಿಂದ ದೊರೆಯುವ ವಿದ್ಯುತ್ ಪ್ರವಾಹ ಸ್ವಲ್ಪವೇ ಇದ್ದು ಸ್ಥಿರವಾಗಿರುತ್ತದೆ. ಕೋಶವನ್ನು ವಿದ್ಯುತ್ ಸಂಗ್ರಹಣ ಮಂಡಲದೊಂದಿಗೆ ಸದಾಕಾಲ ಜೋಡಿಸಿರಬಹುದು. ಇಲ್ಲವೆ ಆಗಾಗ್ಗೆ ಸಂಪರ್ಕ ಪಡೆಯುವಂತೆ ಏರ್ಪಡಿಸಬಹುದು. ಕೆಲವು ಸಂದರ್ಭಗಳಲ್ಲಿ ಕೋಶ ವಿದ್ಯುತ್ತನ್ನು ಪೂರೈಸದಿರುವಾಗ ತಾನೆತಾನಾಗಿ ಸಂಗ್ರಹಣ ಮಂಡಲದೊಂದಿಗೆ ಸಂಪರ್ಕ ಪಡೆದು ವಿದ್ಯುತ್ ಸಂಗ್ರಹಣೆಯಾಗುವಂತೆ ಮಂಡಲಗಳನ್ನು ರಚಿಸಿರುತ್ತಾರೆ. ಕೋಶವನ್ನು ಉಪಯೋಗಿಸದೆ ದಾಸ್ತಾನು ಮಾಡಿದಾಗ ಸಹ ಕೋಶದ ಆಂತರಿಕನಿರೋಧದಿಂದಾಗಿ ಕೋಶದ ವಿದ್ಯುತ್ ವ್ಯಯವಾಗುತ್ತಿರುವುದಾದ್ದರಿಂದ ನಿಗದಿಯಾದ ವಿದ್ಯುತ್ತನ್ನು ಬೇಕಾದಾಗ ಒದಗಿಸಲು ಕೋಶಕ್ಕೆ ಸಾಧ್ಯವಾಗುವುದಿಲ್ಲ. ಮೇಲಿನ ಎರಡು ವಿಧಾನಗಳಿಂದ ಹೆಚ್ಚಾಗಿ ಅಲ್ಪಭರಣ ವಿಧಾನದಿಂದ ಕೋಶ ಸದಾಕಾಲ ಪೂರ್ಣಾವಿಷ್ಟ (ಫುಲ್ಲಿ ಚಾಜ್ರ್ಡ್) ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬಹುದು.
	(ii) ಕ್ಷಾರ ಸಂಚಯನ ಕೋಶಗಳು : ಈ ಬಗೆಯ ದ್ವಿತೀಯಕ ಕೋಶಗಳಲ್ಲಿ ಕ್ಷಾರ ದ್ರಾವಣವನ್ನು ವಿದ್ಯುದ್ವಿಶ್ಲೇಷ್ಯವಾಗಿ ಉಪಯೋಗಿಸುವುದರಿಂದ ಇವುಗಳಿಗೆ ಈ ಹೆಸರು ರೂಢಿಯಲ್ಲಿದೆ. ಇವುಗಳಲ್ಲಿ ಉಪಯೋಗಿಸುವ ಎಲೆಕ್ಟ್ರೋಡುಗಳಿಂದಾಗಿ ಮೂರು ಮುಖ್ಯ ಬಗೆಗಳಿವೆ. 1.ನಿಕಲ್-ಕಬ್ಬಿಣ ಕೋಶ ಅಥವಾ ಎಡಿಸನ್ ಕೋಶ ; 2.ನಿಕಲ್-ಕ್ಯಾಡ್ಮಿಯಂ ಕೋಶ ಅಥವಾ ಜುಂಗನರ್ ಕೋಶ; 3.ಸತು ಬೆಳ್ಳಿ ಅಥವಾ ಸತು-ಬೆಳ್ಳಿಯ ಪೆರಾಕ್ಸೈಡ್ ಕೋಶ.

	ಚಿತ್ರ-13-ಎಡಿಸನ್-ಕೋಶ

	ನಿಕಲ್-ಕಬ್ಬಿಣ ಮತ್ತು ನಿಕಲ್-ಕ್ಯಾಡ್ಮಿಯಂ ವಿದ್ಯುದ್ರಾಸಾಯನಿಕ ಜೋಡಿಗಳು ಹೆಚ್ಚುಕಡಿಮೆ ಒಂದೇ ವಿಭವವನ್ನು  ಉಂಟುಮಾಡುತ್ತವೆ. ಆದ್ದರಿಂದ ಎಡಿಸನ್ ಮತ್ತು ಜುಂಗನರ್ ಕೋಶಗಳು ಸರಾಸರಿ 1.2 ವೋಲ್ಟುಗಳಷ್ಟು ವಿಭವವನ್ನು ಉಂಟುಮಾಡುತ್ತವೆ. ಸತು-ಬೆಳ್ಳಿಯ ಕೋಶ 1.45-1.50 ವೋಲ್ಟುಗಳಷ್ಟು ವಿಭವವನ್ನು ಕೊಡುತ್ತದೆ.
	ಎಡಿಸನ್ ಕೋಶ : ಎಡಿಸನ್ನನ 10 ವರ್ಷಗಳ ಸಂಶೋಧನೆಯ ಫಲವಾಗಿ ಈ ಕೋಶಬಳಕೆಗೆ ಬಂದಿತು (1898). ಕೋಶದಲ್ಲಿ ಕಬ್ಬಿಣವನ್ನು ಅಥವಾ ಕಬ್ಬಿಣದ ಆಕ್ಸೈಡನ್ನು ಋಣಧ್ರವದಲ್ಲೂ ನಿಕಲ್ ಆಕ್ಸೈಡನ್ನು ಅಥವಾ ನಿಕೆಲ್ ಹೈಡ್ರಾಕ್ಸೈಡನ್ನು ಧನ ಧ್ರುವದಲ್ಲೂ ಉಪಯೋಗಿಸುತ್ತಾರೆ. ವಿದ್ಯುದ್ವಿಶ್ಲೇಷ್ಯವಾಗಿ ಸ್ವಲ್ಪ ಲಿಥಿಯಂ ಹೈಡ್ರಾಕ್ಸೈಡ್ ಬೆರೆತ ಪೊಟ್ಯಾಷಿಯಂ ಹೈಡ್ರಾಕ್ಸೈಡ್ (20%) ದ್ರಾವಣವನ್ನು ಉಪಯೋಗಿಸುತ್ತಾರೆ. ವಿದ್ಯುದ್ವಿಶ್ಲೇಷ್ಯದ ಸಾಪೇಕ್ಷ ಸಾಂದ್ರತೆ 15ಲಿ ಸೆಂ. ಉಷ್ಣತೆಯಲ್ಲೂ 1.2 ಇರುತ್ತದೆ. ವಿದ್ಯುತ್ ಪೂರೈಕೆಯಾಗುವಾಗ ಧನಧ್ರುವದಲ್ಲಿ ಅಪಕರ್ಷಣೆಯೂ ಋಣಧ್ರೂವದಲ್ಲಿ ಉತ್ಕರ್ಷಣೆಯೂ ನಡೆಯುತ್ತದೆ. ವಿದ್ಯುತ್ ಸಂಚಯನದಲ್ಲಿ ಇದಕ್ಕೆ  ವ್ಯತಿರಿಕ್ತಕ್ರಿಯೆಗಳು ನಡೆಯುತ್ತವೆ. ಒಟ್ಟು ರಾಸಾಯನಿಕ ಕ್ರಿಯೆಯಲ್ಲಿ ಆಮ್ಲಜನಕ ಅಥವಾ ಹೈಡ್ರಾಕ್ಸಿಲ್ ಅಯಾನುಗಳು (ಔ- ಅಥವಾ ಔಊ) ಎಲೆಕ್ಟ್ರೋಡುಗಳ ನಡುವೆ ವಿನಿಮಯಗೊಳ್ಳುತ್ತವೆ. 

ಈe + ಓi2ಔ3↔  ಈeಔ + 2ಓiಔ
(ಈeಔ)            (ಈeಔ2)
ಅಥವಾ
ಈe + 2ಓi(ಔಊ)3  ↔  ಈe(ಔಊ)2  + 2ಓi(ಔಊ)2
               
ಕೋಶದಲ್ಲಿನ ವಿದ್ಯುದ್ವಿಶ್ಲೇಷ್ಯ ಗಮನಾರ್ಹವಾದ ರೀತಿಯಲ್ಲಿ ಬದಲಾಗುವುದಿಲ್ಲವಾದ್ದರಿಂದ ದ್ರಾವಣದ ಸಾಪೇಕ್ಷ ಸಾಂದ್ರತೆ, ವಿದ್ಯುದ್ವಾಹಕತೆ (ಕಂಡಕ್ಟಿವಿಟಿ) ಎಲ್ಲ ಕಾಲದಲ್ಲೂ (ವಿದ್ಯುತ್ ಪೂರೈಕೆ ಅಥವಾ ಸಂಗ್ರಹಣೆ) ಒಂದೇ ಸಮನೆ ಇರುತ್ತವೆ. ಕೋಶದ ವಿದ್ಯುತ್‍ಸ್ಥಿತಿಯನ್ನು ಎಲೆಕ್ಟ್ರೋಡುಗಳ ನಡುವಿನ ವಿಭವವನ್ನು ಅಳೆಯುವುದರಿಂದ ಮಾತ್ರವೇ ತಿಳಿಯಬಹುದು. ವಿದ್ಯುದ್ವಿಶ್ಲೇಷ್ಯದೊಂದಿಗೆ ಅಲ್ಪ ಮೊತ್ತದಲ್ಲಿ ಬೆರೆಸಿರುವ ಲಿಥಿಯಂ ಹೈಡ್ರಾಕ್ಸೈಡ್ ವಸ್ತು ಕೋಶದ ವಿದ್ಯುತ್ ಸಂಚಯನ ಮತ್ತು ಬಾಳಿಕೆಯನ್ನು ಹೆಚ್ಚಿಸುವುದಾದರೂ ಯಾವ ರೀತಿಯಲ್ಲಿ ಇದು ಕೆಲಸಮಾಡುತ್ತದೆ ಎನ್ನುವುದು ಇದುವರೆಗೆ ಸರಿಯಾಗಿ ತಿಳಿದಿಲ್ಲ. ಪೊಟ್ಯಾಸಿಯಂ ಹೈಡ್ರಾಕ್ಸೈಡ್ ದ್ರಾವಣ ಕಬ್ಬಿಣವನ್ನು ತುಕ್ಕುಹಿಡಿಯದಂತೆ ರಕ್ಷಿಸುತ್ತದೆ. ಕೋಶದ ಸಂಚಯನ ಶಕ್ತಿ ಎಲೆಕ್ಟ್ರೋಡುಗಳಲ್ಲಿರುವ ಕ್ರಿಯಾಶಾಲಿಪದಾರ್ಥಗಳ ಮೊತ್ತವನ್ನು ಅವಲಂಬಿಸಿದೆ. ಎಲೆಕ್ಟ್ರೋಡುಗಳ ತಯಾರಿಕೆಯಲ್ಲಿ ಕ್ರಿಯಾಶಾಲಿಪದಾರ್ಥಗಳ ಮೊತ್ತವನ್ನು ಹತೋಟಿಯಲ್ಲಿಡುವುದರಿಂದ ಬೇಕಾದ ಸಂಚಯನ ಶಕ್ತಿಯ ಕೋಶಗಳನ್ನು ತಯಾರಿಸಬಹುದು. ಕೋಶದ ಎಲೆಕ್ಟ್ರೋಡುಗಳನ್ನು ಆಮ್ಲಸಂಚಯನ ಕೋಶಗಳಲ್ಲಿರುವಂತೆ ತಟ್ಟೆಯ ರೀತಿಯಲ್ಲಿ ರಚಿಸುವುದರಿಂದ ಕೋಶದ ಸಂಚಯನಶಕ್ತಿಯನ್ನು ಹೆಚ್ಚಿಸಬಹುದು. ಎಲೆಕ್ಟ್ರೋಡುಗಳ ರಚನೆಯಲ್ಲಿ ನಿಕಲ್ ಲೇಪನವಿರುವ ಉಕ್ಕಿನ ಚೌಕಟ್ಟುಗಳನ್ನು ಮತ್ತು ಜಾಲರಿಗಳನ್ನು ಉಪಯೋಗಿಸುತ್ತಾರೆ. ನಿಕಲ್ ಹೈಡ್ರಾಕ್ಸೈಡ್ ಮತ್ತು ಶುದ್ಧ ನಿಕೆಲಿನ ತೆಳುವಾದ ಬಿಲ್ಲೆಗಳನ್ನು ಒಂದರ ಅನಂತರ ಮತ್ತೊಂದು ಇರುವಂತೆ ತುಂಬಿದ ರಂಧ್ರವಿರುವ ಉಕ್ಕಿನ ಕೊಳವೆಗಳನ್ನು ಧನಧ್ರುವದ ಜಾಲರಿಯಲ್ಲಿ ಅಳವಡಿಸಿರುತ್ತಾರೆ. ಈ ಕೊಳವೆಗಳ ಒಳವ್ಯಾಸ ಸಾಮಾನ್ಯವಾಗಿ ¼ ". ಎಲೆಕ್ಟ್ರೋಡುಗಳ ಜಾಲರಿಯಲ್ಲಿ ಈ ಕೊಳವೆಗಳ ಸಂಖ್ಯೆಯನ್ನು ಹೆಚ್ಚು ಕಡಿಮೆ ಇರಿಸುವುದರಿಂದ ಕೋಶದ ಸಂಚಯನಶಕ್ತಿಯನ್ನು ಹೆಚ್ಚು ಕಡಿಮೆ ಮಾಡಬಹುದು. ಋಣ ಎಲೆಕ್ಟ್ರೋಡಿನ ಉಕ್ಕಿನ ಜಾಲರಿಯಲ್ಲಿ ಸಣ್ಣ ಕುಳಿಗಳಿರುವಂತೆ ಏರ್ಪಡಿಸಿ ಈ ಕುಳಿಗಳಲ್ಲಿ ಕಬ್ಬಿಣದ ಆಕ್ಸೈಡನ್ನು ತುಂಬಿಸಿರುತ್ತಾರೆ.
	ಜುಂಗನರ್ ಕೋಶ : ನಿಕಲ್-ಕಬ್ಬಿಣದ ಕೋಶವನ್ನು ಎಡಿಸನ್ ರಚಿಸುವ ಸಮಯದಲ್ಲೇ ಸ್ವೀಡನ್ನಿನ ವಿಜ್ಞಾನಿಗಳಾದ ಜುಂಗನರ್ ಮತ್ತು ಬರ್ಗರು ಮತ್ತೊಂದು ಬಗೆಯ ಕ್ಷಾರಸಂಚಯನ ಕೋಶವನ್ನು ಬಳಕೆಗೆ ತಂದರು. ಇದಕ್ಕೆ ಜುಂಗನರ್ ಕೋಶವೆಂದು ಹೆಸರು. ಈ ಕೋಶ ಎಡಿಸನ್ನಿನ ಕೋಶದಂತೆಯೇ ಇದೆ. ಆದರೆ ಇದರಲ್ಲಿ ಋಣ ಧ್ರುವವಾಗಿ ಕಬ್ಬಿಣಕ್ಕೆ ಬದಲಾಗಿ ಕ್ಯಾಡ್ಮಿಯಂ ಉಪಯೋಗಿಸುತ್ತಾರೆ.  ವಿದ್ಯುದ್ವಿಶ್ಲೇಷ್ಯದ (ಸ್ವಲ್ಪ ಲಿಥಿಯಂ ಹೈಡ್ರಾಕ್ಸೈಡ್ ಸೇರಿಸಿದ ಪೊಟ್ಯಾಸಿಯಂ ಹೈಡ್ರಾಕ್ಸೈಡ್) ಸಾಪೇಕ್ಷ ಸಾಂದ್ರತೆ 1.19-1.12. ಧನಧ್ರುವದಲ್ಲಿ ಶುದ್ಧ ಗ್ರಾಫೈಟಿನೊಂದಿಗೆ ಬೆರೆತ ನಿಕಲ್ ಆಕ್ಸೈಡ್ (ಅಥವಾ ನಿಕೆಲ್ ಹೈಡ್ರಾಕ್ಸೈಡ್) ಮಿಶ್ರಣವನ್ನೂ ಋಣಧ್ರುವದಲ್ಲಿ 10-15% ಗಳಷ್ಟು ಕಬ್ಬಿಣ ಬೆರೆತ ಕ್ಯಾಡ್ಮಿಯಂ ಲೋಹದ ಪುಡಿಯನ್ನೂ ಉಪಯೋಗಿಸುತ್ತಾರೆ. ಕೋಶದ ಧನ ಮತ್ತು ಋಣ ಧ್ರುವದ ಎಲೆಕ್ಟ್ರೋಡ್ ತಟ್ಟೆಗಳನ್ನು ಒಂದೇ ರೀತಿಯಲ್ಲಿ ತಯಾರಿಸುತ್ತಾರೆ.  ಎಲೆಕ್ಟ್ರೋಡ್ ಪದಾರ್ಥಗಳನ್ನು ಜಾಲರಿಯಲ್ಲಿರುವ ರಂಧ್ರಗಳಿರುವ ಕುಳಿಗಳಲ್ಲಿ ಅಡಕಿ ತುಂಬಿರುತ್ತಾರೆ. ಉಳಿದ ರೀತಿಗಳಲ್ಲಿ ಕೋಶದ ರಚನೆ ಎಡಿಸನ್ ಕೋಶದಂತೆಯೇ ಇದೆ. ವಿದ್ಯುತ್ ಸಂಗ್ರಹಣೆ ಮತ್ತು ವಿದ್ಯುತ್ ವಿಸರ್ಜನೆಯಲ್ಲಿ ಧನ-ಋಣ ಧ್ರುವಗಳ ನಡುವೆ ಆಮ್ಲಜನಕ ಅಥವಾ ಹೈಡ್ರಾಕ್ಸಿಲ್ ಅಯಾನುಗಳು ವಿನಿಮಯಗೊಳ್ಳುತ್ತವೆ. ಕೋಶದ ವಿದ್ಯುದ್ವಿಶ್ಲೇಷ್ಯ ಯಾವ ರೀತಿಯಲ್ಲೂ ರಾಸಾಯನಿಕವಾಗಿ ಪರಿವರ್ತನೆಗೊಳ್ಳುವುದಿಲ್ಲ. 
	ಈ ಬಗೆಯ ಕೋಶಗಳ ಮುಖ್ಯ ಸೌಲಭ್ಯಗಳೆಂದರೆ : 1.ಆಂತರಿಕ ನಿರೋಧ ಕಡಿಮೆ ಇರುವುದು. 2.ಶೈತ್ಯ ವಾತಾವರಣದಲ್ಲೂ ಸಮರ್ಪಕವಾಗಿ ಕೆಲಸ ಮಾಡುವುದು. 3. ಅಲ್ಪಭರಣದ ವಿಧಾನದಿಂದ ಸುಲಭವಾಗಿ ವಿದ್ಯುತ್ ಸಂಗ್ರಹಣೆ ಮಾಡುವುದರಲ್ಲಿನ ಸೌಲಭ್ಯ. ಜುಂಗನರ್ ಕೋಶಗಳನ್ನು ಮುಖ್ಯವಾಗಿ ಡೀಸೆಲ್ ಎಂಜಿನ್ನುಗಳ ಪ್ರಾರಂಭ ಚಲನೆಗೆ, ತುರ್ತು ಸಂದರ್ಭಗಳಲ್ಲಿ ವಿದ್ಯುದ್ದೀಪಗಳನ್ನು ಉರಿಸಲು ಮತ್ತು ರೈಲುಗಳಲ್ಲಿನ ದೀಪ, ಫ್ಯಾನು ಇತ್ಯಾದಿಗಳಲ್ಲಿ ಉಪಯೋಗಿಸುತ್ತಾರೆ. ರಚನೆಯಲ್ಲಿ ಜುಂಗನರ್ ಕೋಶಕ್ಕಿಂತ ಸ್ವಲ್ಪ ಬೇರೆಯಾಗಿದ್ದು ಆದರೆ ಕೋಶದಲ್ಲಿ ಉಪಯೋಗಿಸುವ ಪದಾರ್ಥದಿಂದಲೇ ತಯಾರಾದ ಇನ್ನೊಂದು ಬಗೆಯ ಕೋಶ ನಿಕೆಲ್ ಕ್ಯಾಡ್ಮಿಯಂ ಸಿಂಟರ್ಡ್ ಕೋಶ.
	ಬೆಳ್ಳಿ-ಸತು ವಿದ್ಯುತ್ ಸಂಚಯನ ಕೋಶ : ಈ ಬಗೆಯ ಕೋಶಗಳನ್ನು ಪ್ರಧಾನ ವಿದ್ಯುತ್‍ಕೋಶಗಳ ಪಂಗಡಕ್ಕೆ ಸೇರಿದ ಕಾಯ್ದಿರಿಸುವ ಕೋಶಗಳೆಂದೂ ಕರೆಯುವುದುಂಟು.  ಇವುಗಳಲ್ಲಿ ವಿದ್ಯುದ್ವಿಶ್ಲೇಷ್ಯವಾಗಿ ಪೊಟ್ಯಾಸಿಯಂ ಹೈಡ್ರಾಕ್ಸೈ ಡನ್ನು ಉಪಯೋಗಿಸುವುದರಿಂದ ಕ್ಷಾರ ಸಂಚಯನ ಕೋಶಗಳ ಗುಂಪಿಳ Uಶಗಳ Uಶಗಳ Uಹುದು. ವಿದ್ಯುತ್ ಪೂರ್ಣ ಸ್ಥಿತಿಯಲ್ಲಿರುವ ಕೋಶದ ಧನ ಎಲೆಕ್ಟ್ರೋಡಿನಲ್ಲಿ ಬೆಳ್ಳಿಯ ಪೆರಾಕ್ಸೈಡ್ ಇದ್ದು ವಿದ್ಯುತ್ ಪೂರೈಕೆಯಲ್ಲಿ ಈ ಪದಾರ್ಥ ಆಕರ್ಷಣಗೊಂಡು ಬೆಳ್ಳಿ ಮತ್ತು ಬೆಳ್ಳಿಯ ಆಕ್ಸೈಡ್ ಆಗಿ ಪರಿವರ್ತನೆಗೊಳ್ಳುತ್ತದೆ.

ಚಿತ್ರ-ಸಂಚಯನ-ಕೋಶ

 ಋಣ ಎಲೆಕ್ಟ್ರೋಡ್ ಆಗಿ ಸಚ್ಛಿದ್ರ ಸತುವನ್ನು ಉಪಯೋಗಿಸುತ್ತಾರೆ. ಕೋಶದಿಂದ ವಿದ್ಯುತ್ ಪೂರೈಕೆಯಾಗುವಾಗ ವಿದ್ಯುದ್ವಿಶ್ಲೇಷ್ಯದೊಂದಿಗೆ ಸಂಪರ್ಕಗೊಂಡಿರುವ ಸತುಸತುವಿನ ಆಕ್ಸೈಡ್ ಆಗಿ ಪರಿವರ್ತನೆಗೊಳ್ಳುತ್ತದೆ. ಆದ್ದರಿಂದ ಇತರ ಕ್ಷಾರಸಂಚಯನ ಕೋಶಗಳಲ್ಲಿರುವಂತೆ ಇಲ್ಲಿ ಸಹ ವಿದ್ಯುತ್ ಪೂರೈಕೆ ಮತ್ತು ವಿದ್ಯುತ್ ಸಂಗ್ರಹಣೆಯಲ್ಲಿ ಆಮ್ಲಜನಕದ ಅಯಾನುಗಳು ಧನ ಋಣಧ್ರುವಗಳ ನಡುವೆ ಸ್ಥಳಾಂತರಗೊಳ್ಳುತ್ತವೆ. ವಿದ್ಯುದ್ವಿಶ್ಲೇಷ್ಯವಾದ ಪೊಟ್ಯಾಸಿಯಂ ಹೈಡ್ರಾಕ್ಸೈಡ್ ದ್ರಾವಣದಲ್ಲಿಯೇ ಸತುವಿನ ಆಕ್ಸೈಡನ್ನು ಕರಗಿಸಿ ದ್ರಾವಣವನ್ನು ಸಂತೃಪ್ತ ಸ್ಥಿತಿಯಲ್ಲಿರಿಸುವುದರಿಂದ ಪ್ರತ್ಯೇಕ ಋಣ ಎಲೆಕ್ಟ್ರೋಡಿನ ಉಪಯೋಗ ವಿರುವುದಿಲ್ಲ. 

ಚಿತ್ರ-14

 ಕೋಶದ ರಚನೆಯಲ್ಲಿ ಧನ ಧ್ರುವದ ತಟ್ಟೆಗಳನ್ನು ಸೆಲ್ಲೊಫೇನ್ ಚೀಲಗಳಲ್ಲಿ ಇಟ್ಟಿರಬಹುದು. ಅಥವಾ ಮತ್ತಾವುದೇ ರೀತಿಯ ತೆರೆಗಳನ್ನು ತಟ್ಟೆಗಳ ನಡುವೆ ಇಟ್ಟಿರಬಹುದು.  ಇಂಥ ಅನೇಕ ತಟ್ಟೆಗಳನ್ನು ಪ್ಲಾಸ್ಟಿಕ್ ಕೋಶದ ಪಾತ್ರೆಯಲ್ಲಿ ಅಳವಡಿಸಿರುತ್ತಾರೆ.  ಎಲೆಕ್ಟ್ರೋಡುಗಳನ್ನು ಪರಿಧಿಯೊಂದಿಗೆ ಸಂಪರ್ಕಗೊಳಿಸಲು ವಿದ್ಯುದ್ವಾಹಿತಂತಿಗಳನ್ನು ಎಲೆಕ್ಟ್ರೊಡುಗಳಿಗೆ ಜೋಡಿಸಿರುತ್ತಾರೆ. ಹಲವಾರು ಕೋಶಗಳನ್ನು ಲೋಹದ ಪೆಟ್ಟಿಗೆಯಲ್ಲಿಟ್ಟಿರುವ ವಿದ್ಯುತ್‍ಕೋಶಗಳು ಬಳಕೆಯಲ್ಲಿವೆ. ವಿದ್ಯುತ್ ಸಂಗ್ರಹಣೆಯಲ್ಲಿ ಸ್ಥಿರ ವಿಭವವನ್ನಾಗಲೀ ಸ್ಥಿರ ವಿದ್ಯುತ್ಪ್ರವಾಹವನ್ನಾಗಲೀ ಉಪಯೋಗಿಸಬಹುದು. ಈ ಬಗೆಯ ಕೋಶಗಳಲ್ಲಿ ವಿವಿಧ ಸಂಚಯನಶಕ್ತಿಯ ಕೋಶಗಳು ಬಳಕೆಯಲ್ಲಿವೆ. ಮುಖ್ಯವಾಗಿ ಸ್ಥಳದಿಂದ ಸ್ಥಳಕ್ಕೆ ಒಯ್ಯುವ ಚಿತ್ರಗ್ರಹಣ ಹಾಗೂ ಧ್ವನಿಯಂತ್ರಗಳಲ್ಲಿ ಮತ್ತು ರಕ್ಷಣಾ ಇಲಾಖೆಯಲ್ಲಿ ಈ ಕೋಶಗಳನ್ನು ಬಳಸುತ್ತಾರೆ.
	3 ಶಿಷ್ಟ ವಿದ್ಯುತ್‍ಕೋಶಗಳು : ವೈಜ್ಞಾನಿಕ ಸಂಶೋಧನೆಯಲ್ಲಿ ಮತ್ತು ಪ್ರಯೋಗಶಾಲೆಗಳಲ್ಲಿ ಅನೇಕ ವೇಳೆ ನಿರ್ದಿಷ್ಟವಾದ ವಿಭವವನ್ನು ಕೊಡುವ ವಿದ್ಯುತ್ ಕೋಶಗಳ ಅವಶ್ಯಕತೆ ಇರುತ್ತದೆ. ಇಂಥ ವಿದ್ಯುತ್‍ಕೋಶಗಳಲ್ಲಿ ಮುಖ್ಯವಾದುದು ಮತ್ತು ಸಾಮನ್ಯವಾಗಿ ಬಳಕೆಯಲ್ಲಿರುವುದು ವೆಸ್ಟ್ ಸ್ಟ್ಯಾಂಡರ್ಡ್ ಕೋಶ. ಇದರಲ್ಲಿ ಪಾದರಸ ಮಿಶ್ರಿತ ಕ್ಯಾಡ್ಮಿಯಂ ಲೋಹವನ್ನು ಋಣಧ್ರುವವಾಗಿ ಉಪಯೋಗಿಸಿ ಋಣಧ್ರುವದ ಸುತ್ತಲೂ ಕ್ಯಾಡ್ಮಿಯಂ ಸಲ್ಫೇಟ್ ಹರಳುಗಳನ್ನು ಇಟ್ಟಿದೆ. ಧನಧ್ರುವವಾಗಿ ಪಾದರಸವನ್ನು ಉಪಯೋಗಿಸಿ ಇದನ್ನು ಪಾದರಸದ ಸಲ್ಫೇಟು ಮತ್ತು ಕ್ಯಾಡ್ಮಿಯಂನ ಸಲ್ಫೇಟು ಮಿಶ್ರಣದ ಕಣದಿಂದ ಆವರಿಸಿ ಈ ಮಿಶ್ರಣವನ್ನು ಪುನಃ ಕ್ಯಾಡ್ಮಿಯಂ ಸಲ್ಫೇಟು ಆವರಿಸುವಂತೆ ಅಳವಡಿಸಲಾಗಿದೆ. ವಿದ್ಯುದ್ವಿಶ್ಲೇಷ್ಯವಾಗಿ ಸಂತೃಪ್ತ ಕ್ಯಾಡ್ಮಿಯಂ ಸಲ್ಫೇಟ್ ದ್ರಾವಣವನ್ನು ಉಪಯೋಗಿಸಿದೆ. ಕೋಶದ ಪಾತ್ರೆಯನ್ನು ಗಾಳಿ ಹೋಗದಂತೆ ಪೂರ್ತಿಯಾಗಿ ಮುಚ್ಚಿರುವುದರಿಂದ ಕೋಶಸುತ್ತಲಿನ ವಾತಾವರಣದ ಏರಿಳಿತಗಳಿಂದ ಸುರಕ್ಷಿತವಾಗಿರುತ್ತದೆ. ಕೋಶದ ಆಂತರಿಕ ನಿರೋಧ ತೀರ ಕಡಿಮೆಯಿದ್ದು ಅದರಿಂದ ಪಡೆಯುವ ವಿದ್ಯುತ್ಪ್ರವಾಹ ಕಡಿಮೆಯಿರುವಾಗ ಧ್ರುವೀಕರಣದ ತೊಂದರೆ ಇರುವುದಿಲ್ಲ. ಕೋಶವನ್ನು ವಿದ್ಯುನ್ಮಾಪನಗಳಲ್ಲಿ ಉಪಯೋಗಿಸುವಾಗ ಅದರಿಂದ ಪಡೆಯುವ ವಿದ್ಯುತ್ಪ್ರವಾಹ ಅತಿ ಕಡಿಮೆ ಇರುವಂತೆ ನೋಡಿಕೊಳ್ಳುವುದು ಅಗತ್ಯ. ಇನ್ನು ಕೆಲವು ಅಳತೆಗಳಲ್ಲಿ ಕೋಶದಲ್ಲಿನ ಧನ ಅಥವಾ ಋಣ ಎಲೆಕ್ಟ್ರೋಡುಗಳು ಪ್ರತ್ಯೇಕವಾಗಿ ಒದಗಿಸುವ ವಿಭವವನ್ನು ಅಳೆಯಬೇಕಾಗುತ್ತದೆ. 

ಚಿತ್ರ-15

ಅಂಥ ಸಂದರ್ಭಗಳಲ್ಲಿ ಎರಡು ಎಲೆಕ್ಟ್ರೋಡುಗಳ ವಿದ್ಯುದ್ರಾಸಾಯನಿಕ ಜೋಡಣೆಯಲ್ಲಿ ಒಂದು ಎಲೆಕ್ಟ್ರೋಡನ್ನು ಶಿಷ್ಟ ಎಲೆಕ್ಟ್ರೊಡ್ ಆಗಿ ಉಪಯೋಗಿಸಿ ಮತ್ತೊಂದು ಎಲೆಕ್ಟ್ರೋಡ್ ಒದಗಿಸುವ ವಿಭವವನ್ನು ಅಳೆಯಬಹುದು.  ಇದರಲ್ಲಿ ಶಿಷ್ಟಎಲೆಕ್ಟ್ರೋಡಿನ ಅರ್ಧಕ್ರಿಯೆಯಲ್ಲಿ (ಹಾಫ್ ರಿಯಾಕ್ಷನ್) ಉಂಟಾಗುವ ವಿಭವ ನಿರ್ದಿಷ್ಟವಾಗಿ ತಿಳಿದಿರುತ್ತದೆ. ಆದ್ದರಿಂದ ಉಳಿದ ಎಲೆಕ್ಟ್ರೋಡಿನ ಅರ್ಧ ಕ್ತಿಯೆಯ ವಿಭವವನ್ನು ಎಲೆಕ್ಟ್ರೋಡುಗಳ ನಡುವಿನ ವಿಭವವನ್ನು ಅಳೆಯುವುದರಿಂದ ನಿರ್ಧರಿಸಬಹುದು. ಇದಕ್ಕಾಗಿ ಉಪಯೋಗಿಸುವ ಶಿಷ್ಟ ಎಲೆಕ್ಟ್ರೋಡುಗಳಲ್ಲಿ ಜಲಜನಕದ ಎಲೆಕ್ಟ್ರೊಡ್ ಮತ್ತು ಕ್ಯಾಲೊಮೆಲ್ ಎಲೆಕ್ಟ್ರೋಡುಗಳು ಮುಖ್ಯವಾಗಿವೆ. ಜಲಜನಕದ ಎಲೆಕ್ಟ್ರೋಡಿನಲ್ಲಿ ಜಲಜನಕದ ಅನಿಲ ಪ್ಲಾಟಿನಂ ಲೋಹದಲ್ಲಿ ಶೇಖರವಾಗಿರುವುದರಿಂದ ಪ್ಲಾಟಿನಂ ಲೋಹ ಜಡ ಎಲೆಕ್ಟ್ರೋಡ್ ಆಗಿಯೂ ಜಲಜನಕ ಕ್ರಿಯಾಶಾಲಿ ಪದಾರ್ಥವಾಗಿಯೂ ವರ್ತಿಸುತ್ತವೆ. ಎಲೆಕ್ಟ್ರೋಡ್ ಕ್ರಿಯೆ ಈ ರೀತಿ ಇರುತ್ತದೆ :
                    ಊ2 →   2ಊ  +  2e-
ವಿಭವದ ಅಳತೆಗಳಲ್ಲಿ ಮೇಲಿನ ಕ್ರಿಯೆಯಲ್ಲಿ ವಿಭವ ಶೂನ್ಯವೆಂದು ಭಾವಿಸುತ್ತಾರೆ. ಮತ್ತೊಂದು ಎಲೆಕ್ಟ್ರೋಡಿನೊಂದಿಗೆ ಜಲಜನಕದ ಎಲೆಕ್ಟ್ರೋಡನ್ನು ಉಪಯೋಗಿಸಿದಾಗ ಎಲೆಕ್ಟ್ರೋಡುಗಳ ನಡುವಿನ ವಿಭವ ಜೋಡಣೆಯಲ್ಲಿನ ಅಜ್ಞಾತ ಎಲೆಕ್ಟ್ರೋಡಿನ ವಿಭವವನ್ನು ಕೊಡುತ್ತದೆ.

	ಕ್ಯಾಲೊಮೆಲ್ ಎಲೆಕ್ಟ್ರೋಡಿನಲ್ಲಿನ ರಾಸಾಯನಿಕ ಕ್ರಿಯೆ ಈ ಕೆಳಗಿನ ರೀತಿ ಇರುತ್ತದೆ.  
ಊg2ಅಟ2  + 2e- →   2ಊg + 2ಅಟ-
	ಎಲೆಕ್ಟ್ರೋಡ್ ವಿಭವ ಪಾದರಸ ಕ್ಲೋರೈಡ್ ದ್ರಾವಣದ ಸಾರತೆಗೆ ಅನುಗುಣವಾಗಿರುತ್ತದೆ. ಎಲೆಕ್ಟ್ರೋಡ್ ವಿಭವ ದ್ರಾವಣದ ಉಷ್ಣತೆಯನ್ನೂ ಅವಲಂಬಿಸಿರುವುದರಿಂದ ನಿಷ್ಕøಷ್ಟ ಅಳತೆಗಳಲ್ಲಿ ಉಷ್ಣತೆಯನ್ನೂ ಗಣನೆಗೆ ತೆಗೆದುಕೊಳ್ಳಬೇಕು.
	ಇತರ ಬಗೆಯ (ವೋಲ್ಟಾ ಮಾದರಿಯಲ್ಲದ) ಕೋಶಗಳು : ಈ ಕೋಶಗಳಲ್ಲಿ ರಾಸಾಯನಿಕ ಮೂಲವಲ್ಲದ ಇತರ ಬಗೆಯ ಶಕ್ತಿಗಳ ರೂಪಾಂತರತೆಯಿಂದ ವಿದ್ಯುದುತ್ಪಾದನೆಯಾಗುತ್ತದೆ. ಈ ಪಂಗಡಕ್ಕೆ ಸೇರಿದ ಕೋಶಗಳು :1.ಸೌರವಿದ್ಯುತ್ ಕೋಶ. 2.ಇಂಧನ ವಿದ್ಯುತ್ ಕೋಶ. 3.ನ್ಯೂಕ್ಲಿಯರ್ ವಿದ್ಯುತ್ ಕೋಶ. ಈ ಕೋಶಗಳ ಬಗ್ಗೆ ಸಂಶೋಧನೆ ಬಹಳ ಹಿಂದಿನಿಂದ ನಡೆದಿದೆಯಾದರೂ ಇತ್ತೀಚಿನ ವರ್ಷಗಳಲ್ಲಿ ಪ್ರಾಮುಖ್ಯವಾಗಿರುವ ಸಂಶೋಧನೆಯಲ್ಲಿ ಉಪಯೋಗಿಸುವ ರಾಕೆಟ್, ಕೃತಕ ಉಪಗ್ರಹ, ಆಕಾಶವಾಹನ ಇತ್ಯಾದಿಗಳಲ್ಲಿ ಇವು ಹೆಚ್ಚಿನ ಸಂಖ್ಯೆಯಲ್ಲಿ ಬಳಕೆಗೆ ಬರುತ್ತಿವೆ. ವೋಲ್ಟಾ ಮಾದರಿಯ ಕೋಶಗಳೆಂದರೆ ಹೋಲಿಸಿದಾಗ ನಿತ್ಯಜೀವನದಲ್ಲಿ ಈ ಬಗೆಯ ಕೋಶಗಳು ಇಲ್ಲವೇ ಇಲ್ಲ ಎನ್ನುವಷ್ಟುಮಟ್ಟಿಗೆ ಕಡಿಮೆ ಬಳಕೆಯಲ್ಲಿವೆ. 

ಚಿತ್ರ-16

ಇದಕ್ಕೆ ಕಾರಣ ಈ ಕೋಶಗಳಿಂದ ದೊರೆಯುವ ವಿದ್ಯುಚ್ಛಕ್ತಿ ಬಲು ಕಡಿಮೆ ಇರುವುದು ಮತ್ತು ಕೆಲವು ಸಂದರ್ಭಗಳಲ್ಲಿ ಈ ಬಗೆಯ ಕೋಶಗಳನ್ನು ಉಪಯೋಗಿಸುವುದಕ್ಕೆ ತಗಲುವ ಅಧಿಕವೆಚ್ಚ. ಆಕಾಶ ಸಂಶೋಧನೆಯಲ್ಲಿ ಈ ಕೋಶಗಳ ಹೆಚ್ಚಿನ ಉಪಯುP್ತತೆಗೆ ಕಾರಣಗಳಿವು :1 ಕೋಶಗಳು ಪರಿಸರದಿಮದ ಶಕ್ತಿಯನ್ನು ಪಡೆದುಕೊಳ್ಳುವ ಅನುಕೂಲತೆ (ಉದಾಹರಣೆಗೆ ಸೌರಕೋಶ). 2 ಕೋಶಗಳ ಅತಿದೀರ್ಘ ಬಾಳಿಕೆ(ಉದಾಹರಣೆಗೆ, ನ್ಯೂಕ್ಲಿಯರ್ ಕೋಶ).3  ಕೋಶ ಕೆಲಸಮಾಡಲು ಬೇಕಾಗುವ ಇಂಧನ ಪದಾರ್ಥಗಳನ್ನು ಕ್ಷಿಪಣಿಗಳಲ್ಲಿ ಒಯ್ಯಲು ಇರುವ ಸೌಲಭ್ಯ (ಉದಾಹರಣೆಗೆ, ಇಂಧನಕೋಶಕ್ಕೆ ಬೇಕಾಗುವ ಜಲಜನಕ ಆಮ್ಲಜನಕಗಳು ರಾಕೆಟಿನ ಇಂಧನವೂ ಆಗಿವೆ). 4 ಕಡಿಮೆ ವಿದ್ಯುತ್ತಿನಿಂದ ಕೆಲಸಮಾಡುವ ವಿದ್ಯುದುಪಕರಣಗಳಿಗೆ ವಿದ್ಯುತ್ತನ್ನು ಅತಿ ಕಡಿಮೆಗಾತ್ರ ಮತ್ತು ತೂಕದ ಈ ಕೋಶಗಳು ಒದಗಿಸುವ ಸಾಮಥ್ರ್ಯ ಪಡೆದಿರುವಿಕೆ.
	ಆಕಾಶ ಸಂಶೋಧನೆಯ ಉಪಕರಣಗಳಲ್ಲಿ ಸಹ ಹೆಚ್ಚಿನ ವಿದ್ಯುತ್ತಿನ ಅವಶ್ಯಕತೆಯ ಸಂದರ್ಭಗಳಲ್ಲಿ (ಉದಾಹರಣೆಗೆ, ದೀಪ, ಹವಾನಿಯಂತ್ರಣ ಯಂತ್ರ ಇತ್ಯಾದಿ) ವಿಶೇಷ ರೀತಿಯಲ್ಲಿ ರಚಿಸಿದ ವೋಲ್ಟಾಮಾದರಿಯ ಕೋಶಗಳೇ ಬಳಕೆಯಲ್ಲಿವೆ. 
	ಸೌರವಿದ್ಯುತ್‍ಕೋಶ : ಈ ಬಗೆಯ ಕೋಶಗಳು ಸೂರ್ಯನ ಬೆಳಕಿನ ಶಕ್ತಿಯನ್ನು ವಿದ್ಯುತ್ತಾಗಿ ಪರಿವರ್ತಿಸುತ್ತವೆ. ಕೋಶದ ಕ್ರಿಯೆಯನ್ನು ದ್ಯುತಿ ವಿದ್ಯುದುತ್ಪಾದನಪರಿಣಾಮದಿಂದ (ಫೋಟೋವೋಲ್ಟೇಯಿಕ್ ಎಫೆಕ್ಟ್) ವಿವರಿಸಬಹುದು.  ಈ ಬಗೆಯ ಕೋಶಗಳನ್ನು ಸಾಮಾನ್ಯವಾಗಿ ಸಿಲಿಕಾನ್ ವಸ್ತುವಿನಿಂದ ತಯಾರಿಸಿರುತ್ತಾರೆ. ಪರಿಶುದ್ಧ ಸಿಲಿಕಾನ್ ಟಿ - ವಿಧದ ಅರೆವಿದ್ಯುದ್ವಾಹಕವಾಗಿದ್ದು ಇದರಲ್ಲಿ ಸ್ವತಂತ್ರ ಎಲೆಕ್ಟ್ರಾನುಗಳ ಚಲನೆಯಿಂದಾಗಿ ವಿದ್ಯುತ್ಪ್ರವಾಹ ಉಂಟಾಗುತ್ತದೆ. ಇವುಗಳಲ್ಲಿರುವ ಸ್ವತಂತ್ರ ಎಲೆಕ್ಟ್ರಾನುಗಳ ಸಂಖ್ಯೆ ವಿದ್ಯುದ್ವಾಹಕ ಲೋಹಗಳಲ್ಲಿರುವುದಕ್ಕಿಂತ ಬಲು ಕಡಿಮೆ. ಟಿ - ವಿಧದ ಅರೆವಿದ್ಯುದ್ವಾಹಕಗಳಿರುವಂತೆ ಠಿ - ವಿಧದ  ಅರೆವಿದ್ಯುದ್ವಾಹಕಗಳೂ ಇವೆ. ಇವುಗಳಲ್ಲಿ ಸ್ವತಂತ್ರವಾಗಿ ಚಲಿಸುವ ಧನವಿದ್ಯುತ್ತಿನ ರಂಧ್ರಗಳಿದ್ದು ಈ ರಂಧ್ರಗಳ ಚಲನೆಯಿಂದಾಗಿ ವಿದ್ಯುತ್ಪ್ರವಾಹ ಉಂಟಾಗುತ್ತದೆ. ಪರಮಾಣುವಿನಲ್ಲಿ ಎಲೆಕ್ಟ್ರಾನು ಇರಬೇಕಾದ ಸ್ಥಳದಲ್ಲಿ  ಎಲೆಕ್ಟ್ರಾನು ಇಲ್ಲದಿರುವಿಕೆಯನ್ನು ರಂಧ್ರದಿಂದ ನಿರ್ದೇಶಿಸುತ್ತಾರೆ. ಠಿ - ವಸ್ತುವಿನಲ್ಲಿ ಅಧಿಕಸಂಖ್ಯೆಯ ರಂಧ್ರಗಳ ಚಲನೆಯೊಂದಿಗೆ ಅಲ್ಪಸಂಖ್ಯೆಯ ಸ್ವತಂತ್ರ ಎಲೆಕ್ಟ್ರಾನುಗಳ ಚಲನೆಯೂ ಟಿ - ವಸ್ತುವಿನಲ್ಲಿ ಅಧಿಕಸಂಖ್ಯೆಯ ಎಲೆಕ್ಟ್ರಾನುಗಳ ಚಲನೆಯೊಂದಿಗೆ ಅಲ್ಪಸಂಖ್ಯೆಯ ರಂಧ್ರಗಳ ಚಲನೆಯೂ ಇರಬಹುದು. ಎಲೆಕ್ಟ್ರಾನು ಮತ್ತು ರಂಧ್ರಗಳು ವ್ಯತಿರಿಕ್ತ ವಿದ್ಯುತ್ತನ್ನು ಪಡೆದಿದ್ದು ವಿಭವ ಇರುವಾಗ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತವೆ. ಸಾಮಾನ್ಯ ಸ್ಥಿತಿಯಲ್ಲಿ ಟಿ - ಮತ್ತು ಠಿ - ವಸ್ತುಗಳಲ್ಲಿ  ವಿದ್ಯುತ್ ಕಣಗಳ ಅವ್ಯವಸ್ಥಿತ ಚಲನೆ ಇರುವುದಾದರೂ ವಿದ್ಯುತ್ ಸ್ಥಿತಿಯನ್ನು ಗಮನಿಸಿದಾಗ ಈ ವಸ್ತುಗಳು ವಿದ್ಯುದ್ರಹಿತವಾಗಿರುತ್ತವೆ. ಶುದ್ಧ ಸಿಲಿಕಾನ್ ವಸ್ತುವನ್ನು ಬೋರಾನಿನ ಆವಿಯ ವಾತಾವರಣದಲ್ಲಿಟ್ಟಾಗ ಟಿ - ವಿಧದ ಸಿಲಿಕಾನಿನ ಹೊರಮೈಮೇಲೆ ಠಿ - ವಿಧದ ವಸ್ತುವಿನ ಅತಿ ತೆಳುವಾದ ಪದರ ಉಂಟಾಗುತ್ತದೆ. ಇಂಥ ರಚನೆ ಠಿ - ಮತ್ತು ಟಿ - ವಿಧದ ವಸ್ತುಗಳು ಅತಿ ನಿಕಟವಾಗಿ ಸಂಪರ್ಕಗೊಂಡಿರುವ ಸಂಘಟಿತ ಠಿ - ಟಿ ಅರೆವಿದ್ಯುದ್ವಾಹಕ ವಸ್ತುವಾಗಿರುತ್ತದೆ. 

ಚಿತ್ರ-17

ಈ ರಚನೆಯನ್ನು ಠಿ - ಟಿ ಸಂಧಿ ಎಂದೂ ಠಿ ಮತ್ತು  ಟಿ ವಸ್ತುಗಳು ಸೇರುವ ಜಾಗವನ್ನು ಪ್ರತಿಬಂಧಕ (ಬ್ಯಾರಿಯರ್) ಎಂದೂ ಕರೆಯುತ್ತಾರೆ.  ಠಿ - ಟಿ ಸಂಧಿಯಲ್ಲಿನ ಠಿ-  ಮತ್ತು ಟಿ -ವಸ್ತುಗಳಲ್ಲಿರುವ ರಂಧ್ರ ಮತ್ತು ಎಲೆಕ್ಟ್ರಾನುಗಳು ಒಂದನ್ನೊಂದು ಆಕರ್ಷಿಸುವುದರಿಂದ  ಠಿ-  ಮತ್ತು ಟಿ - ವಸ್ತುಗಳ ಕಡೆಗೆ ಈ ವಿದೆಗೆ  ಕಡೆಗೆ  ಕಡೆಗೆ  ಪ್ರತಿಬಂಧಕದ ಮೂಲಕವಾಗಿ ನಡೆಯುತ್ತದೆ. ಆದರೆ ಈ ರೀತಿಯ ಎಲೆಕಟ್ರಾನು ಮತ್ತು ರಂಧ್ರಗಳ ಚಲನೆ ಪ್ರತಿಬಂಧಕದ ಮೂಲಕವಾಗಿ ಅವಿಚ್ಛಿನ್ನವಾಗಿ ನಡೆಯಲು ಸಾಧ್ಯವಿರುವುದಿಲ್ಲ. ಠಿ- ವಸ್ತುವಿನಲ್ಲಿನ ರಂಧ್ರಗಳು ಪ್ರತಿಬಂಧಕವನ್ನು ದಾಟಿ ಟಿ-  ವಸ್ತುವಿನಲ್ಲಿನ ಎಲೆಕ್ಟ್ರಾನುಗಳೊಡನೆ ಸೇರಿ ವಿದ್ಯುದ್ರಹಿತವಾಗುತ್ತವೆ. ಇದರಿಂದಾಗಿ ವಿದ್ಯುದ್ರಹಿತ ಟಿ- ವಸ್ತುವಿನಲ್ಲಿ  ಎಲೆಕ್ಟ್ರಾನುಗಳ ಅಭಾವ ಉಂಟಾಗಿ ಟಿ- ವಸ್ತು ಧನ ವಿದ್ಯುತ್ ಸ್ಥಿತಿಯನ್ನು ಪಡೆಯುತ್ತದೆ. ಈ ಧನ ವಿದ್ಯುತ್ ಸ್ಥಿತಿ ಪ್ರತಿಬಂಧಕದ ಬದಿಯಲ್ಲಿ ಹೆಚ್ಚಾಗಿರುವುದರಿಂದ ಇನ್ನೂ ಹೆಚ್ಚಿನ ರಂಧ್ರಗಳು ಠಿ-ವಸ್ತುವಿನಿಂದ ಟಿ- ವಸ್ತುವಿಗೆ ಬರುವುದನ್ನು ತಡೆಯುತ್ತದೆ. ಇದೇ ರೀತಿಯಾಗಿ ಪ್ರತಿಬಂಧಕದ ಇನ್ನೊಂದು ಬದಿಯಲ್ಲಿ (ಠಿ- ವಸ್ತುವಿನಲ್ಲಿ) ಋಣ ವಿದ್ಯುತ್ ಸ್ಥಿತಿ ಉಂಟಾಗಿ ಟಿ-  ವಸ್ತುವಿನಿಂದ ಎಲೆಕ್ಟ್ರಾನುಗಳು  ಠಿ -ವಸ್ತುವಿಗೆ ಚಲಿಸುವಲ್ಲಿ ತಡೆ ಉಂಟಾಗುತ್ತದೆ. ಪ್ರತಿಬಂಧಕದ ಎರಡು ಬದಿಗಳಲ್ಲಿ ಉಂಟಾಗುವ ಈ ವ್ಯತಿರಿಕ್ತ ವಿದ್ಯುತ್ ಸ್ಥಿತಿಗಳನ್ನು ಸಂಧಿವಿಭವದಿಂದ (ಜಂಕ್ಷನ್ ಪೊಟೆನ್ಶಿಯಲ್) ನಿರ್ದೇಶಿಸುತ್ತಾರೆ. ಠಿ - ಟಿ  ಸಂಧಿಯಲ್ಲಿನ ಪ್ರತಿಬಂಧಕದ ಬದಿಗಳಲ್ಲಿ ಅತಿ ತೆಳುವಾದ ಪದರದಲ್ಲಿ (ಸುಮಾರು 10-4 ಸೆಂ.ಮೀ ದಪ್ಪ) ಈ ವಿದ್ಯುತ್ ಸ್ಥಿತಿಯುಂಟಾಗುತ್ತದೆ. ಈ ಪದರಕ್ಕೆ ಶೋಷಕಪದರ ಎಂದು ಹೆಸರು. ಈಗ ಠಿ - ಟಿ ಸಂಧಿಯನ್ನು ಸಾಕಷ್ಟು ಮೊತ್ತದ ಬಾಹ್ಯವಿಭವದೊಂದಿಗೆ ಸಂಪರ್ಕಗೊಳಿಸಿ ಠಿ ಯನ್ನು ಧನ ವಿಭವಕ್ಕೂ ಟಿ- ಟಿ- ವಸ್ತುವನ್ನು ಋಣ ವಿಭವಕ್ಕೂ ಒಳಪಡಿಸಿದರೆ ಠಿ- ಮತ್ತು ಟಿ- ವಸ್ತುಗಳಲ್ಲಿನ ವಿದ್ಯುದ್ವಾಹಿಕಣಗಳು ಬಾಹ್ಯವಿಭವದಿಂದ ವಿಕರ್ಷಿತವಾಗಿ ಸಂಧಿ ವಿದ್ಯುದ್ವಿಭವವನ್ನು ದಾಟಿ ಠಿ -ಟಿ  ವಸ್ತುಗಳಲ್ಲಿನ ಚಲಿಸಿ ಬಾಹ್ಯಮಂಡಲದಲ್ಲಿ ಹರಿಯುವುದರಿಂದ ಉಪಯುಕ್ತ ವಿದ್ಯುತ್ಪ್ರವಾಹ ಉಂಟಾಗುತ್ತದೆ. ಬಾಹ್ಯ ವಿದ್ಯುದ್ವಿಭವದ ಧ್ರುವಗಳನ್ನು ಅದಲು ಬದಲು ಮಾಡಿ ಠಿ ಗೆ ಋಣ ವಿಭವವನ್ನೂ ಟಿ ಗೆ ಧನ ವಿಭವವನ್ನೂ ಒದಗಿಸಿದಾಗ ಬಾಹ್ಯವೋಲ್ಟೇಜ್ ವಿಭವದಂತೆಯೇ ವರ್ತಿಸಿ ಎಲೆಕ್ಟ್ರಾನ್ ಮತ್ತು ರಂಧ್ರಗಳ ಚಲನೆಗೆ ಇನ್ನೂ ಹೆಚ್ಚಿನ ಅಡಚಣೆಯನ್ನುಂಟುಮಾಡುತ್ತದೆ.  ಠಿ -ಟಿ ಸಂಧಿಯಲ್ಲಿನ ಈ ರೀತಿಯ ವಿದ್ಯುತ್ ಗುಣ ಠಿ -ಟಿ ಸಂಧಿಯನ್ನು ವಿದ್ಯುತ್ ಪರಿಶೋಧಕವನ್ನಾಗಿ (ಎಲೆಕ್ಟ್ರಿಕ್ ರೆಕ್ಟಿಫೈಯರ್) ಉಪಯೋಗಿಸಲು ಅನುಕೂಲವಾಗಿದೆ. ಈಗ ಸಿಲಿಕಾನ್-ಬೋರಾನ್ ಠಿ -ಟಿ ಸಂಧಿಯ ಠಿ- ಭಾಗವನ್ನು ಸೂರ್ಯನ ಬೆಳಕಿಗೆ ತೆರೆದಿಟ್ಟಾಗ ಬೆಳಕಿನ ಕಣಗಳು (ಫೋಟಾನುಗಳು) ಠಿ -  ವಸ್ತುವಿನ ಅತಿ ತೆಳುವಾದ ಪದರದಲ್ಲಿ (0.00001 ಸೆಂಮೀ) ಹೀರಲ್ಪಡುತ್ತವೆ. ಬೆಳಕಿನ ಕಣಗಳ ಶಕ್ತಿ ಠಿ -ವಸ್ತುವಿನ ಪರಮಾಣುಗಳಿಂದ ಎಲೆಕ್ಟ್ರಾನುಗಳನ್ನು ಬಿಡುಗಡೆ ಮಾಡುತ್ತದೆ. ಠಿ - ವಸ್ತು ಹೀರುವ ಒಂದೊಂದು ಫೋಟಾನ್ ಕಣವೂ ಒಂದೊಂದು ಎಲೆಕ್ಟ್ರಾನನ್ನು ಬಿಡುಗಡೆ ಮಾಡುತ್ತದೆ. ಪರಮಾಣುವಿನಲ್ಲಿ ಎಲೆಕ್ಟ್ರಾನುಗಳು ಬಿಡುಗಡೆಯಾದ ಸ್ಥಳದಲ್ಲಿ ರಂಧ್ರಗಳೂ ಸೃಷ್ಟಿಯಾಗುತ್ತವೆ. ಹೀಗೆ ಹೊಸದಾಗಿ ಸೃಷ್ಟಿಯಾದ ಎಲೆಕ್ಟ್ರಾನ್ ಮತ್ತು ರಂಧ್ರಗಳು ಠಿ - ವಸ್ತುವಿನಲ್ಲಿ ಸ್ವತಂತ್ರವಾಗಿ ಚಲಿಸಬಲ್ಲುವು. ಸಾಮಾನ್ಯ ಸ್ಥಿತಿಯ    ಠಿ -ು   ತಿಯ   ತಿಯ   ಂತ್ರ ವಿದ್ಯುತ್‍ಕಣಗಳ  ಸಾಂದ್ರತೆಯನ್ನು ಗಮನಿಸಿದಾಗ ಬೆಳಕಿನ ಕಣಗಳು ಹೀರಲ್ಪಡುವುದರಿಂದ  ಠಿ - ವಸ್ತುವಿನಲ್ಲಿನ  ಎಲೆಕ್ಟ್ರಾನುಗಳ ಸಾಂದ್ರತೆ ಒಮ್ಮೆಗೇ ಜಾಸ್ತಿಯಾಗುತ್ತದೆ. ಆದರೆ ರಂಧ್ರಗಳ ಸಾಂದ್ರತೆ ಅಷ್ಟೇ ಮೊತ್ತದಲ್ಲಿ ಜಾಸ್ತಿಯಾಗುವುದಿಲ್ಲ.  ಠಿ - ವಸ್ತುವಿನಲ್ಲಿನ ಹೆಚ್ಚಳದ  ಎಲೆಕ್ಟ್ರಾನುಗಳಲ್ಲಿ ಸಾಕಷ್ಟು ಚಲನಶಕ್ತಿ ಇದ್ದಾಗ ಇವು ಸಂಧಿವಿಭಬವನ್ನು ದಾಟಿ    ಟಿ- ವಸ್ತುವನ್ನು ಸೇರುತ್ತದೆ.    ಟಿ- ವಸ್ತುವಿನಲ್ಲಿ ಎಲೆಕ್ಟ್ರಾನುಗಳು ಸ್ವತಂತ್ರವಾಗಿ ಚಲಿಸಬಲ್ಲವಾದ್ದರಿಂದ   ಠಿ ಯಿಂದ ಬಂದ ಎಲೆಕ್ಟ್ರಾನುಗಳು ಬಾಹ್ಯಪರಿಧಿಯನ್ನು ಸೇರಿ ಉಪಯುಕ್ತವಾದ ವಿದ್ಯುತ್ಪ್ರವಾಹವನ್ನು ಉಂಟುಮಾಡುತ್ತವೆ. ಟಿ- ವಿಧದ ಸಿಲಿಕಾನ್ ವಸ್ತುವಿನ ಮೇಲೆ ಬೋರಾನ್ ವಸ್ತುವನ್ನು ವ್ಯಾಪಿಸಿ (ಡಿಫ್ಯೂಸ್ ಬೋರಾನ್) ಠಿ -ಟಿ ಸಂಧಿಯನ್ನು ರಚಿಸುವಂತೆಯೇ ಠಿ- ವಿಧದ ಸಿಲಿಕಾನ್ ವಸ್ತುವಿನ ಮೇಲೆ ರಂಜಕದ ಕಣಗಳನ್ನು ವ್ಯಾಪಿಸುವುದರಿಂದ ಟಿ - ಠಿ ಸಂಧಿಯನ್ನೂ ತಯಾರಿಸಬಹುದು. ಈಗ ಟಿ -ವಸ್ತುವನ್ನು ಬೆಳಕಿಗೆ ತೆರೆದಿಟ್ಟಾಗ ಸಹ ಟಿ -ವಸ್ತುವಿನಲ್ಲಿ  ಬೆಳಕಿನ ಕಣಗಳು ಹೀರಲ್ಪಟ್ಟು ಎಲೆಕ್ಟ್ರಾನ್ ರಂಧ್ರಗಳು ಸೃಷ್ಟಿಯಾಗಿ ಇವು ಬಾಹ್ಯ ಮಂಡಲದಲ್ಲಿ ಚಲಿಸುವುದರಿಂದ ವಿದ್ಯುತ್ಪ್ರವಾಹ ಉಂಟಾಗುತ್ತದೆ.  ವೋಲ್ಟಾ ಮಾದರಿಯ ಕೋಶಗಳನ್ನು ಸ್ಥಿರ ವೋಲ್ಟೇಜ್ ಉತ್ಪಾದಕ ಎನ್ನುವಂತೆ ಸೌರಶಕ್ತಿ ಕೋಶಗಳನ್ನು ಸ್ಥಿರವಿದ್ಯುತ್‍ಪ್ರವಾಹ ಉತ್ಪಾದಕಗಳು ಎಂದು ಕರೆಯುತ್ತಾರೆ. 
	ಪರಿಸರದ ಉಷ್ಣತೆ ಸೌರಶಕ್ತಿಕೋಶದ ಕ್ರಿಯೆಯನ್ನು ಗಮನಾರ್ಹವಾಗಿ ಬದಲಾಯಿಸುತ್ತದೆ. ಉಷ್ಣತೆ ಕಡಿಮೆ ಇರುವಾಗ ಕೋಶದ ವಿದ್ಯುದುತ್ಪಾದನೆ ಹೆಚ್ಚಾಗುತ್ತದೆ. ಸೌರಶಕ್ತಿ ವಿದ್ಯುತ್ ಕೋಶಗಳನ್ನು ಅತಿ ಎತ್ತರಕ್ಕೆ ಹಾರುವ ಕ್ಷಿಪಣಿಗಳಲ್ಲಿ ಮತ್ತು ಕೃತಕ ಉಪಗ್ರಹಗಳಲ್ಲಿ ಉಪಯೋಗಿಸಿದಾಗ ಸಮರ್ಪಕವಾಗಿ ಕೆಲಸ ಮಾಡುವುದು ಕಂಡುಬಂದಿದೆ. ಉಪಗ್ರಹ ಭೂಮಿಯ ಸನಿಹದಲ್ಲಿ ಸಂಚರಿಸುವಾಗ ಕೋಶ ವಿದ್ಯುತ್ತನ್ನು ಉತ್ಪಾದಿಸುವುದಿಲ್ಲವಾದ್ದರಿಂದ ಆ ಸಮಯದಲ್ಲಿ ವಿದ್ಯುತ್ ಪೂರೈಕೆಗೆ ವೋಲ್ಟಾ ಮಾದರಿಯ ಕೋಶಗಳನ್ನು ಉಪಯೋಗಿಸಬೇಕಾಗುತ್ತದೆ. ಅಂತರಗ್ರಹಯಾನ ವಾಹನಗಳಲ್ಲಿ ಸೌರಶಕ್ತಿಕೋಶಗಳನ್ನು ಉಪಯೋಗಿಸಿದಾಗ ಕೋಶಗಳಿರುವ ಭಾಗ ಯಾವಾಗಲೂ ತಾನೇ ತಾನಾಗಿ ಸೂರ್ಯನ ಕಡೆಗೆ ತಿರುಗಿ ನಿಂತಿರುವಂಥ ಏರ್ಪಾಡು ಇರುತ್ತದೆ. ಕೋಶಗಳು ಸಮರ್ಪಕವಾಗಿ ಕೆಲಸಮಾಡಲು ಸೂರ್ಯನ ಬೆಳಕನ್ನು ಯಥೇಚ್ಛವಾಗಿ ಪಡೆಯಬೇಕಾದ್ದರಿಂದ ಕೋಶಗಳನ್ನು ಆಕಾಶನೌಕೆಯ ಹೊರಗೇ ಇಡಬೇಕಾಗುತ್ತದೆ. ಇದರಿಂದಾಗಿ ಕೋಶಗಳು ಆಕಾಶದಲ್ಲಿ ಸದಾಕಾಲ ಇರುವ ಅನೇಕ ರೀತಿಯ ವಿಕಿರಣಪಟು ಕಣಗಳನ್ನು (ಉದಾಹರಣೆಗೆ ಅಧಿಕಶಕ್ತಿಯ ಎಲೆಕ್ಟ್ರಾನ್, ಪ್ರೋಟಾನ್, ಎಕ್ಸ್‍ಕಿರಣ, ಗಾಮಾಕಿರಣ ಇತ್ಯಾದಿ) ಎದುರಿಸಬೇಕಾಗುತ್ತದೆ. ಸಾಮಾನ್ಯವಾಗಿ ಅರೆವಿದ್ಯುದ್ವಾಹಕಗಳು ವಿಕಿರಣಪಟುತ್ವಕ್ಕೆ ಒಳಗಾದಾಗ ಅವುಗಳಲ್ಲಿ ಉಂಟಾಗುವ ಭೌತ ಮತ್ತು ರಾಸಾಯನಿಕ ಬದಲಾವಣೆಗಳಿಂದಾಗಿ ಸಮರ್ಪಕವಾಗಿ ಕೆಲಸಮಾಡುವುದಿಲ್ಲ.  ಇತ್ತೀಚಿನ ಸಂಶೋಧನೆಗಳ ಪ್ರಕಾರ ಸಿಲಿಕಾನಿಗೆ ಅತ್ಯಲ್ಪಮೊತ್ತದ ಲೀಥಿಯಂನ್ನು ಸೇರಿಸುವುದರಿಂದ ಕೋಶಗಳಿಗೆ ವಿಕರಣಪಟು ಕಣಗಳಿಂದುಂಟಾಗುವ ಹಾನಿ ತಪ್ಪುತ್ತದೆಂದು ತಿಳಿದುಬಂದಿದೆ.
	ಇಂಧನ ವಿದ್ಯುತ್ ಕೋಶ :  ಇದನ್ನು ಒಂದು ಬಗೆಯ ಪ್ರಧಾನ ವಿದ್ಯುತ್ ಕೋಶವೆಂದು ಸಹ ಪರಿಗಣಿಸಬಹುದು. ಆದರೆ ಇದರಲ್ಲಿನ ರಾಸಾಯನಿಕ ಪದಾರ್ಥಗಳು ಕೋಶದಲ್ಲಿನ ಎಲೆಕ್ಟ್ರೋಡ್ ರೂಪದಲ್ಲಾಗಲಿ ಇಲ್ಲವೆ ದ್ರಾವಣದ ರೂಪದಲ್ಲಾಗಲಿ ಇರದೆ ಕೋಶದ ಮೂಲಕ ಪ್ರವಹಿಸುವ ಇಂಧನ ಅನಿಲಗಳಾಗಿವೆ. ಸರಳ ರೀತಿಯ ಇಂಧನ ಕೋಶವನ್ನು ಚಿತ್ರ 18ರಲ್ಲಿ ತೋರಿಸಿದೆ. ಈ ಕೋಶದಲ್ಲಿ ಜಲಜನಕ ಮತ್ತು ಆಮ್ಲಜನಕ ಅನಿಲಗಳು ಬೇರೆ ಬೇರೆಯಾಗಿ ಸೂಕ್ಷ್ಮ ರಂಧ್ರಗಳಿರುವ ನಾಳಗಳಲ್ಲಿ ಪ್ರವಹಿಸುತ್ತವೆ.  ಅನಿಲಗಳು ರಂಧ್ರಗಳ ಮೂಲಕ ಕೋಶದಲ್ಲಿರುವ ಪೊಟ್ಯಾಸಿಯಂ ಹೈಡ್ರಾಕ್ಸೈಡ್ ದ್ರಾವಣದಲ್ಲಿ ಪ್ರಸರಿಸುತ್ತವೆ. 

ಚಿತ್ರ-18

ಆದರೆ ದ್ರಾವಣದಿಂದ ಅನಿಲಗಳು ಪುನಃ ನಾಳಗಳ ಒಳಕ್ಕೆ ಪ್ರವೇಶಿಸದಂತೆ ನಾಳಗಳಲ್ಲಿನ ಅನಿಲದ ಒತ್ತಡ ತಡೆಯುತ್ತದೆ. ಅನಿಲನಾಳಗಳನ್ನು ದ್ರಾವಣವೇ ಆಗಲಿ ಅನಿಲಗಳೇ ಆಗಲಿ ನಾಶಪಡಿಸದಂಥ ಅಂದರೆ (ತುಕ್ಕು ಹಿಡಿಯದಂಥ) ಲೋಹದಿಂದ ತಯಾರಿಸಿರುತ್ತಾರೆ. ವಿದ್ಯುದುತ್ಪಾದನೆಯಲ್ಲಿ ಕೋಶದಲ್ಲಿನ ಕ್ರಿಯೆ ಈ ರೀತಿ ಇದೆ :
ಕ್ರಿಯೆ  1, ಎಡನಾಳದ ಬಳಿ : ಊ2 + 2ಔಊ  → 2ಊ2ಔ  + 2e-      
ಕ್ರಿಯೆ  2. ಬಲನಾಶದ ಬಳಿ :  ಳಿ ಔ2  +  ಊ2ಔ →  2ಔಊ - - 2e-
	ಆದ್ದರಿಂದ ಕೋಶದಲ್ಲಿ ಜಲಜನಕ ಆಮ್ಲಜನಕಗಳನ್ನು 2:1 ರ ನಿಷ್ಪತ್ತಿಯಲ್ಲಿಟ್ಟಾಗ 2ನೆಯ ಕ್ರಿಯೆಯಲ್ಲಿ ಬಿಡುಗಡೆಯಾದ ಹೈಡ್ರಾಕ್ಸಿಲ್ ಅಯಾನುಗಳು (ಔಊ-) 1ನೆಯ ಕ್ರಿಯೆಯಲ್ಲಿ ವ್ಯಯವಾಗಿ ಕೋಶದ ಆದ್ಯಂತಕ್ರಿಯೆಯಲ್ಲಿ ನೀರು (ಊ2ಔ) ಉಂಟಾಗುತ್ತದೆ. ಇದರ ಜೊತೆಗೆ ಎಡನಾಳದ ಬಳಿ ಬಿಡುಗಡೆಯಾದ ಎಲೆಕ್ಟ್ರಾನುಗಳು ಬಲನಾಳದ ಬಳಿ ವ್ಯಯವಾಗುತ್ತವೆ. ಎಡ ಮತ್ತು ಬಲನಾಳಗಳಿಗೆ ಬಾಹ್ಯ ವಿದ್ಯುನ್ಮಂಡಲದ ಮೂಲಕ ಸಂಪರ್ಕ ಕಲ್ಪಿಸಿದಾಗ ಮೇಲಿನ ಕ್ರಿಯೆಯಲ್ಲಿನ ಎಲೆಕ್ಟ್ರಾನುಗಳು ಎಡನಾಳದಿಂದ ಹೊರಟು ಮಂಡಲದಲ್ಲಿ ಪ್ರವಹಿಸಿ ಬಲನಾಳದ ಮೂಲಕ ದ್ರಾವಣವನ್ನು ಸೇರುತ್ತವೆ. ಇದರಿಂದಾಗಿ ಬಾಹ್ಯಮಂಡಲದಲ್ಲಿ ಉಪಯುಕ್ತ ವಿದ್ಯುತ್‍ಪ್ರವಾಹ ಉಂಟಾಗುತ್ತದೆ. ಕೋಶದಲ್ಲಿನ ರಾಸಾಯನಿಕ ಪದಾರ್ಥಗಳು ಅವುಗಳ ಶಿಷ್ಟಸ್ಥಿತಿಯಲ್ಲಿ (ಸ್ಟ್ಯಾಂಡರ್ಡ್ ಸ್ಟೇಟ್) ಇದ್ದಾಗ ಕೋಶ 1.17 ವೋಲ್ಟುಗಳಷ್ಟು ವಿಭವವನ್ನು 1-2 ಆಂಪಿಯರ್/ಚದರ ಮೀಟರ್ ವಿದ್ಯುತ್ಪ್ರವಾಹ ಸಾಂದ್ರತೆಯಲ್ಲಿ ಕೊಡಬಲ್ಲುದು.
	ಎಲೆಕ್ಟ್ರೋಡುಗಳು (ಅನಿಲನಾಳಗಳು) ಬಲು ಬೇಗನೆ ಅನಿಲಗಳ ಅಶುದ್ಧತೆಯಿಂದಾಗಿ, ಮುಖ್ಯವಾಗಿ ಜಲಜನಕದ ಅಶುದ್ಧತೆಯಿಂದಾಗಿ, ನಶಿಸಿಹೋಗುವುದರಿಂದ ಇಂಧನ ಕೋಶಗಳಲ್ಲಿನ ಮುಖ್ಯ ತೊಂದರೆ ಉಂಟಾಗುವುದು. ಕೋಶಕ್ಕೆ ಬೇಕಾಗುವ ಪರಿಶುದ್ಧ ಜಲಜನಕ ಅನಿಲವನ್ನು ತಯಾರಿಸುವುದಕ್ಕೆ ತಗಲುವ ವೆಚ್ಚ ಅಪಾರ.  ಇಂಧನಶಕ್ತಿಕೋಶದಷ್ಟೇ ವಿದ್ಯುಚ್ಛಕ್ತಿಯನ್ನು ಉಷ್ಣವಿದ್ಯುಜ್ಜನಕಯಂತ್ರಗಳಿಂದ (ಥರ್ಮೋ ಎಲೆಕ್ಟ್ರಿಕ್ ಜನರೇಟರ್ಸ್) ಪಡೆಯುವ ವೆಚ್ಚಕ್ಕೆ ಹೋಲಿಸಿದಾಗ ಇಂಧನ ಕೋಶದ ವೆಚ್ಚ ಹಲವು ಪಾಲು ಹೆಚ್ಚು ಇರುತ್ತದೆ. ಆದರೆ ಬಾಹ್ಯಾಕಾಶ ವಾಹನಗಳಲ್ಲಿ ಇಂಧನಶಕ್ತಿಗಾಗಿ ಘನೀಕರಿಸಿದ ಪರಿಶುದ್ಧ ಜಲಜನಕ ಮತ್ತು ಆಮ್ಲಜನಕಗಳನ್ನು ಸಮರ್ಪಕವಾಗಿ ಕೊಂಡೊಯ್ಯುವ ಸಲಕರಣೆಗಳಿರುವುದರಿಂದ ಈ ಸಂದರ್ಭದಲ್ಲಿ ಸಮರ್ಪಕವಾಗಿ ಕೆಲಸಮಾಡುವ ಅತಿ ದುಬಾರಿಯಲ್ಲದ ಇಂಧನ ಶಕ್ತಿವಿದ್ಯುತ್ ಕೋಶಗಳನ್ನು ಉಪಯೋಗಿಸಬಹುದು. ಪ್ರಾಯೋಗಿಕವಾಗಿ ಇಂಧನ ಶಕ್ತಿ ವಿದ್ಯುತ್ ಕೋಶಗಳನ್ನು ಸಣ್ಣ ಮಾದರಿಯ ವಾಹನಗಳ ಚಾಲಕ ಶಕ್ತಿಗಾಗಿ ಉಪಯೋಗಿಸಿದಾಗ ಇವು ಸಮರ್ಪಕವಾಗಿ ಕೆಲಸಮಾಡುವುದು ಕಂಡುಬಂದಿದೆ. ದೊಡ್ಡ ಗಾತ್ರದ ವಾಹನಗಳಲ್ಲಿ ಚಾಲಕಶಕ್ತಿಗೆ ಈ ಕೋಶಗಳನ್ನು ಬಳಸುವ ಸಾಧ್ಯತೆ ಉಂಟಾದಾಗ ಸ್ವಯಂಚಾಲಿತ ವಾಹನಗಳಲ್ಲಿ ಪೆಟ್ರೋಲನ್ನು ಇಂಧನವಾಗಿ ಉಪಯೋಗಿಸುವುದನ್ನು ತಪ್ಪಿಸಬಹುದು. ಪೆಟ್ರೋಲನ್ನು ಉಪಯೋಗಿಸಿಕೊಂಡು ಚಲಿಸುವ ವಾಹನಗಳು ಹೊರದೂಡುವ ಹಾನಿಕರ ಅನಿಲಗಳು ಸುತ್ತಲಿನ ವಾತಾವರಣವನ್ನು ಕಲುಷಿತಗೊಳಿಸುವುದನ್ನು ಇಂಧನಶಕ್ತಿ ವಿದ್ಯುತ್ ಕೋಶಗಳ ಬಳಕೆಯಿಂದ ತಪ್ಪಿಸುವ ಸಾಧ್ಯತೆ ಇದೆ. ದೊಡ್ಡ ದೊಡ್ಡ ಕಾರ್ಖಾನೆಗಳ ಕುಲುಮೆಗಳೊಳಕ್ಕೆ ಹೋಗುವ ಗಾಳಿಯ ಮೊತ್ತವನ್ನು ಕರಾರುವಕ್ಕಾಗಿ ನಿಯಂತ್ರಿಸಲು ಇಂಧನ ಕೋಶಗಳನ್ನು ಪ್ರಾಯೋಗಿಕವಾಗಿ ಉಪಯೋಗಿಸಿದಾಗ ಇವು ಅತ್ಯಂತ ಸಮರ್ಪಕವಾಗಿ ಕೆಲಸಮಾಡುವುದು ಕಂಡುಬಂದಿದೆ. ಕುಲುಮೆಯಿಂದ ಹೊರಬರುವ ಅನಿಲಗಳ ಮಾರ್ಗದಲ್ಲಿ ಇಂಧನಕೋಶವನ್ನು (ಜಿರ್‍ಕೋನಿಯಂ ಆಕ್ಸೈಡಿನ ಘನ ವಿದ್ಯುದ್ವಿಶ್ಲೇಷ್ಯವನ್ನು ಉಪಯೋಗಿಸಿ ತಯಾರಿಸಿದ ಕೋಶ) ಸೂಕ್ತ ರೀತಿಯಲ್ಲಿ ಅಳವಡಿಸಿದಾಗ ಈ ಅನಿಲಗಳಲ್ಲಿರುವ ಆಮ್ಲಜನಕದ ಮೊತ್ತಕ್ಕೆ ಅನುಸಾರವಾಗಿ ಕೋಶ ವಿದ್ಯುತ್ಪ್ರವಾಹವನ್ನು ಉಂಟುಮಾಡುತ್ತದೆ. ಕುಲುಮೆಂiÀಲಿನ ಬೆಂಕಿ ಉರಿಯಲು ಹೊರಗಿನ ಗಾಳಿಯನ್ನು (ಆಮ್ಲಜನಕವನ್ನು) ಒದಗಿಸಿದಾಗ ಗಾಳಿಯ ಮೊತ್ತ ಸಾಕಷ್ಟಿದೆಯೆ ಇಲ್ಲವೆ ಎಂಬುದನ್ನು ಇದರಿಂದಾಗಿ ತಿಳಿಯಬಹುದು. ಕುಲುಮೆಯಿಂದ ಹೊರ ಬರುವ ಅನಿಲದಲ್ಲಿ ತೀರ ಕಡಿಮೆ ಆಮ್ಲಜನಕದ ಪ್ರಮಾಣ ಕುಲುಮೆಯ ಉರಿಗೆ ಸಾಕಷ್ಟು ಹೊರಗಿನ ಗಾಳಿ ಬರುತ್ತಿಲ್ಲವೆಂಬುದನ್ನು ಸೂಚಿಸುತ್ತದೆ. ಅದೇ ರೀತಿ ಕುಲುಮೆಯೊಳಕ್ಕೆ ಅತಿ ಹೆಚ್ಚಿನ ಮೊತ್ತದಲ್ಲಿ ಗಾಳಿಯನ್ನು ಒದಗಿಸಿದಾಗಲೂ ಅದರಲ್ಲಿ ಬೆಂಕಿ ಉರಿಯುವುದು ಪೂರ್ಣವಾಗದೆ (ಹೆಚ್ಚಿನ ಗಾಳಿ ಬೆಂಕಿಯನ್ನು ನಂದಿಸಲೂಬಹುದು) ಕುಲುಮೆಯಿಂದ ಹೊರಬರುವ ಅನಿಲದಲ್ಲಿ ಆಮ್ಲಜನಕದ ಮೊತ್ತ ಹೆಚ್ಚು ಇರುತ್ತದೆ. ವಿದ್ಯುತ್‍ಕೋಶ ಉತ್ಪಾದಿಸುವ ವಿದ್ಯುತ್ತನ್ನು ಕಾರ್ಯನಿಯಂತ್ರಣ (ಸರ್ವೋ ಮೆಕ್ಯಾನಿಸಂ) ಸಾಧನಗಳೊಂದಿಗೆ ಉಪಯೋಗಿಸಿಕೊಂಡು ಕುಲುಮೆಯ ಗಾಳಿ ಸರಬರಾಜನ್ನು ವ್ಯವಸ್ಥಿತಗೊಳಿಸಬಹುದು.
	ಪರಮಾಣುಶಕ್ತಿ ವಿದ್ಯುತ್‍ಕೋಶಗಳು : ವಿಕಿರಣಪಟುತ್ವದಲ್ಲಿ ಹೊರ ಬರುವ ಬೀಟ ಕಣದ ಅಥವಾ ವಿಕಿರಣಪಟುವಸ್ತುವಿನಲ್ಲಿ ಉಂಟಾಗುವ ಹೆಚ್ಚಿನ ಉಷ್ಣಶಕ್ತಿಯನ್ನು ಉಪಯೋಗಿಸಿಕೊಂಡು ಈ ಕೋಶಗಳು ವಿದ್ಯುತ್ತನ್ನು ಉತ್ಪಾದಿಸುತ್ತವೆ. ಈ ಬಗೆಯ ಕೋಶಗಳಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ : 1. ಹೆಚ್ಚು ವಿಭವದ ನ್ಯೂಕ್ಲಿಯರ್ ಕೋಶಗಳು. ಇವು ಸಾವಿರಾರು ವೋಲ್ಟ್ ವಿಭವವನ್ನು ಅತ್ಯಂತ ಕಡಿಮೆ ವಿದ್ಯುತ್ಪ್ರವಾಹದೊಂದಿಗೆ (10-12 ಆಂಪಿಯರ್) ಒದಗಿಸುತ್ತವೆ. ಈ ಕೋಶಗಳು ವಿಕಿರಣಪಟುತ್ವದಲ್ಲಿ ಬೀಟ ಕಣಗಳ ಶಕ್ತಿಯನ್ನು ಉಪಯೋಗಿಸಿಕೊಂಡು ಕೆಲಸಮಾಡುತ್ತವೆ. 2. ಕಡಿಮೆ ವಿಭವದ ನ್ಯೂಕ್ಲಿಯರ್ ಕೋಶಗಳು. ಇವು ಒಂದೆರಡು ವೋಲ್ಟುಗಳಷ್ಟು ವಿಭವವನ್ನು 10-6 ಆಂಪಿಯರ್ ವಿದ್ಯುತ್ಪ್ರವಾಹದೊಂದಿಗೆ ಉಂಟುಮಾಡುತ್ತವೆ. ಈ ಕೋಶಗಳು ಕೆಲಸಮಾಡುವ ವಿಧಾನದಿಂದಾಗಿ ಮೂರು ರೀತಿಯ ಕೋಶಗಳನ್ನು ಗಮನಿಸಬಹುದು : (ಅ)ಉಷ್ಣ ವಿದ್ಯುದುತ್ಪಾದಕ ಕೋಶ ; (ಬಿ) ಅನಿಲ ಅಯಾನೀಕರಣ ನ್ಯೂಕ್ಲಿಯರ್ ಕೋಶ ; (ಸಿ) ಎರಡು ಹಂತದಲ್ಲಿ ಕೆಲಸಮಾಡುವ ಮಿಣುಕು ದ್ಯುತಿ ವಿದ್ಯುದುತ್ಪಾದಕ ಕೋಶ.
	ಮೇಲಿನ ಕೋಶಗಳೆಲ್ಲವೂ ವಿಕಿರಣಪಟುವಸ್ತುವನ್ನು ಉಪಯೋಗಿಸಿಕೊಂಡು ವಿದ್ಯುತ್ತನ್ನು ಉತ್ಪತ್ತಿಮಾಡುವುದರಿಂದ ಮತ್ತು ವಿಕಿರಣಪಟುತ್ವ ಸ್ವಯಂಚಲಿಯಾಗಿ ನಡೆಯುತ್ತಿರುವುದರಿಂದ ಈ ಕೋಶಗಳ ವಿದ್ಯುಚ್ಛಕ್ತಿಯನ್ನು ಬಾಹ್ಯಮಂಡಲದಲ್ಲಿ ಉಪಯೋಗಿಸಲಿ ಉಪಯೋಗಿಸದಿರಲಿ ಕೋಶದ ವಿದ್ಯುದುತ್ಪಾದನೆ ಮಾತ್ರ ಸತತವಾಗಿ ನಡೆಯುತ್ತಿರುತ್ತದೆ. ಈ ಗುಣದಲ್ಲಿ ನ್ಯೂಕ್ಲಿಯರ್ ಕೋಶಗಳು ಇತರ ಕೋಶಗಳಿಗಿಂತ ಭಿನ್ನವಾಗಿವೆ. ಇವುಗಳ ಮತ್ತೊಂದು ಗುಣವೆಂದರೆ ಇತರ ರಾಸಾಯನಿಕ ವಸ್ತುಗಳಂತೆ ವಿಕಿರಣಪಟುವಸ್ತು ಯಾವ ಸಮಯದಲ್ಲೇ ಆಗಲಿ ಪೂರ್ಣವಾಗಿ ವ್ಯಯವಾಗಿರುವುದಿಲ್ಲ. ಅಂದರೆ ಒಮ್ಮೆ ರಚಿಸಿದ ಅನಂತರ ಕೋಶದ ವಿದ್ಯುತ್‍ಪೂರೈಕೆ ಸದಾಕಾಲ ಇರುತ್ತದೆ. ಆದರೆ ವಿಕಿರಣಪಟುವಸ್ತುವಿನ ಅರ್ಧಾಯುವಿನೊಳಗೆ ಕೋಶದ ವಿದ್ಯುತ್ ಪೂರೈಕೆ ಗಮನಾರ್ಹವಾಗಿ ಕಡಿಮೆಯಾಗುತ್ತದೆ.
	ಅಧಿಕ ವೋಲ್ಟೇಜಿನ ನ್ಯೂಕ್ಲಿಯರ್ ಕೋಶ : ಕೋಶದ ರಚನೆಯಲ್ಲಿ ಬೀಟ ಕಣಗಳನ್ನು ಮಾತ್ರವೇ ಹೊರಸೂಸುವ ವಿಕಿರಣ ಸಮಸ್ಥಾನಿಯನ್ನು (ಐಸೊಟೋಪ್) ಕೋಶದ ಒಂದು ಎಲೆಕ್ಟ್ರೋಡ್ ಮೇಲೆ ಇಡುತ್ತಾರೆ. ಸಾಮಾನ್ಯವಾಗಿ ಸ್ಟ್ರಾನ್‍ಷಿಯಂ-90 ಅಥವಾ ಕ್ರಿಪ್ಟಾನ್-85 ಅಥವಾ ಟ್ರಿಟಿಯಂ (ಜಲಜನಕ-3) ವಿಕಿರಣಪಟು ಸಮಸ್ಥಾನಿಯನ್ನು ಉಪಯೋಗಿಸಬಹುದು. ವಿಕಿರಣಪಟುತ್ವದಲ್ಲಿ ಹೊರಬರುವ ಬೀಟಕಣಗಳು ಕೋಶದ ಮತ್ತೊಂದು ಎಲೆಕ್ಟ್ರೋಡಿನ ಮೇಲೆ ಬೀಳುವಂತೆ ಇಟ್ಟು ಎಲೆಕ್ಟ್ರೋಡುಗಳ ನಡುವೆ ವಿದ್ಯುದವಾಹಕ ಘನವಸ್ತುಗಳನ್ನು ಇಟ್ಟಿರುತ್ತಾರೆ. ಕೆಲವು ವೇಳೆ ಎಲೆಕ್ಟ್ರೋಡುಗಳನ್ನು ನಿರ್ವಾತಕೋಶದಲ್ಲಿಟ್ಟಂಥ ಕೋಶವನ್ನು ರಚಿಸಬಹುದು. ಬೀಟ ಕಣಗಳು ಒಂದು ಎಲೆಕ್ಟ್ರೋಡಿನಿಂದ ಮತ್ತೊಂದು ಎಲೆಕ್ಟ್ರೋಡಿಗೆ (ಕೋಶದಲ್ಲಿ) ಚಲಿಸಿ ಅನಂತರ ಬಾಹ್ಯಮಂಡಲದಲ್ಲಿ ಹರಿಯುವುದರಿಂದ ಬಾಹ್ಯವಿದ್ಯುನ್ಮಂಡಲದಲ್ಲಿ ಉಪಯುಕ್ತ ವಿದ್ಯುತ್ಪ್ರವಾಹ ಉಂಟಾಗುತ್ತದೆ. ಬೀಟಕಣಗಳು ಅಧಿಕಶಕ್ತಿಯ ಎಲೆಕ್ಟ್ರಾನುಗಳಾದ್ದರಿಂದ ಇವನ್ನು ಗ್ರಹಿಸುವ ಎರಡನೆಯ ಎಲೆಕ್ಟ್ರೋಡಿನಿಂದ ದ್ವಿತೀಯಕ ಎಲೆಕ್ಟ್ರಾನುಗಳ ಬಿಡುಗಡೆಯಾಗದಂಥ ವಸ್ತುವನ್ನು ಎಲೆಕ್ಟ್ರೋಡ್ ರಚನೆಯಲ್ಲಿ ಉಪಯೋಗಿಸಬೇಕು.

ಚಿತ್ರ-19

	ಈ ಬಗೆಯ ಕೋಶಗಳನ್ನು ಸ್ಥಿರ ವಿದ್ಯುತ್ಪ್ರವಾಹದ ಉತ್ಪಾದನ ಕೋಶಗಳೆಂದು ಪರಿಗಣಿಸಬಹುದು. ಬೀಟ ಕಣಗ್ರಾಹಕ ಎಲೆಕ್ಟ್ರೋಡನ್ನು ಒಂದು ಸೆಕೆಂಡಿನಲ್ಲಿ ಬಂದು ಸೇರುವ ಕಣಗಳ ಒಟ್ಟು ಸಂಖ್ಯೆ ಕೋಶದ ವಿದ್ಯುತ್ಪ್ರವಾಹವನ್ನು ನಿರ್ಧರಿಸುತ್ತದೆ. ಕೋಶದಿಂದ ದೊರೆಯುವ ವಿದ್ಯುತ್ಪ್ರವಾಹ ಕೋಶದ ಸುತ್ತಲಿನ ವಾತಾವರಣದಿಂದಾಗಲೀ ಅಥವಾ ವಿದ್ಯುತ್ ಪೂರೈಕೆಯ ಮಂಡಲದ ಗುಣದಿಂದಾಗಲೀ ವ್ಯತ್ಯಾಸಗೊಳ್ಳುವುದಿಲ್ಲ. ಈ ದೃಷ್ಟಿಯಲ್ಲಿ ಈ ಬಗೆಯ ಕೋಶಗಳು ವೋಲ್ಟಾ ಮಾದರಿಯ ಕೋಶಗಳಿಗಿಂತ ಹೆಚ್ಚು ಸಮರ್ಪಕವಾಗಿವೆ.  ವಿಕಿರಣಪಟು ಸಮಸ್ಥಾನಿ ಹಳೆಯದಾದಂತೆ ಕೋಶದಿಂದ ದೊರೆಯುವ ವಿದ್ಯತ್ಪ್ರವಾಹ ಕಡಿಮೆಯಾಗುತ್ತದೆ. ಟ್ರಿಟಿಯನ್ನು ಉಪಯೋಗಿಸಿದ ಕೋಶದ ವಿದ್ಯುತ್ಪ್ರವಾಹ 50% ಕಡಿಮೆ ಆಗುತ್ತದೆ. ಸ್ಟ್ರಾನ್‍ಷಿಯಂ-90ನ್ನು ಉಪಯೋಗಿಸಿದ ಕೋಶದ ವಿದ್ಯುತ್ಪ್ರವಾಹ 20 ವರ್ಷಗಳಲ್ಲಿ 50% ಕಡಿಮೆಯಾಗುತ್ತದೆ.
	ಉಷ್ಣವಿದ್ಯುದುತ್ಪ್ರಾಹಕ ಕೋಶ : ಕಡಿಮೆ ವಿಭವವನ್ನು ಉಂಟುಮಾಡುವ ಈ ಕೋಶ ವಿಕಿರಣಪಟುವಸ್ತುವಿನಲ್ಲಿನ ಅಧಿಕ ಉಷ್ಣತೆಯನ್ನು ಉಪಯೋಗಿಸಿಕೊಂಡು ವಿದ್ಯುತ್ತನ್ನು ಉತ್ಪಾದಿಸುತ್ತದೆ. ವಿಭಿನ್ನ ಲೋಹಗಳಿಂದ ತಯಾರಿಸಿದ ಉಷ್ಣಯುಗ್ಮದ (ಥರ್ಮೋಕಪಲ್) ಎರಡು ತುದಿಗಳಲ್ಲಿ ಉಷ್ಣದ ಅಂತರ ಇರುವಂತೆ ಏರ್ಪಡಿಸಿದಾಗ ಉಷ್ಣಯುಗ್ಮದಲ್ಲಿ ವಿದ್ಯುತ್ಪ್ರವಾಹ ಉಂಟಾಗುತ್ತದೆ. ಹೆಚ್ಚಿನ ಉಷ್ಣತೆಯನ್ನು ಪಡೆದಿರುವ ವಿಕಿರಣಪಟು ಸಮಸ್ಥಾನಿ ಮೇಲ್ಮೈ ಮತ್ತು ಕಡಿಮೆ ಉಷ್ಣತೆಯ ಪರಿಸರದ ನಡುವೆ ಉಷ್ಣತೆಯ ಅಂತರವಿರುತ್ತದೆ. ಸಮಸ್ಥಾನಿಯ ಮೇಲ್ಮೈಯಲ್ಲಿ ಉಷ್ಣಯುಗ್ಮಶ್ರೇಣಿಗಳನ್ನು (ಥರ್ಮೋಫೈಲ್) ಸೂಕ್ಷ್ಮವಾಗಿ ಅಳವಡಿಸಿದ ರಚನೆ ಉಪಯುಕ್ತ ವಿದ್ಯುತ್ಪ್ರವಾಹವನ್ನು ಉಂಟುಮಾಡಬಲ್ಲದು. ವಿಕಿರಣಪಟುತ್ವದ ತತ್ತ್ವಗಳ ಲೆಕ್ಕದಂತೆ 0.1" ವ್ಯಾಸದ ಗೋಳಾಕೃತಿಯಲ್ಲಿಟ್ಟ ವಿಕಿರಣಪಟು ಸಮಸ್ಥಾನಿ ಪಲೋನಿಯಂ 210ರ ಮೇಲ್ಮೈಯ ಉಷ್ಣತೆ ಸುಮಾರು 2200ಲಿ ಸೆಂ. ಇರುತ್ತದೆ (ಗೋಳದ ಮೇಲ್ಮೈಯ ಉಷ್ಣವಿಸರಣ ಸಾಮಥ್ರ್ಯ 0.25 ಎಂದು ಭಾವಿಸಿದೆ). ಕೋಶದ ರಚನೆಯಲ್ಲಿ ಸಮಸ್ಥಾನಿಯನ್ನು ಗಾಳಿಹೋಗದಂಥ ಪಾತ್ರೆಯಲ್ಲಿಟ್ಟಾಗ ಅದರ ಉಷ್ಣತೆ 2,200ಲಿ ಸೆಂ.ಗಳಿಗಿಂತ ಕಡಿಮೆ ಇರುತ್ತದೆ. ಕೋಶದೊಳಗಿರಿಸಿದ ವಿಕಿರಣಪಟು ಸಮಸ್ಥಾನಿಯೊಂದಿಗೆ ಮತ್ತು ಹೊರ ವಾತಾವರಣದೊಂದಿಗೆ ಉಷ್ಣಸಂಪರ್ಕ ಪಡೆದಿರುವಂತೆ, ಆದರೆ ವಿದ್ಯುತ್ ಸಂಪರ್ಕ ಪಡೆದಿರುವಂತೆ ಉಷ್ಣಯುಗ್ಮ ಶ್ರೇಣಿಗಳನ್ನಿರಿಸಿರುತ್ತಾರೆ.  ಕೋಶದೊಳಗಿನ ಮತ್ತು ಕೋಶದ ಹೊರಗಿರುವ ಉಷ್ಣಯುಗ್ಮಗಳ ಸಂಧಿಗಳಲ್ಲಿ ಸಮತೋಲಸ್ಥಿತಿ ಉಷ್ಣತೆ (ಈಕ್ವಿಲಿಬ್ರಿಯಂ ಟೆಂಪರೇಚರ್ ಡಿಫರೆನ್ಸ್) ಏರ್ಪಟ್ಟಾಗ ಮಂಡಲದಲ್ಲಿ ವಿದ್ಯುತ್ಪ್ರವಾಹ ಉಂಟಾಗುತ್ತದೆ. ಕೋಶದಿಂದ ದೊರೆಯುವ ವಿಭವ ಉಷ್ಣಯುಗ್ಮದ ತುದಿಗಳಲ್ಲಿನ ಉಷ್ಣತೆಯ ಅಂತರಕ್ಕೆ ಅನುಗುಣವಾಗಿರುತ್ತದೆ. ಕೋಶದೊಳಗಿನ ಉಷ್ಣಜನಕ ವಿಕಿರಣಪಟು ಸಮಸ್ಥಾನಿ ಹಳೆಯದಾದಂತೆ ಕೋಶದಿಂದ ದೊರೆಯುವ ವಿಭವ ಕಡಿಮೆ ಆಗುತ್ತದೆ. ಪಲೋನಿಯಂ-210ರ ಅರ್ಧಾಯು 138 ದಿವಸಗಳು. ಈ ವಸ್ತುವನ್ನು ಉಪಯೋಗಿಸಿದ ಕೋಶದ ವಿಭವ ಪ್ರತಿದಿನವೂ 0.5% ರಷ್ಟು ಕಡಿಮೆಯಾಗುತ್ತದೆ. ಸ್ಟ್ರಾನ್‍ಷಿಯಂ-90ನ್ನು (ಅರ್ಧಾಯು 20 ವರ್ಷಗಳು) ಉಪಯೋಗಿಸಿದ ಕೋಶದ ವಿದ್ಯುತ್ ಪ್ರತಿದಿನ 0.01% ನಷ್ಟು ಕಡಿಮೆಯಾಗುತ್ತದೆ.
	ಅನಿಲ ಅಯಾನೀಕರಣ ನ್ಯೂಕ್ಲಿಯರ್ ಕೋಶ : ಈ ಬಗೆಯ ಕೋಶದಲ್ಲಿ ವಿಕಿರಣಪಟು ಸಮಸ್ಥಾನಿಯಿಂದ ಹೊರಬರುವ ಬೀಟಕಣಗಳು ವಿದ್ಯುತ್ ಕ್ಷೇತ್ರದಲ್ಲಿ ಇಟ್ಟಿರುವ ಅನಿಲದಲ್ಲಿ ಅಯಾನೀಕರಣವನ್ನು (ವಿದ್ಯುದ್ವಿಭಜನೆ) ಉಂಟುಮಾಡುತ್ತವೆ. ಅಯಾನೀಕರಣದಲ್ಲಿ ಸೃಷ್ಟಿಯಾಗುವ ವಿದ್ಯುದ್ವಾಹಿ ಕಣಗಳು, ಮುಖ್ಯವಾಗಿ ಎಲೆಕ್ಟ್ರಾನುಗಳು, ವಿದ್ಯುತ್ ಕ್ಷೇತ್ರದಲ್ಲಿ ಚಲಿಸಿ ಎಲೆಕ್ಟ್ರೋಡುಗಳನ್ನು ಸೇರಿ ಬಾಹ್ಯ ಮಂಡಲದಲ್ಲಿ ಹರಿಯುವುದರಿಂದ ಉಪಯುಕ್ತ ವಿದ್ಯುತ್ಪ್ರವಾಹ ಉಂಟಗುತ್ತದೆ. ವಿದ್ಯುದ್ವಿಭಜನಕ್ರಿಯೆಯಲ್ಲಿ ಪ್ರತಿಯೊಂದು ಬೀಟಕಣದಿಂದಲೂ ಸುಮಾರು 200 ವಿದ್ಯುದ್ವಾಹಿ ಕಣಗಳು ಸೃಷ್ಟಿಯಾಗಿ ವಿದ್ಯುತ್ಪ್ರವಾಹಕ್ಕೆ ಒದಗುತ್ತವೆ. ಈ ರೀತಿಯ ಎಲೆಕ್ಟ್ರಾನ್ ಸಂಖ್ಯಾವರ್ಧನೆಯಿಂದಾಗಿ ಕೋಶ ಬೀಟಕಣಗಳ ವಿದ್ಯುತ್ಪ್ರವಾಹಕ್ಕಿಂತ ಹೆಚ್ಚಿನ ವಿದ್ಯುತ್ಪ್ರವಾಹವನ್ನು ಉಂಟುಮಾಡುತ್ತದೆ. ಭಿನ್ನ ಕಾರ್ಯೋತ್ಪನ್ನಗಳಿರುವ (ವರ್ಕ್ ಫಂಕ್ಷನ್ಸ್) ಎರಡು ಎಲೆಕ್ಟ್ರೋಡುಗಳನ್ನು ಜೋಡಿಸುವುದರಿಂದ ಉಂಟಾಗುವ ಸಂಪರ್ಕವಿಭವಾಂತರ (ಕಾಂಟೇಕ್ಟ್ ಪೊಟೆನ್ಷಿಯಲ್ ಡಿಫರೆನ್ಸ್) ಕೋಶದಲ್ಲಿ ಉಪಯೋಗಿಸುವ ವಿದ್ಯುತ್ ಕ್ಷೇತ್ರವನ್ನು ಒದಗಿಸುತ್ತದೆ. ಪ್ರಾಯೋಗಿಕವಾಗಿ ರಚಿಸಿದ ಕೋಶವೊಂದರಲ್ಲಿ ಹೆಚ್ಚಿನ ಕಾರ್ಯಪರಿಮಾಣದ ಸೀಸದ ಆಕ್ಸೈಡ್ ಮತ್ತು ಕಡಿಮೆ ಕಾರ್ಯಪರಿಮಾಣದ ಮೆಗ್ನೀಸಿಯಂ ಎಲೆಕ್ಟ್ರೋಡುಗಳ ಜೋಡಣೆಯಿಂದುಂಟಾದ ವಿದ್ಯುತ್ ಕ್ಷೇತ್ರದಲ್ಲಿ ಎರಡು ವಾಯುಭಾರದ ಒತ್ತಡದಲ್ಲಿರುವ ಆರ್ಗಾನ್ ಅನಿಲವನ್ನು ಇಡಲಾಗಿತ್ತು. ಕೋಶದ ಗಾತ್ರ 0,91 ಘನ ಇಂಚಿದ್ದು 1.5 ಘಿ 10-3 ಕ್ಯೂರಿ ಪ್ರಮಾಣದ ಟ್ರಿಟಿಯಂ ಸಮಸ್ಥಾನಿಯನ್ನು 0.2 ಚದರ ಇಂಚು ವಿಸ್ತೀರ್ಣದ ತಟ್ಟೆಯ ಮೇಲೆ ಹರಡಿದಂತೆ ಇಡಲಾಗಿತ್ತು. ಈ ಕೋಶ 1.6 ಘಿ  10-9 ಆಂಪಿಯರ್ ವಿದ್ಯುತ್ಪ್ರವಾಹವನ್ನು ಉಂಟುಮಾಡಿದೆ. ಕೋಶದ ವಿಭವ ಅದಕ್ಕೆ ಒದಗಿಸುವ ವಿದ್ಯುತ್ ಕ್ಷೇತ್ರದ ಬಲವನ್ನು ಅವಲಂಬಿಸಿದೆ. ಈ ಕೋಶ ಸಾಧಾರಣವಾಗಿ 1.5 ವೋಲ್ಟ್ ವಿಭವವನ್ನು ಒದಗಿಸಬಲ್ಲದು. ಹೆಚ್ಚಿನ ವಿಭವವನ್ನು ಹಲವಾರು ಕೋಶಗಳ ಜೋಡಣೆಯಿಂದ ಪಡೆಯಬಹುದು.
	ಮಿಣುಕು ದ್ಯುತಿ ವಿದ್ಯುದುತ್ಪಾದಕ ನ್ಯೂಕ್ಲಿಯರ್ ಕೋಶ : ಈ ಕೋಶ ಎರಡು ಹಂತದಲ್ಲಿ ಕೆಲಸಮಾಡುತ್ತದೆ. ಮೊದಲನೆಯದಾಗಿ ವಿಕಿರಣಪಟು ಸಮಸ್ಥಾನಿಯಿಂದ ಹೊರಬರುವ ಬೀಟ ಕಣಗಳ ಶಕ್ತಿ ಬೆಳಕಿನ ಶಕ್ತಿಯಾಗಿ ಪರಿವರ್ತನೆಗೊಳ್ಳುತ್ತದೆ. ಅನಂತರ ಬೆಳಕಿನ ಈ ಶಕ್ತಿಯನ್ನು ಉಪಯೋಗಿಸಿಕೊಂಡು, ಹಿಂದೆ ವಿವರಿಸಿದ ಸೌರಶಕ್ತಿ ಮಾದರಿಯ ಕೋಶ, ವಿದ್ಯುತ್ತನ್ನು ಉತ್ಪಾದಿಸುತ್ತದೆ. ಆದ್ದರಿಂದ ಕೋಶದ ರಚನೆಯಲ್ಲಿ  ಎರಡು ಮುಖ್ಯ ಭಾಗಗಳಿವೆ. 1.ಬೀಟಕಣಗಳ ಶಕ್ತಿಯ ಪರಿವರ್ತನೆಯಿಂದ ಬೆಳಕನ್ನು ಉತ್ಪಾದಿಸುವ ವಸ್ತು-ಮಿಣುಕುವಸ್ತು (ಫಾಸ್ಪರ್). 2.ಬೆಳಕಿನ ವಿದ್ಯುತ್ತನ್ನು ಉತ್ಪಾದಿಸುವ ದ್ಯುತಿ ವಿದ್ಯುದುತ್ಪಾದಕಕೋಶ (ಫೋಟೋವೋಲ್ಟೇಯಿಕ್ ಸೆಲ್). ಕೆಲವು ವಸ್ತುಗಳ ಮೇಲೆ ಬೀಟ ಕಣಗಳು(ಅಥವಾ ಹೆಚ್ಚು ಚಲನಶಕ್ತಿಯ ಎಲೆಕ್ಟ್ರಾನುಗಳು) ಬಿದ್ದಾಗ ವಸ್ತುವಿನ ಪರಮಾಣುಗಳ ಅಂತರಿಕಶಕ್ತಿ ಪರಿವರ್ತನೆಯಿಂದ ಪರಮಾಣುಗಳು ಉದ್ರಿಕ್ತಸ್ಥಿತಿಗೆ (ಎಗ್ಸೈಟೆಡ್ ಸ್ಟೇಟ್) ಬಂದು ಅನಂತರ ಭೂಹಂತಸ್ಥಿತಿಗೆ (ಗ್ರೌಂಡ್ ಸ್ಟೇಟ್) ಬರುವುದರಿಂದ ಬೆಳಕು ಉತ್ಪತ್ತಿಯಾಗುತ್ತದೆ. ಈ ವಸ್ತುಗಳಿಗೆ ಮಿಣುಕು ವಸ್ತುಗಳು (ಸಿಂಟಿಲ್ಲೇಟರ್ಸ್) ಅಥವಾ ಫಾಸ್‍ಫರ್ಸ್ ಎಂದು ಹೆಸರು.                            (ಬಿ.ಎಸ್.ಎನ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ